Site icon Kannada News-suddikshana

ಮೀಸಲಾತಿ ಮೈಲಿಗಲ್ಲಿಗೆ ಕಾರಣರಾದ ಸಿಎಂ, ಜೋಷಿಯವರಿಗೆ ಹೂವಿನ ಅಭಿಷೇಕ: ಶ್ರೀ ವಚನಾನಂದ ಮಹಾಸ್ವಾಮಿಗಳು

SUDDIKSHANA KANNADA NEWS | DAVANAGERE | DATE:25-03-2023

ದಾವಣಗೆರೆ: ಪಂಚಮಸಾಲಿ ಸಮುದಾಯದ ಇತಿಹಾಸದಲ್ಲಿ ಮೀಸಲಾತಿ ನೀಡುವ ಮೂಲಕ ಹೊಸದೊಂದು ಮೈಲಿಗಲ್ಲನ್ನು ನೆಟ್ಟಂತಹ ಮುಖ್ಯಮಂತ್ರಿ ಬಸವರಾಜ (BASAVARAJA) ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ (JOSHI) ಅವರಿಗೆ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಹೂವಿನ ಅಭಿಷೇಕ ಮಾಡುವ ಮೂಲಕ ಸಮುದಾಯದ ಪರವಾಗಿ ಅಭಿನಂದಿಸಿದರು.

ಇಂದು ದಾವಣಗೆರೆ (DAVANAGERE)ಯಲ್ಲಿ ನಡೆದಂತಹ ವಿಜಯಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಪ್ರಧಾನಮಂತ್ರಿಗಳನ್ನ ಬೀಳ್ಕೊಟ್ಟ ನಂತರ ಹರಿಹರ (HARIHARA) ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರೊಂದಿಗೆ ಸ್ವಾಮೀಜಿಗಳು ಸುದೀರ್ಘ ಚರ್ಚೆ ನಡೆಸಿದರು.

ಪಂಚಮಸಾಲಿ ಸಮುದಾಯ ಕಳೆದ ಮೂರು ದಶಕಗಳಿಂದ ಹರಿಹರ ಪಂಚಮಸಾಲಿ ಪೀಠದ ನೇತೃತ್ವದಲ್ಲಿ ನಡೆಸಿದ ಹೋರಾಟಕ್ಕೆ ಯಶಸ್ಸು ದೊರಕಿಸಿ ಕೊಟ್ಟಿದ್ದೀರಿ. ನಮ್ಮ ಸಮುದಾಯದ ಬೇಡಿಕೆ ಇನ್ನಷ್ಟಿತ್ತು. ಆದರೆ, ಮೊದಲ ಹಂತವಾಗಿ ಶೇಕಡಾ 7 ರಷ್ಟು ಮೀಸಲಾತಿ ನೀಡಿದ್ದೀರಿ. ಮುಂದಿನ ದಿನಗಳಲ್ಲಿ ಈ ಮೀಸಲಾತಿ ನಮ್ಮ ಸಮುದಾಯದ ಎಲ್ಲರಿಗೂ ಆದಷ್ಟು ಶೀಘ್ರವಾಗಿ ತಲುಪಬೇಕು ಎನ್ನುವುದು ನಮ್ಮ ಆಶಯವಾಗಿದ್ದು, ಇದಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇವೆ. ಅದೇ ರೀತಿ ಕೇಂದ್ರ ಸರಕಾರ ಓಬಿಸಿ ಪಟ್ಟಿಯಲ್ಲಿ ಪಂಚಮಸಾಲಿಗಳಿಗೆ ಸ್ಥಾನ ದೊರಕಿಸಿಕೊಡುವಂತೆ ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಷಿ (JOSHI)¢ ಅವರಿಗೂ ವಿನಂತಿಸಿದ್ದೇವೆ ಎಂದು ಸ್ವಾಮೀಜಿಗಳು ತಿಳಿಸಿದರು.

Exit mobile version