Site icon Kannada News-suddikshana

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ‘ವಿ.ಸೋಮಣ್ಣ’

ನವದೆಹಲಿ: ನಿನ್ನೆ ಕೇಂದ್ರ ಸಚಿವ ಸಂಪುಟ ಸಭೆಯ ಬಳಿಕ, ತನ್ನ ಸಂಪುಟದ ಸಚಿವರಿಗೆ ಮೋದಿ ಖಾತೆ ಹಂಚಿಕೆ ಮಾಡಿದ್ದರು. ಕರ್ನಾಟಕದ ವಿ.ಸೋಮಣ್ಣ ಅವರಿಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವಸ್ಥಾನ ನೀಡಲಾಗಿತ್ತು. ಇಂತಹ ಖಾತೆಯ ಅಧಿಕಾರವನ್ನು ಇಂದು ವಹಿಸಿಕೊಂಡರು.

ಮೋದಿ 3.0 ಸಚಿವ ಸಂಪುಟ ಸೇರಿದಂತೆ ಕರ್ನಾಟಕದ ಐವರಿಗೆ ಖಾತೆ ಹಂಚಿಕೆ ಮಾಡಲಾಗಿತ್ತು.

ಹೆಚ್.ಡಿ ಕುಮಾರಸ್ವಾಮಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ನೀಡಿದ್ದರೇ, ನಿರ್ಮಲಾ ಸೀತಾರಾಮನ್ ಗೆ ಹಣಕಾಸು ಖಾತೆ, ಶೋಭಾ ಕರಂದ್ಲಾಜೆಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಾಜ್ಯ ಖಾತೆ ಮತ್ತು ಕಾರ್ಮಿಕ ಇಲಾಖೆ ರಾಜ್ಯಖಾತೆ ನೀಡಲಾಗಿತ್ತು.

ವಿ.ಸೋಮಣ್ಣ ಅವರಿಗೆ ಜಲಶಕ್ತಿ ರಾಜ್ಯಖಾತೆ ಹಾಗೂ ರೈಲ್ವೆ ಸಚಿವ ರಾಜ್ಯಖಾತೆಯನ್ನು ಹಂಚಿಕೆ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಅವರು ನವದೆಹಲಿಯ ಕಚೇರಿಗೆ ತೆರಳಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ವಿ.ಸೋಮಣ್ಣ ಅಧಿಕಾರ ವಹಿಸಿಕೊಂಡರು.

Exit mobile version