Site icon Kannada News-suddikshana

Davanagere Sp Uma Prashanth:ಡಾ. ಕೆ. ಅರುಣ್ ವರ್ಗಾವಣೆ: ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಲೇಡಿ ಸಿಂಗಂ ಖ್ಯಾತಿಯ ಉಮಾ ಪ್ರಶಾಂತ್

SUDDIKSHANA KANNADA NEWS/ DAVANAGERE/ DATE:22-08-2023

ದಾವಣಗೆರೆ: ಖಡಕ್ ಎಸ್ಪಿ ಎಂದೇ ಕರೆಯಲ್ಪಟ್ಟಿದ್ದ ಡಾ. ಕೆ. ಅರುಣ್ ಅವರನ್ನು ಕೊನೆಗೂ ವರ್ಗಾವಣೆ ಮಾಡಲಾಗಿದ್ದು, ದಾವಣಗೆರೆ (Davanagere) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಉಮಾ ಪ್ರಶಾಂತ್ ಅವರನ್ನು ನಿಯೋಜಿಸಿ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

ಕಳೆದ ಕೆಲವು ದಿನಗಳಿಂದಲೂ ದಕ್ಷ ಅಧಿಕಾರಿಯಾಗಿದ್ದ ಡಾ. ಕೆ. ಅರುಣ್ ವರ್ಗಾವಣೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಕಾಂಗ್ರೆಸ್ ನ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ಮೇಲೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ವರ್ಗಾವಣೆಗೊಳಿಸಲಾಗಿತ್ತು ಎಂದು ಹೇಳಲಾಗುತಿತ್ತು. ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರೇ ದಕ್ಷ ಅಧಿಕಾರಿಗಳು ಬೇಕು, ಇಂಥ ಅಧಿಕಾರಿಗಳಿದ್ದರೆ ರಾಜಕಾರಣಿಗಳಿಗೂ ಒಳ್ಳೆಯದು ಎಂದಿದ್ದರು. ಆದರೆ ಈ ಮಾತು ಹೇಳಿದ ಮಾರನೇ ದಿನವೇ ವರ್ಗಾವಣೆ ಆದೇಶ ಬಂದಿತ್ತು.

READ ALSO THIS STORY:

Parrots Problem: ಘೀಳಿಟ್ಟು ಬರುತ್ತಿದೆ ಲಕ್ಷಾಂತರ ಗಿಳಿಗಳ ಹಿಂಡು: “ಈ ಪ್ರದೇಶಗಳಿಗೆ” ಬಂದು ಮೆಕ್ಕೆಜೋಳ ನಾಶಪಡಿಸುವುದ್ಯಾಕೆ..? ಕಾಳು ಕುಕ್ಕಿ ತಿನ್ನುವ ಗಿಳಿಗಳಿಂದ ಹಿಂಡುತ್ತಿದೆ ರೈತರ ಕರುಳು…!

ಮಂಗಳೂರಿನಲ್ಲಿ ಉಪ ಪೊಲೀಸ್ ಆಯುಕ್ತ (ಅಪರಾಧ) ಉಮಾ ಪ್ರಶಾಂತ್ ಅವರನ್ನು ನಗರದ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವರ್ಗಾವಣೆ ಮಾಡಲಾಗಿತ್ತು. ಆಗ ಅವರ ಕಾರ್ಯವೈಖರಿಯಿಂದ ಟಫ್ ಪೊಲೀಸ್ ಅಥವಾ ಲೇಡಿ ಸಿಂಗಂ ಎಂದು ಕರೆಯಲಾಗುತಿತ್ತು. ಚಿಕ್ಕಮಗಳೂರಿನಲ್ಲಿಯೂ ಟಫ್ ಕಾಪ್ ಉಮಾ ಪ್ರಶಾಂತ್ ಖ್ಯಾತಿ ಗಳಿಸಿದ್ದಾರೆ.

ಈ ಹಿಂದೆ ಕುಣಿಗಲ್, ಕಾರವಾರ, ಮಂಗಳೂರಿನಲ್ಲಿ ಕಾರ್ಯನಿರ್ವಹಿಸಿದ್ದ ಅವರು, ಚಿಕ್ಕಮಗಳೂರಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡಿದ್ದರು. ಈಗ ದಾವಣಗೆರೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

ಚಿಕ್ಕಮಗಳೂರಿನಲ್ಲಿ ಬಿಗಿ:

ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಿದ್ದ ಉಮಾ ಪ್ರಶಾಂತ್ ಅವರು ಅಪರಾಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. ಟ್ರಾಫಿಕ್ ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು.
ಚಿಕ್ಕಮಗಳೂರಿನಲ್ಲಿ ಕಾರ್ಯವೈಖರಿಯಿಂದಲೇ ಜನರ ಮನಸ್ಸು ಗೆದ್ದಿದ್ದರು. ಈಗ ದಾವಣಗೆರೆಗೆ ನಿಯೋಜನೆ ಮಾಡಲಾಗಿದೆ.

ಶಾಲಾ ಬಸ್ಸುಗಳಲ್ಲಿ ಶಾಲಾ ಮಕ್ಕಳ ಸುರಕ್ಷತೆ ಹಾಗೂ ಶಾಲಾ ಬಸ್ಸುಗಳು ಸಂಚಾರಿ ನಿಯಮಗಳ ಪಾಲನೆ ಮತ್ತು ನಿರ್ವಹಣೆ ಕುರಿತು ವಿಶೇಷ ಕಾಳಜಿ ವಹಿಸಿದ್ದ ಉಮಾ ಪ್ರಶಾಂತ್ ಅವರು ಶಾಲಾ, ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರೊಂದಿಗೆ ಸಭೆ ನಡೆಸಿ ಖಡಕ್ ಸೂಚನೆಗಳನ್ನು ಕೊಟ್ಟಿದ್ದರು.

ಇನ್ನು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬರುತ್ತಿರುವ ಉಮಾ ಪ್ರಶಾಂತ್ ಅವರ ಕಾರ್ಯವೈಖರಿ ಇಲ್ಲಿ ಹೇಗೆ ಇರಲಿದೆ ಎಂಬ ಕುತೂಹಲ ಕೆರಳಿಸಿದೆ.

Exit mobile version