Site icon Kannada News-suddikshana

ಹೊಸ ವರ್ಷದಂದೇ ಬೈಕ್​ಗೆ ವಾಹನ ಡಿಕ್ಕಿ, ಜೀವ ಬಿಟ್ಟ ಇಬ್ಬರು..

ವಿಜಯಪುರ: ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಜೀವ ಬಿಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನಾಗೋಡ ಕ್ರಾಸ್ ಬಳಿ ನಡೆದಿದೆ.

ಘಟನೆಯಲ್ಲಿ ಜೀವ ಕಳೆದುಕೊಂಡವರನ್ನು ತುಷಾರ್ ಜಾಧವ್, ಸಂತೋಷ ಹಿಂಗೋಲಿ ಎಂದು ಗುರುತಿಸಲಾಗಿದೆ. ಇವರು ಕೆಲಸದ ನಿಮಿತ್ತ ಬೈಕ್​ನಲ್ಲಿ ಹೋಗುತ್ತಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಬಂದ ಮತ್ತೊಂದು ವಾಹನ ಬೈಕ್​​ಗೆ ಭಯಾನಕವಾಗಿ ಡಿಕ್ಕಿ ಹೊಡೆದಿದೆ. ಇದರಿಂದ ಇಬ್ಬರು ಪ್ರಾಣ ಬಿಟ್ಟಿದ್ದಾರೆ. ಇನ್ನು ಈ ಸಂಬಂಧ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಡಿಕ್ಕಿ ಮಾಡಿಕೊಂಡು ಹೋಗಿರುವ ವಾಹನಕ್ಕಾಗಿ ತನಿಖೆ ಮಾಡಲಾಗುತ್ತಿದೆ.

Exit mobile version