Site icon Kannada News-suddikshana

ಕಾಮಿಡಿ ಕಿಲಾಡಿ, ನಟ ಮಡೆನೂರು ಮನು ಅತ್ಯಾಚಾರ ಕೇಸ್ ಗೆ ಟ್ವಿಸ್ಟ್: ಹೊರಬಿದ್ದ ಸ್ಫೋಟಕ ವಿಚಾರವೇನು?

SUDDIKSHANA KANNADA NEWS/ DAVANAGERE/ DATE-22-05-2025

ಬೆಂಗಳೂರು: ಕನ್ನಡದ ಖ್ಯಾತ ಖಾಸಗಿ ವಾಹಿನಿಯ ಕಾಮಿಡಿ ಕಿಲಾಡಿ ಶೋ ಮೂಲಕ ಇಡೀ ರಾಜ್ಯದ ಮನೆ ಮನೆ ಮಾತಾಗಿದ್ದ ಮಡೆನೂರು ಮನು ಈಗ ಪೊಲೀಸರ ಅತಿಥಿಯಾಗಿದ್ದಾನೆ. ತನ್ನ ಹಾಸ್ಯ ನಟನೆಯೊಂದಿಗೆ ಕೋಟ್ಯಂತರ ಜನರ ಮನ ಗೆದ್ದಿದ್ದ ಈ ನಟನ ಹಾಸ್ಯಕ್ಕೆ ಜನರು ಬಿದ್ದು ಬಿದ್ದು ನಕ್ಕು ಹಗುರಾಗುತ್ತಿದ್ದರು. ಆದ್ರೆ, ಈಗ ಈ ನಟನ ವಿರುದ್ಧ ಕೇಳಿ ಬಂದಿರುವ ಆರೋಪ ಅಭಿಮಾನಿಗಳಿಗೆ ಅಷ್ಟೇ ಅಲ್ಲ, ಎಲ್ಲರಿಗೂ ಶಾಕ್ ನೀಡಿದೆ.

ಪ್ರಮುಖವಾಗಿ ಮಡೆನೂರು ಮನು ಅತ್ಯಾಚಾರ ಎಸಗಿರುವುದು ಬೇರೆ ಯಾರೂ ಅಲ್ಲ. ಅವನೊಟ್ಟಿಗೆ ಕಾಮಿಡಿ ಕಿಲಾಡಿಗಳು ಶೋ ಸೇರಿದಂತೆ ವಿವಿಧ ಚಾನೆಲ್ ಗಳಲ್ಲಿನ ಶೋಗಳಲ್ಲಿ ಭಾಗವಹಿಸಿ ಮನ ಗೆದ್ದಿದ್ದ ಮತ್ತೊಬ್ಬಳು ಕಾಮಿಡಿ ಕಿಲಾಡಿ ಆಕೆ.

ಖ್ಯಾತ ಕಿರುತೆರೆ ನಟ ಮಡೆನೂರು ಮನು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಮಾಡಿದ್ದು, ಮಾತ್ರವಲ್ಲ, ಮದ್ಯ ಕುಡಿಸಿ ಪದೇ ಪದೇ ಅತ್ಯಾಚಾರ ಎಸಗಿದ್ದಲ್ಲದೇ, ಖಾಸಗಿ ವಿಡಿಯೋ ಮಾಡಿಕೊಂಡು ಬೆದರಿಕೆ ಹಾಕುತ್ತಿದ್ದ ಎಂಬ ಆರೋಪವೂ ಕೇಳಿ ಬಂದಿರುವುದು ಆಶ್ಚರ್ಯದ ಜೊತೆಗೆ ಮಡೆನೂರು ಮನುವಿನ ಮನಸ್ಸಿನಲ್ಲಿ ಇಂಥದ್ದೊಂದು ವಿಕೃತಿ, ಪೈಶಾಚಿಕತೆ ಇತ್ತಾ ಎಂಬುದು ಚರ್ಚಿತ ವಿಚಾರ. ಹಾಸನದ ಶಾಂತಿಗ್ರಾಮದ ಮಡೆನೂರು ನಲ್ಲಿ ಅರೆಸ್ಟ್ ಮಾಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮಡೆನೂರು ಮನು ಪದೇ ಪದೇ ನನ್ನ ಮೇಲೆ ರೇಪ್ ಮಾಡಿದ್ದಾನೆ. ಮಾತ್ರವಲ್ಲ, ಯಾರಿಗೂ ತಿಳಿಸಬೇಡಿ ಎಂದು ಗೋಗೆರೆದಿದ್ದಾನೆ. ಜೊತೆಗೆ ನನಗೆ ತಾಳಿ ಕಟ್ಟಿದ್ದಾನೆ. ಕಳೆದ ಮೂರು ವರ್ಷಗಳಿಂದ ಮನು ನನಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕಳೆದ ಶ‌ನಿವಾರ ನನ್ನ ಮನೆಗೆ ಬಂದು ನನಗೆ ಲೈಂಗಿಕ ದೌರ್ಜನ್ಯ ಎಸಗಿದ್ದು, ನನಗೆ ಪ್ರಜ್ಞೆ ಇಲ್ಲದಂತಹ ವೇಳೆ ಏನೇನೋ ವಿಡಿಯೋ ಮಾಡಿಕೊಂಡು ಕಿರುಕುಳ, ಮಾನಸಿಕವಾಗಿ ಕಿರುಕುಳ, ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ. ಕುಲದಲ್ಲಿ ಕೀಳ್ಯಾವುದೋ ಸಿನಿಮಾಕ್ಕೆ ಲಕ್ಷಾಂತರ ರೂಪಾಯಿ ನೀಡಿದ್ದೇನೆ. ಆತ ಹಣ ಪಡೆದು ಮೋಸ ಮಾಡಿದ್ದಾನೆ ಎಂದು ಪರಿಪರಿಯಾಗಿ ಸಂತ್ರಸ್ತೆ ಮಡೆನೂರು ಮನು ಕರಾಳತೆ ಬಿಚ್ಚಿಟ್ಟಿದ್ದಾರೆ.

ನಿನ್ನ ಜೊತೆ ಹದಿನೈದು ದಿನ, ಪತ್ನಿಯೊಂದಿಗೆ ಹದಿನೈದು ದಿನ ಇರುತ್ತೇನೆ. ನನ್ನ ತಂದೆಗೂ ಇಬ್ಬರು ಹೆಂಡ್ತಿಯರು. ನನಗೆ ಇಬ್ಬರು ಪತ್ನಿಯರನ್ನು ಕೊಟ್ಟಿರುವುದು ದೇವರು. ಸಿನಿಮಾ ಸಿಕ್ಕ ಮೇಲೆ ಸ್ವಲ್ಪ ಬ್ಯುಸಿ ಇದ್ದೀನಿ ಅಂತ ಎರಡು ದಿನ ಮಾತ್ರ
ಬರ್ತಿನಿ ಎಂದಿದ್ದ. ಅವನು ಸಿನಿಮಾಗಾಗಿ ಜಿಮ್ ಸೇರಿದಾಗ ನಾನು ಅವನಿಗೆ ಲಕ್ಷಾಂತರ ರೂ ಕೊಟ್ಟಿದ್ದೀನಿ. ಅವನಿಗೆ ಸಿನಿಮಾ ಸಿಕ್ಕ ನಂತ್ರ ಸಂಪೂರ್ಣ ಬದಲಾದ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ನಾನು ಹೀರೋ ಆಗಿ ಇನ್ನು ಐವತ್ತು ಸಿನಿಮಾ ಮಾಡಬೇಕು. ನನಗೆ ಮಗಳಿದ್ದಾಳೆ ನನ್ನ ಹೆಂಡ್ತಿ ಒಪ್ಪಲ್ಲ ಬ್ರೇಕ್ ಅಪ್ ಮಾಡ್ಕೋ ಅಂದ. ನಾನು ಆಗಲ್ಲ ಅಂದಿದ್ದಕ್ಕೆ ನನಗೆ ಬೆದರಿಕೆ ಹಾಕಿದ್ದ. ನಾನು ಅವನಿಗೆ ಹೇಳಿನೇ ಪೊಲೀಸ್ ಸ್ಟೇಷನ್‌ನಲ್ಲಿ
ದೂರು ಕೊಟ್ಟೆ. ಆತ ಮಧ್ಯಾಹ್ನ ವಿಡಿಯೋದಲ್ಲಿ ಮಾಡಿರೋ ಅರೋಪ ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.

Exit mobile version