ದಾವಣಗೆರೆ: ತಾಲೂಕಿನ ತುರ್ಚಗಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಲಕ್ಷ್ಮಿ ಯಲ್ಲಮ್ಮ ದೇವಸ್ಥಾನದ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಶಾರೋಹಣ ಮಹೋತ್ಸವವು ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿತು.
ಪೂರ್ಣಕುಂಭದೊಂದಿಗೆ ಭವ್ಯ ಮೆರವಣಿಗೆ:
ಧಾರ್ಮಿಕ ವಿಧಿವಿಧಾನಗಳ ಅಂಗವಾಗಿ ಗ್ರಾಮದ ಮಹಿಳೆಯರು ಪೂರ್ಣಕುಂಭದೊಂದಿಗೆ ಭವ್ಯ ಮೆರವಣಿಗೆ ನಡೆಸಿ ಗಮನ ಸೆಳೆದರು. ದೇವಸ್ಥಾನಕ್ಕೆ ವಿವಿಧ ಪುಷ್ಪಗಳ ಅಲಂಕಾರ ಮಾಡಲಾಗಿದ್ದು, ಹೋಮ-ಹವನಗಳ ಮೂಲಕ ಮಂತ್ರಘೋಷಗಳು ಮೊಳಗಿದವು.
ಸಾವಿರಾರು ಭಕ್ತಾದಿಗಳಿಗೆ ಅನ್ನದಾಸೋಹ:
ಕಳೆದ ಎರಡು ದಿನಗಳಿಂದ ದೇವಸ್ಥಾನಕ್ಕೆ ಭೇಟಿ ನೀಡಿದ ಸಾವಿರಾರು ಭಕ್ತಾದಿಗಳಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ದೇವಿ ಕೃಪೆಗೆ ಪಾತ್ರರಾದ ಭಕ್ತರು:
ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.





Leave a comment