Site icon Kannada News-suddikshana

ದಾವಣಗೆರೆ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣ ಬಾಡಿಗೆ ದರ ಪರಿಷ್ಕರಣೆ

ದಾವಣಗೆರೆ

SUDDIKSHANA KANNADA NEWS/DAVANAGERE/DATE:14_10_2025

ದಾವಣಗೆರೆ: ಜಿಲ್ಲಾಡಳಿತ ಭವನದಲ್ಲಿನ ತುಂಗಭದ್ರ ಸಭಾಂಗಣದ ನಿರ್ವಹಣೆಗಾಗಿ ಬಾಡಿಗೆ ದರವನ್ನು ರೂ.3000 ದಿಂದ ರೂ.10,000 ಕ್ಕೆ ಹೆಚ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.

READ ALSO THIS STORY: ಡೊನಾಲ್ಡ್ ಟ್ರಂಪ್ ಊಸರವಳ್ಳಿ ಆಟ: ಒಮ್ಮೆ ಪಾಕ್ ಪ್ರಧಾನಿ, ಮುನೀರ್ ಹೊಗಳಿಕೆ, ಮಗದೊಮ್ಮೆ ಮೋದಿಗೆ ಶಹಬ್ಬಾಸ್ ಗಿರಿ!

ಜಿಲ್ಲಾಡಳಿತ ಭವನದಲ್ಲಿನ ತುಂಗಭದ್ರಾ ಸಭಾಂಗಣವನ್ನು ದುರಸ್ಥಿಪಡಿಸಲಾಗಿದೆ. ಹಿಂದೆ ನಿಗದಿಪಡಿಸಿರುವ ಬಾಡಿಗೆ ಮೊತ್ತ ಅತೀ ಕಡಿಮೆಯಾಗಿದ್ದು, ಇದರ ವಿದ್ಯುತ್ ವೆಚ್ಚ ಸೇರಿದಂತೆ ಇತರೆ ವೆಚ್ಚಗಳ ನಿರ್ವಹಣೆಗಾಗಿ ದರಪರಿಷ್ಕರಣೆ ಮಾಡಲಾಗಿದೆ.

ಆದ್ದರಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಕಂದಾಯ ಇಲಾಖೆ ಹೊರತುಪಡಿಸಿ, ಇನ್ನುಳಿದ ಸರ್ಕಾರಿ, ಅರೆ ಸರ್ಕಾರಿ ಇಲಾಖೆ, ಸಂಘ-ಸಂಸ್ಥೆ, ಮಂಡಳಿ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಗೆ ದಿನದ ಬಾಡಿಗೆ ಮೊತ್ತ ರೂ.10 ಸಾವಿರ ನಿಗಧಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Exit mobile version