ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜಪಾನ್ ಪ್ರಧಾನಿ ಸನಾ ಎ ಟಕೈಚಿ ನಡುವಿನ ಶೃಂಗಸಭೆಯು ಹಾಸ್ಯ ಮತ್ತು ಉದ್ವಿಗ್ನತೆಯ ಮಿಶ್ರಣಕ್ಕೆ ಸಾಕ್ಷಿಯಾಯಿತು.
ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಅವರು ಟಕೈಚಿ ಅವರ ಇಂಗ್ಲಿಷ್ ಭಾಷಾ ಪ್ರಾವೀಣ್ಯತೆಯನ್ನು ಹೊಗಳುವ ಮೂಲಕ ಮಾತು ಆರಂಭಿಸಿದರು. ಆದರೆ, ಇರಾನ್ ಮೇಲಿನ ದಾಳಿಯ ಬಗ್ಗೆ ಮಿತ್ರರಾಷ್ಟ್ರಗಳಿಗೆ ಏಕೆ ಮಾಹಿತಿ ನೀಡಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸುವಾಗ, ಟ್ರಂಪ್ 1941ರ ಪರ್ಲ್ ಹಾರ್ಬರ್ ದಾಳಿಯನ್ನು ಪ್ರಸ್ತಾಪಿಸಿದರು.
“ಸರ್ಪ್ರೈಸ್ (ಅನಿರೀಕ್ಷಿತ ದಾಳಿ) ಬಗ್ಗೆ ಜಪಾನ್ಗಿಂತ ಚೆನ್ನಾಗಿ ಯಾರಿಗೆ ಗೊತ್ತು?” ಎಂದು ಹೇಳುತ್ತಾ, “ನನಗೆ ಪರ್ಲ್ ಹಾರ್ಬರ್ ಬಗ್ಗೆ ಏಕೆ ಹೇಳಲಿಲ್ಲ?” ಎಂದು ಟಕೈಚಿ ಅವರಿಗೆ ತಮಾಷೆಯಾಗಿ ಕೇಳಿದರು.
ಈ ಮಾತಿನಿಂದ ಜಪಾನ್ ಪ್ರಧಾನಿ ತೀವ್ರ ಮುಜುಗರಕ್ಕೊಳಗಾದರು ಮತ್ತು ವೇದಿಕೆಯ ಮೇಲೆ ಅಸಹಜವಾಗಿ ವರ್ತಿಸಿದರು. ಐತಿಹಾಸಿಕವಾಗಿ ಅತ್ಯಂತ ಸೂಕ್ಷ್ಮವಾಗಿರುವ ಈ ವಿಷಯವನ್ನು ರಾಜತಾಂತ್ರಿಕ ಸಭೆಯಲ್ಲಿ ಪ್ರಸ್ತಾಪಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.





Leave a comment