Site icon Kannada News-suddikshana

ಆಕ್ಸಿಡೆಂಟ್ ವೇಳೆ ಪೊಲೀಸರಿಗೆ ಮಾಹಿತಿ ನೀಡಿ ರೋಗಿಗಳಿಗೆ ಚಿಕಿತ್ಸೆ ದೊರಕುವಂತೆ ಮಾಡಿದ ಪತ್ರಕರ್ತ ಸಂಜಯ್ ಎ. ಪಿ.ಗೆ ಸನ್ಮಾನ

SUDDIKSHANA KANNADA NEWS/ DAVANAGERE/ DATE:29-01-2025

ದಾವಣಗೆರೆ: ರಾಷ್ಟ್ರೀಯ ರಸ್ತೆ ಸುರಕ್ಷಾ ಮಾಸಾಚರಣೆಯ ಸಮಾರೋಪ ಸಮಾರಂಭ ದಾವಣಗೆರೆಯಲ್ಲಿ ನಡೆಯಿತು.

ಸಂಚಾರ ನಿಯಮ ಪಾಲಿಸಿ ರಸ್ತೆ ಅಪಘಾತ ತಪ್ಪಿಸಿ ಎಂಬ ಘೋಷಣೆ ಮೂಲಕ ರಸ್ತೆ ಸುರಕ್ಷತಾ ಅಭಿಯಾನ ನಡೆಯಿತು. ಟ್ರಾಫಿಕ್ ರೂಲ್ಸ್ ಬಗ್ಗೆ ಮತ್ತು ಅವುಗಳ ಪಾಲನೆ ಬಗ್ಗೆ ಎಸ್ಪಿ ಉಮಾ ಪ್ರಶಾಂತ ತಿಳಿಸಿದ್ರು.

ಜನರ ತಮ್ಮ ಜೀವ ಉಳಿಸಿಕೊಳ್ಳಲು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಅತಿ ವೇಗವಾಗಿ, ಪಾನಮತ್ತರಾಗಿ ವಾಹನ ಓಡಿಸದಂತೆ ಮನವಿ ಮಾಡಿದ್ರು. ಕಳೆದ ಕೆಲ ದಿನಗಳಿಂದ ರಸ್ತೆ ಸುರಕ್ಷಾ ಮಾಸಾಚರಣೆ ಜಿಲ್ಲಾ ಪೊಲೀಸ್ ಇಲಾಖೆ ಮಾಡುತ್ತಾ ಬಂದಿದ್ದು ಇಂದು ಸಮಾರೋಪ ಕಾರ್ಯಕ್ರಮ ನಡೆಯಿತು.

ಅಪಘಾತ ವೇಳೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಮತ್ತು ಅಪಘಾತದಿಂದ ಗಾಯಗೊಂಡವರಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗುವಂತೆ ಮಾಡಿದ ಮತ್ತು ಪೊಲೀಸ್ ಇಲಾಖೆಗೆ ಸಹಕರಿಸಿದ ನ್ಯೂಸ್ 18 ದಾವಣಗೆರೆ ಜಿಲ್ಲಾ ವರದಿಗಾರ ಸಂಜಯ್ ಎ. ಪಿ. ಅವರಿಗೆ ಈ ವೇಳೆ ಸನ್ಮಾನಿಸಿ ಅಭಿನಂದಿಸಲಾಯಿತು.

ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇತರೆ ಇಲಾಖೆ ಅಧಿಕಾರಿಗಳು ಕೂಡ ಭಾಗಿಯಾಗಿದ್ರು.

Exit mobile version