ದಾವಣಗೆರೆ ಜಿಲ್ಲಾ ಬಿಜೆಪಿಯಿಂದ ಎಸ್. ಎ. ರವೀಂದ್ರನಾಥ್, ಕೆ. ಬಿ. ಶಂಕರನಾರಾಯಣ, ಜೆ. ಸೋಮನಾಥರಿಗೆ ಗೌರವ ಸಮರ್ಪಣೆ

SUDDIKSHANA KANNADA NEWS/ DAVANAGERE/ DATE:12-02-2025

ದಾವಣಗೆರೆ: ಜಿಲ್ಲಾ ಬಿಜೆಪಿ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ವರ್ಷಾಚರಣೆಯ ಅಂಗವಾಗಿ ಬಿಜೆಪಿ ಹಿರಿಯ ನಾಯಕರ ಗೌರವ ಸಮರ್ಪಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಭಾರತೀಯ ಜನಸಂಘ, ಹಾಗೂ ಬಿಜೆಪಿಯ ಅಖಂಡ ಚಿತ್ರದುರ್ಗ ಜಿಲ್ಲೆ ಹಾಗೂ ದಾವಣಗೆರೆ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ, ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರಿಗೆ ಅಟಲ್ ಜಿ ಶತಮಾನೋತ್ಸವ ಸಮಿತಿ ಹಾಗೂ ಜಿಲ್ಲಾ ಬಿಜೆಪಿಯ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅಟಲ್ ಜಿ ಶತಮಾನೋತ್ಸವ ವರ್ಷಾಚರಣೆಯ ರಾಜ್ಯ ಪ್ರಮುಖರಾದ, ಮಾಜಿ ವಿಧಾನ ಪರಿಷತ್ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಜಿಲ್ಲಾ ಬಿಜೆಪಿಯ ಅಧ್ಯಕ್ಷ ಎನ್. ರಾಜಶೇಖರ್ ನಾಗಪ್ಪ, ಮಾಜಿ ಶಾಸಕ ಎಂ. ಬಸವರಾಜ ನಾಯ್ಕ, ದೂಡಾ ಮಾಜಿ ಅಧ್ಯಕ್ಷ ಕೆ.ಎಂ. ಸುರೇಶ್, ಅಟಲ್ ಜಿ ಶತಮಾನೋತ್ಸವ ಜಿಲ್ಲಾ ಸಮಿತಿಯ ಪ್ರಮುಖ ಎಲ್. ಎನ್. ಕಲ್ಲೇಶ್, ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೆಬಾಳು, ಐರಣಿ ಅಣ್ಣೇಶ್, ಜಿಲ್ಲಾ ಬಿಜೆಪಿಯ ಮಾಧ್ಯಮ ಪ್ರಮುಖ ಎಚ್. ಪಿ. ವಿಶ್ವಾಸ್, ಜಿಲ್ಲಾ ಸಾಮಾಜಿಕ ಜಾಲತಾಣದ ಪ್ರಮುಖ ಕೊಟ್ರೇಶ ಗೌಡ, ಮಾಜಿ ಮೇಯರ್ ಎಂ. ಎಸ್. ವಿಠ್ಠಲ್ ಹಾಗೂ ಇತರರು ಇದ್ದರು.

ಈ ಸಂದರ್ಭದಲ್ಲಿ ರವೀಂದ್ರನಾಥ್ ಅವರು ಅಟಲ್ ಜಿ ಯವರ ಒಡನಾಟದ ನೆನಪುಗಳನ್ನು ಮಾಡಿಕೊಂಡರು. ಇದೇ ರೀತಿ ಪಕ್ಷದ ಹಿರಿಯ ನಾಯಕರಾಗಿದ್ದ ಕೆ. ಬಿ. ಶಂಕರನಾರಾಯಣ, ಜೆ. ಸೋಮನಾಥ್ ಅವರಿಗೂ ಅವರ ಮನೆಗಳಿಗೆ ತೆರಳಿ ಪಕ್ಷದ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು.

Comments

Leave a Reply

Your email address will not be published. Required fields are marked *