SUDDIKSHANA KANNADA NEWS/DAVANAGERE/DATE:18_12_2025
ಬೆಂಗಳೂರು: ಸಾರಿಗೆ ಇಲಾಖೆ ಕುಬೇರನ ಖಜಾನೆಯಂತೆ ‘ಲಾಭ’ದಲ್ಲಿದೆ ಎಂದು ಶತಮಾನದ ಅತಿದೊಡ್ಡ ಜೋಕ್ ಮಾಡುವ ಸಚಿವ ರಾಮಲಿಂಗಾ ರೆಡ್ಡಿ ಅವರೇ, ಸರ್ಕಾರ ಸಾರಿಗೆ ನಿಗಮಗಳಿಗೆ ಕೊಡಬೇಕಿರುವ 4006 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದು ಏಕೆ? ತಮ್ಮ ಅಧಿಕಾರದ ಅಮಲಿಗೆ ಸಾರಿಗೆ ನಿಗಮಗಳು ಅಳಿವಿನಂಚಿನಲ್ಲಿವೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಸಾರಿಗೆ ನಿಗಮಗಳು ದಿವಾಳಿ ಅಂಚಿನಲ್ಲಿವೆ, ಸಾರಿಗೆ ಇಲಾಖೆಯ ನಿವೃತ್ತ ನೌಕರರಿಗೆ ಪಿಂಚಣಿ ಇಲ್ಲದಾಗಿದೆ, ಸಮರ್ಪಕ ಸಂಬಳವನ್ನು ನೌಕರರು ಕಾಣದಂತಾಗಿದೆ, ‘ಶಕ್ತಿ’ ಹೊಡೆತಕ್ಕೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ ಎಂದು ತಿಳಿಸಿದೆ.
ಬಾಕಿ ಹಣ ಬಾರದೆ ನಿಗಮಗಳು ತತ್ತರಿಸುತ್ತಿವೆ, ಸರಿಯಾದ ಸಮಯಕ್ಕೆ ಬಸ್ಸುಗಳಿಲ್ಲದೆ ಜನರು ಶಪಿಸುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಸುಳ್ಳಿನ ಬಸ್‌ಗೆ ಕನ್ನಡಿಗರು ಬ್ರೇಕ್ ಹಾಕುವ ಕಾಲ ಹತ್ತಿರ ಬಂದಿದೆ. ಸಚಿವ ರಾಮಲಿಂಗಾರೆಡ್ಡಿ ಅವರೇ, ನಿಮ್ಮ ಸುಳ್ಳಿನ ಕೋಟೆ ಇನ್ನೂ ಬಹಳ ದಿನ ಉಳಿಯುವುದಿಲ್ಲ.! ಎಂದು ಕಿಡಿಕಾರಿದೆ.





Leave a comment