Site icon Kannada News-suddikshana

ಕಡಬ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು..!

ಕಡಬ : ರೈಲು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಎಡಮಂಗಲ ರೈಲು ನಿಲ್ದಾಣ ಸಮೀಪ ಶನಿವಾರ ಸಂಜೆ ನಡೆದಿದೆ.

ಮೃತ ವ್ಯಕ್ತಿಯನ್ನು ಎಡಮಂಗಲ ಗ್ರಾಮದ ಡೆಕ್ಕಳ ನಿವಾಸಿ ಮಹಾಲಿಂಗ ನಾಯ್ಕ್(60) ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ವೇಳೆಗೆ ರೈಲ್ವೇ ಹಳಿಯಲ್ಲಿ ಮಹಾಲಿಂಗ ನಾಯ್ಕರು ನಡೆದುಕೊಂಡು ಹೋಗುತ್ತಿದ್ದ ವೇಳೆ ರೈಲು ಢಿಕ್ಕಿಯಾಗಿರಬಹುದೆಂದು ಶಂಕಿಸಲಾಗಿದೆ.

Exit mobile version