Home ದಾವಣಗೆರೆ ಅಂದು ಸಿಎಂ ವಿರುದ್ಧ ಸಿಡಿದೆದ್ದಿದ್ದ ಬಿ. ಕೆ. ಹರಿಪ್ರಸಾದ್ ರಿಂದ ಇಂದು ಸಿದ್ದರಾಮಯ್ಯರ ಗುಣಗಾನ!
ದಾವಣಗೆರೆನವದೆಹಲಿಬೆಂಗಳೂರು

ಅಂದು ಸಿಎಂ ವಿರುದ್ಧ ಸಿಡಿದೆದ್ದಿದ್ದ ಬಿ. ಕೆ. ಹರಿಪ್ರಸಾದ್ ರಿಂದ ಇಂದು ಸಿದ್ದರಾಮಯ್ಯರ ಗುಣಗಾನ!

Share
Share

ಬೆಂಗಳೂರು: ರಾಜ್ಯ ರಾಜಕಾರಣದ ಚರಿತ್ರೆಯಲ್ಲೇ ಅತಿ ಹೆಚ್ಚು ಅವಧಿಯ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸುತ್ತಿರುವ ನಾಡಿನ ಮುಖ್ಯಮಂತ್ರಿಗಳು, ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿರುವ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಮುಖಂಡ ಬಿ. ಕೆ. ಹರಿಪ್ರಸಾದ್ ಭೇಟಿ ನೀಡಿ ಶುಭ ಹಾರೈಸಿದ್ದಾರೆ.

ಈ ನಾಡು ಕಂಡ ದಮನಿತ ವರ್ಗಗಳ, ಶೋಷಿತ ಸಮುದಾಯಗಳ ಆಶಾಕಿರಣವಾಗಿದ್ದ “ಅರಸು”ಅವರ ದಾಖಲೆಯನ್ನು ಸರಿಗಟ್ಟಿದ ಸಿದ್ದರಾಮಯ್ಯನವರು ಸಂವಿಧಾನ, ಪ್ರಜಾಪ್ರಭುತ್ವ, ಸಮಾಜವಾದಿ ಮೌಲ್ಯಗಳ ರಕ್ಷಣೆಗೆ ಕಟ್ಟಿಬದ್ದರಾಗಿ, ಬಡ ಜನರ, ಹಿಂದುಳಿದ, ದೀನ-ದಲಿತರ ಆಶೋತ್ತರಗಳಿಗುಣವಾಗಿ ಮತ್ತಷ್ಟು ಈ ನಾಡಿಗೆ ತಮ್ಮ ಸೇವೆ ಸಲ್ಲಿಸಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.

ಬಿ. ಕೆ. ಹರಿಪ್ರಸಾದ್ ಈ ಹಿಂದೆ ಸಿಎಂ ಸಿದ್ದರಾಮಯ್ಯರ ವಿರುದ್ಧ ಸಿಡಿದೆದ್ದಿದ್ದರು. ಆ ಬಳಿಕ ತಣ್ಣಗಾಗಿ ಸಿದ್ದರಾಮಯ್ಯರ ಜೊತೆ ಬಾಂಧವ್ಯ ಸುಧಾರಿಸಿಕೊಂಡಿದ್ದರು. ಬಹಿರಂಗ ವೇದಿಕೆಯಲ್ಲಿ ಟೀಕಾಪ್ರಹಾರ ನಡೆಸಿದ್ದ ಬಿ. ಕೆ. ಹರಿಪ್ರಸಾದ್ ಅವರು ಸಿದ್ದರಾಮಯ್ಯರ ಪರ ಬ್ಯಾಟ್ ಬೀಸುತ್ತಿರುವುದು ಅಚ್ಚರಿ ತಂದಿದೆ.

Share

Leave a comment

Leave a Reply

Your email address will not be published. Required fields are marked *