Home ಕ್ರೈಂ ನ್ಯೂಸ್ ತಿರುಪತಿ ಪ್ರಸಾದಕ್ಕೆ ಪಾಮ್ ಆಯಿಲ್ ಮಿಕ್ಸ್: 96 ಕೋಟಿ ರೂ. ನಕಲಿ ತುಪ್ಪ ಸರಬರಾಜು ಮಾಡಿದ್ದ ಉದ್ಯಮಿ ಬಂಧನ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ತಿರುಪತಿ ಪ್ರಸಾದಕ್ಕೆ ಪಾಮ್ ಆಯಿಲ್ ಮಿಕ್ಸ್: 96 ಕೋಟಿ ರೂ. ನಕಲಿ ತುಪ್ಪ ಸರಬರಾಜು ಮಾಡಿದ್ದ ಉದ್ಯಮಿ ಬಂಧನ

Share
ತಿರುಪತಿ
Share

ನವದೆಹಲಿ/ಹೈದರಾಬಾದ್: ವಿಶ್ವಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದ ತಯಾರಿಕೆಗೆ ಕಲ್ಬೆರಕೆ ತುಪ್ಪ ಪೂರೈಕೆ ಮಾಡಿರುವ ಅಕ್ರಮ ಹಣಕಾಸು ವರ್ಗಾವಣೆ (PMLA) ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬಿಗಿಕ್ರಮ ಕೈಗೊಂಡಿದೆ. ಸುಕೃತಿ ಫುಡ್ಸ್ ಸಂಸ್ಥೆಯ ಪ್ರವರ್ತಕ ಕೈಲಾಶ್ ಚಂದ್ ಮಂಗ್ಲಾ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಸೆಪ್ಟೆಂಬರ್ 17 ರಂದು ಹೈದರಾಬಾದ್‌ನ ಇಡಿ ವಲಯ ಕಚೇರಿಯ ಅಧಿಕಾರಿಗಳು ಮಂಗ್ಲಾ ಅವರನ್ನು ಬಂಧಿಸಿದ್ದು, ಬಳಿಕ ವಿಶಾಖಪಟ್ಟಣಂನ ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಪಾಮ್ ಆಯಿಲ್, ರಾಸಾಯನಿಕ ಬಳಸಿ ನಕಲಿ ತುಪ್ಪ ತಯಾರಿಕೆ

ಟಿಟಿಡಿಗೆ ‘ಅಗ್ಮಾರ್ಕ್ ಸ್ಪೆಷಲ್ ಗ್ರೇಡ್ ಹಸುವಿನ ತುಪ್ಪ’ ಎಂದು ಸರಬರಾಜು ಮಾಡಲಾದ ಉತ್ಪನ್ನದಲ್ಲಿ ಸಂಸ್ಕರಿಸಿದ ಪಾಮ್ ಆಯಿಲ್, ಪಾಮ್ ಕರ್ನಲ್ ಆಯಿಲ್, ಪಾಲ್ಮೋಲಿನ್ ಹಾಗೂ ಎಂಜಿ-90, ಮೊನೊಗ್ಲಿಸರೈಡ್ಸ್, ಮೈವ್ಯಾಸೆಟ್ ಸಾಫ್ಟ್ 400 ಮತ್ತು ಅಸಿಟಿಕ್ ಆಸಿಡ್ ಎಸ್ಟೇಟ್‌ನಂತಹ ರಾಸಾಯನಿಕಗಳನ್ನು ಬಳಸಿ ನಕಲಿ ತುಪ್ಪ ತಯಾರಿಸಲಾಗಿತ್ತು ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.

230 ಕೋಟಿ ರೂ. ವಂಚನೆ, 96 ಕೋಟಿ ರೂ. ನಕಲಿ ತುಪ್ಪ

2019 ರಿಂದ 2024 ರ ಅವಧಿಯಲ್ಲಿ ಟಿಟಿಡಿಗೆ ಒಟ್ಟು 230 ಕೋಟಿ ರೂಪಾಯಿ ಮೌಲ್ಯದ ಕಲ್ಬೆರಕೆ ತುಪ್ಪ ಪೂರೈಕೆಯಾಗಿದ್ದು, ಅದರಲ್ಲಿ ಕೈಲಾಶ್ ಚಂದ್ ಮಂಗ್ಲಾ ತಮ್ಮ ಕಾರ್ಖಾನೆಯಲ್ಲಿಯೇ 96 ಕೋಟಿ ರೂಪಾಯಿ ಮೌಲ್ಯದ ನಕಲಿ ತುಪ್ಪವನ್ನು ಉತ್ಪಾದಿಸಿದ್ದರು ಎಂದು ತನಿಖಾ ಸಂಸ್ಥೆ ಆರೋಪಿಸಿದೆ.

ಶ್ರೀ ವೈಷ್ಣವಿ ಡೈರಿ ಸ್ಪೆಷಾಲಿಟೀಸ್, ಮಾಲ್‌ಗಂಗಾ ಮಿಲ್ಕ್ & ಆಗ್ರೋ ಪ್ರಾಡಕ್ಟ್ಸ್ ಮತ್ತು ಎ.ಆರ್. ಡೈರಿ ಫುಡ್ಸ್ ಸೇರಿದಂತೆ ವಿವಿಧ ಫ್ರಂಟ್ ಸಂಸ್ಥೆಗಳ ಮೂಲಕ ಈ ಕಲ್ಬೆರಕೆ ತುಪ್ಪವನ್ನು ಸರಬರಾಜು ಮಾಡಲು ಮಂಗ್ಲಾ ಸಹಕರಿಸಿದ್ದರು. ಅಷ್ಟೇ ಅಲ್ಲದೆ, ಅಸಲಿ ಹಸುವಿನ ತುಪ್ಪ ಉತ್ಪಾದನೆ ಮಾಡುತ್ತಿದ್ದೇವೆ ಎಂದು ಬಿಂಬಿಸಲು ಪಾಮ್ ಆಯಿಲ್ ಖರೀದಿ ಹಾಗೂ ತುಪ್ಪದ ಮಾರಾಟಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು ಎಂಬುದು ಇಡಿ ತನಿಖೆಯಲ್ಲಿ ಬಹಿರಂಗವಾಗಿದೆ.

ಈ ಪ್ರಕರಣದಲ್ಲಿ ಇಡಿ ಬಂಧಿಸುತ್ತಿರುವ ಎರಡನೇ ಪ್ರಮುಖ ಆರೋಪಿ ಇವರಾಗಿದ್ದು, ಇದಕ್ಕೂ ಮುನ್ನ ಭೋಲೆ ಬಾಬಾ ಆರ್ಗಾನಿಕ್ ಡೈರಿ ಮಿಲ್ಕ್‌ನ ಪ್ರವರ್ತಕ ವಿಪಿನ್ ಜೈನ್ ಅವರನ್ನು ಬಂಧಿಸಲಾಗಿತ್ತು.

Share

Leave a comment

Leave a Reply

Your email address will not be published. Required fields are marked *

Related Articles