Site icon Kannada News-suddikshana

ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮೇಲ್ಚಾವಣಿ ಪದರ ಕುಸಿತ: ಎರಡೂವರೆ ವರ್ಷದ ಮಗು ಸೇರಿ ಮೂವರಿಗೆ ಗಾಯ

SUDDIKSHANA KANNADA NEWS/ DAVANAGERE/ DATE:18-12-2024

ದಾವಣಗೆರೆ: ಆಸ್ಪತ್ರೆಯ ಮೇಲ್ಛಾವಣಿಯ ಪದರ ಕಳಚಿಬಿದ್ದ ಪರಿಣಾಮ ಎರಡೂವರೆ ವರ್ಷದ ಮಗು ಸೇರಿದಂತೆ ಮೂವರು ಗಾಯಗೊಂಡಿರುವ ಘಟನೆ ದಾವಣಗೆರೆ ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ವಿಜಯನಗರ ಜಿಲ್ಲೆಯ ಹಲವಾಗಲು ಗ್ರಾಮದ ಕಾವೇರಿ (36), ಪ್ರೇಮಾ (46) ಹಾಗೂ ಎರಡೂವರೆ ವರ್ಷದ ಮಗು ನೇತ್ರಾ ಗಾಯಗೊಂಡವರು ಎಂದು ಗುರುತಿಸಲಾಗಿದೆ. ಮೂವರಿಗೂ ಚಿಕ್ಕಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ವಾಪಸ್ ಮನೆಗೆ ಮರಳಿದ್ದಾರೆ.

ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಸಮೀಪದಲ್ಲಿ ಈ ಘಟನೆ ನಡೆದಿದೆ. ಸಂಬಂಧಿಕರೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿದ್ದರು. ಅವರನ್ನು ನೋಡಲು ಕಾವೇರಿ, ಪ್ರೇಮಾ ಹಾಗೂ ನೇತ್ರಾ ಬಂದಿದ್ದರು. ಈ ವೇಳೆ ಚಾವಣಿಯ ಪದರ ಕಳಚಿ ಉದುರಿದ್ದು, ಪದರದ ಚೂರುಗಳು ಸಿಡಿದರಿಂದಾಗಿ ಮೂವರಿಗೆ ಗಾಯಗಳಾಗಿವೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Exit mobile version