Site icon Kannada News-suddikshana

ಪ್ರಧಾನಿ ಮೋದಿಯನ್ನು ಕೊಲ್ಲುವುದಾಗಿ NIA ಕಚೇರಿಗೆ ಬೆದರಿಕೆ ಕರೆ: ಸೈಬರ್​ ಪೊಲೀಸರಿಂದ ತನಿಖೆ ಶುರು

ಚೆನ್ನೈ (ತಮಿಳುನಾಡು): ಚೆನ್ನೈನ ಪುರಸೈವಾಕಂನಲ್ಲಿರುವ ರಾಷ್ಟ್ರೀಯ ಗುಪ್ತಚರ ಸಂಸ್ಥೆ (ಎನ್‌ಐಎ) ಕಚೇರಿಯ ನಿಯಂತ್ರಣ ಕೊಠಡಿಗೆ ಬೆದರಿಕೆ ಕರೆ ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ವ್ಯಕ್ತಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲುವುದಾಗಿ ಹಿಂದಿಯಲ್ಲಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಕರೆ ಸ್ವೀಕರಿಸಿದ ನಂತರ, ರಾಷ್ಟ್ರೀಯ ಗುಪ್ತಚರ ಏಜೆನ್ಸಿಯ ಅಧಿಕಾರಿಗಳು ತ್ವರಿತವಾಗಿ ಚೆನ್ನೈ ಪೊಲೀಸರ ಅಧಿಕಾರಿಗಳಿಗೆ ಸೂಚನೆ ನೀಡಿದರು, ಬೆದರಿಕೆ ಹಾಕಿದ್ದ ಪೋನ್ ನಂಬರ್‌ ಅನ್ನು ನೀಡಿದ್ದಾರೆ ಈ ಬಗ್ಗೆ ಚೆನ್ನೈನ ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Exit mobile version