Site icon Kannada News-suddikshana

G. M. Siddeshwara: ಅಪರಿಚಿತ ಮಹಿಳೆಯಿಂದ ಜಿ. ಎಂ. ಸಿದ್ದೇಶ್ವರರಿಗೆ ಹನಿಟ್ರ್ಯಾಪ್ ಯತ್ನ? ಪೊಲೀಸ್ ಠಾಣೆಗೆ ದೂರು ಕೊಟ್ಟ ಬಳಿಕ ಸಂಸದರು ಹೇಳಿದ್ದೇನು..?

G. M. Siddeshwara

G. M. Siddeshwara

SUDDIKSHANA KANNADA NEWS/ DAVANAGERE/ DATE:26-07-2023

ದಾವಣಗೆರೆ: ದಾವಣಗೆರೆ ಲೋಕಸಭಾ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರ (G. M. Siddeshwara) ಅವರಿಗೆ ಮೊಬೈಲ್ ನಲ್ಲಿ ವ್ಯಾಟ್ಸಪ್ ಕಾಲ್ ಮಾಡಿ ಮಹಿಳೆಯೊಬ್ಬಳು ಅಸಭ್ಯವಾಗಿ ವರ್ತಿಸಿ, ಬೆದರಿಕೆ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಿದ್ದೇಶ್ವರ ಅವರು ಬೆಂಗಳೂರಿನ ಕಮರ್ಷಿಯಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜುಲೈ 20ನೇ ತಾರೀಖಿನ ರಾತ್ರಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬಳು ಸಿದ್ದೇಶ್ವರ (Siddeshwara) ಅವರ ಮೊಬೈಲ್ ನಂಬರ್ ನ ವ್ಯಾಟ್ಸಪ್ ಗೆ ರಾತ್ರಿ 10. 16ರ ಸುಮಾರಿಗೆ ಹಾಯ್ ಹೌ ಆರ್ ಯು ಅಂತಾ ಮೆಸೇಜ್ ಮಾಡಿದ್ದಾಳೆ. ಆದ್ರೆ, ಸಂಸದರು ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. 10.24ಕ್ಕೆ ವ್ಯಾಟ್ಸಪ್ ಆಡಿಯೋ ಕಾಲ್ ಮಾಡಿರುವ ಅಪರಿಚಿತ ಮಹಿಳೆಯು ಹಿಂದಿಯಲ್ಲಿ ಮಾತನಾಡಲು ಶುರು ಮಾಡಿದ್ದಾಳೆ. ಆಗ ಸಂಸದರು ಯಾರು ಎಂದು ಕೇಳಿದ್ದಾರೆ. ಮತ್ತೆ ಕಾಲ್ ಕಟ್ ಆಗಿದೆ.

ಈ ಸುದ್ದಿಯನ್ನೂ ಓದಿ: 

Diamond:ದಿನಗೂಲಿ ನೌಕರರ ಮಕ್ಕಳೀಗ ಸಿನಿಮಾ ಸ್ಟಾರ್ಸ್: ಡೈಮಂಡ್ ಕ್ರಾಸ್ ನ ದಾವಣಗೆರೆ ಯುವಕರ “ಡೈಮಂಡ್” ಯಶೋಗಾಥೆ

ಆ ನಂತರ ಮತ್ತೆ ಕಾಲ್ ಮಾಡಿರುವ ಅಪರಿಚಿತ ಮಹಿಳೆಯು ಸಂಸದರಿಗೆ ಕಿರಿಕಿರಿ ಉಂಟು ಮಾಡಿದ್ದಾಳೆ. 10. 27ರ ಸುಮಾರಿ ವ್ಯಾಟ್ಸಪ್ ವಿಡಿಯೋ ಕಾಲ್ ಮಾಡಿದ್ದಾಳೆ. ಬೆತ್ತಲೆಯಾಗಿದ್ದ ಮಹಿಳೆಯು ಅಸಭ್ಯವಾಗಿ ವರ್ತನೆ ಮಾಡಿದ್ದಲ್ಲದೇ, ಅಸಭ್ಯವಾಗಿ ಮಾತನಾಡಲು ಶುರು ಮಾಡಿದ್ದಾಳೆ. ಕಾಲ್ ಕಟ್ ಮಾಡಿದರೂ ಪದೇ ಪದೇ ಕಾಲ್ ಮಾಡಿದ್ದಾಳೆ.

ಸಂಸದರ ಭಾವಚಿತ್ರ ಮತ್ತು ವಿಡಿಯೋ ರೆಕಾರ್ಡ್ ಮಾಡಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ಸಂಬಂಧ ಸಂಸದರು ಬೆಂಗಳೂರಿನಲ್ಲಿ ಇದ್ದ ಕಾರಣ ಬೆಂಗಳೂರಿನ ಕಮರ್ಷಿಯಲ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸಿದ್ದೇಶ್ವರ(G._M._Siddeshwara)ರು ಕೊಟ್ಟ ಸ್ಪಷ್ಟನೆ ಏನು…?

ಜುಲೈ 20ರಂದು ನಾನು ಬೆಂಗಳೂರಿನಲ್ಲಿದ್ದೆ. ರಾತ್ರಿ 10.20ಕ್ಕೆ ಫೋನ್ ಬಂತು. ನನಗೆ 71 ವರ್ಷ ಆಗಿದೆ. ಏನು ಮಾತನಾಡುತ್ತೀಯಾ ಎಂದು ಕೇಳಿದೆ. ರೆಕಾರ್ಡ್ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಹೆದರಿಸಿದಳು. ವ್ಯಾಟ್ಸಪ್, ಫೇಸ್ ಬುಕ್ ಸೇರಿದಂತೆ ಎಲ್ಲೆಡೆ ವಿಡಿಯೋ ಹಾಕುತ್ತೇನೆ ಎಂಬುದಾಗಿ ಬೆದರಿಕೆ ಹಾಕಿದಳು. ಕೂಡಲೇ ಪೊಲೀಸರಿಗೆ ಈ ವಿಷಯ ತಿಳಿಸಿದೆ ಎಂದು ಸಂಸದ ಜಿ. ಎಂ. ಸಿದ್ದೇಶ್ವರ (G. M. Siddeshwara) ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನನಗೆ ತುಮಕೂರಿನ ಡಿವೈಎಸ್ಪಿ ಒಬ್ಬರು ಪರಿಚಯ ಇದ್ದರು. ಅವರಿಗೆ ಈ ಮಾಹಿತಿ ನೀಡಿದೆ. ಕೂಡಲೇ ಬಂದ ಅವರು ವಿಡಿಯೋ ಕಾಲ್ ಬಂದ ನಂಬರ್ ಗೆ ಫೋನ್ ಮಾಡಿದರೂ ರಿಸೀವ್ ಮಾಡಲಿಲ್ಲ. ಈ ರೀತಿಯ ಕರೆಗಳು ಬರುತ್ತಲೇ ಇರುತ್ತವೆ.
ದೂರು ಕೊಡಿ ಅಂದ್ರು, ಹಾಗಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ದುಡ್ಡಿನ ವಿಚಾರ ಬಂದಿಲ್ಲ. ಡಿವೈಎಸ್ಪಿಯವರು ಬಂದರು. ಅವರು ಬಂದಾಗ ಎಲ್ಲಾ ವಿಚಾರ ತಿಳಿಸಿದರು. ನನ್ನ ನಂಬರ್ ನಿಂದ ಕಾಲ್ ಮಾಡಿದರೂ ಪ್ರತಿಕ್ರಿಯೆ ಇರಲಿಲ್ಲ ಎಂದು ಹೇಳಿದ್ದಾರೆ.

ರಾಜಸ್ತಾನದಿಂದ ಕರೆ ಬಂದಿದೆ. ಡೂಪ್ಲಿಕೇಟ್ ನಂಬರ್ ನಿಂದ ಮಾತನಾಡುತ್ತಾರೆ. ಹಾಗಾಗಿ ತಲೆಕೆಡಿಸಿಕೊಳ್ಳಬೇಡಿ. ಮತ್ತೆ ಕರೆ ಬಂದಿಲ್ಲ. ನಾನೇನೂ ಮಾತನಾಡಿಯೇ ಇಲ್ಲ. ವ್ಯಾಟ್ಸಪ್ ನಲ್ಲಿನ ಮೆಸೇಜ್ ನೋಡುತ್ತೇನೆ ಅಷ್ಟೇ. ಅಂದಿನಿಂದ ಮತ್ತೆ ಯಾವುದೇ ಕರೆ, ವ್ಯಾಟ್ಸಪ್ ಕಾಲ್, ವ್ಯಾಟ್ಸಪ್ ವಿಡಿಯೋ ಕರೆ ಬಂದಿಲ್ಲ ಎಂದು ಸಿದ್ದೇಶ್ವರ ಅವರು ಸ್ಪಷ್ಟನೆ ನೀಡಿದ್ದಾರೆ.

G. M. Siddeshwara, 

G. M. Siddeshwara Suddi

G. M. Siddeshwara News

G. M. Siddeshwara Suddi Updates

G. M. Siddeshwara Suddi Updates

Exit mobile version