Site icon Kannada News-suddikshana

ಅಭಿವೃದ್ಧಿ ಪರ್ವವನ್ನೇ ದಾವಣಗೆರೆಗಿಳಿಸಿದ ಧಣಿ, ಸಾವಿರಾರು ಕೋಟಿ ರೂ. ಅನುದಾನ ತಂದ ಕಣ್ಮಣಿ: ಗಜೇಂದ್ರ ಜಗನ್ನಾಥ

– ಗಜೇಂದ್ರ ಜಗನ್ನಾಥ, ದಾವಣಗೆರೆ ಉತ್ತರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು,
ದಾವಣಗೆರೆ ಮಹಾನಗರ ಪಾಲಿಕೆಯ 28 ಮತ್ತು 37ನೇ ವಾರ್ಡ್ ಪ್ರಬಲ ಟಿಕೆಟ್ ಆಕಾಂಕ್ಷಿಗಳು

ಅಭಿವೃದ್ಧಿ ಪರ್ವ ದಾವಣಗೆರೆಯಲ್ಲಿ ಧರೆಗಿಳಿಯಲು ಕಾರಣವೇ ಗಣಿ ಮತ್ತು ಗಣಿಗಾರಿಕೆ ಇಲಾಖೆ,  ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್. ಯಾಕೆಂದರೆ 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಚಿವರಾಗಿದ್ದ ಶಾಮನೂರು ಶಿವಶಂಕರಪ್ಪ ಹಾಗೂ ಆ ನಂತರ ಅಂದರೆ ಎರಡೂವರೆ ವರ್ಷಗಳ ಕಾಲ ಸಚಿವರಾಗಿದ್ದ ಮಲ್ಲಿಕಾರ್ಜುನ್ ಅವರು ತಂದಿದ್ದ 2800 ಕೋಟಿ ರೂಪಾಯಿ ಅನುದಾನ. ಕಳೆದೆ ಎರಡೂವರೆ ವರ್ಷಗಳಲ್ಲಿ ಮಲ್ಲಿಕಾರ್ಜುನ್ ಅವರು ತಂದಿರುವ ಅನುದಾನವೂ ಸಾವಿರ ಕೋಟಿ ರೂ.ಗೂ ಹೆಚ್ಚು.

ವಿಪಕ್ಷಗಳಿಗೆ ಸರಿಯಾಗಿ ಉತ್ತರ ನೀಡುವಂತೆ ಮಲ್ಲಿಕಾರ್ಜುನ್ ಅವರು ಸಿಎಂ ಸಿದ್ದರಾಮಯ್ಯ ಅವರ ಬಳಿ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಇಂದಿಗೂ ದಾವಣಗೆರೆಯಲ್ಲಿ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸದಂತೆ ಕ್ರಮ ಕೈಗೊಂಡವರೇ ಮಲ್ಲಣ್ಣ. ಬಡವರು, ಹಿಂದುಳಿದವರು, ದೀನದಲಿತರು, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿರುವ ನಾಯಕರು. ತಂದೆಯ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆದು ಎಲ್ಲಾ ವರ್ಗದವರ ಏಳಿಗೆಗೆ ಶ್ರಮಿಸುತ್ತಿರುವ ಮತ್ತು ದಾವಣಗೆರೆಗೆ ಸಿಕ್ಕಿರುವ ಮಾಣಿಕ್ಯವೇ ಎಸ್. ಎಸ್. ಮಲ್ಲಿಕಾರ್ಜುನ್.

ನಮ್ ಪ್ರೀತಿಯ ಸಾಹುಕಾರರು:

ದೂರದಿಂದ ನೋಡಿದರೆ ಗಡಸು, ಒರಟು ಎಂದೆನಿಸಿದರೂ ಅವರ ಹತ್ತಿರ ಹೋದರೆ ಸಾಕು ಅವರ ಹೃದಯವೈಶಾಲ್ಯತೆ ಗೊತ್ತಾಗುತ್ತದೆ. ಮಾತು ಒರಟು ಆದರೂ ಸ್ನೇಹಜೀವಿ. ಎಲ್ಲರನ್ನೂ ತನ್ನವರು ಎಂದು ಮಾತನಾಡಿಸುವ ಪರಿಯೇ ಮಲ್ಲಣ್ಣರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ಗ್ಯಾರಂಟಿ ಯೋಜನೆ ಸಮರ್ಪಕ ಅನುಷ್ಠಾನದ ಜೊತೆಗೆ 1356 ಕೋಟಿ ರೂಪಾಯಿ ಅನುದಾನ ತಂದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದಾರೆ. ಇಷ್ಟೊಂದು ಪ್ರಮಾಣದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನೂ ಸಿಎಂ ಸಿದ್ದರಾಮಯ್ಯ ಅವರೇ ನೆರವೇರಿಸಿದ್ದಾರೆ. ಈ ಮೂಲಕ ದಾವಣಗೆರೆ ಮುಂದಿನ ದಿನಗಳಲ್ಲಿ ವೇಗವಾಗಿ ಅಭಿವೃದ್ಧಿ ಪಥದಲ್ಲಿ ಸಾಗುವತ್ತ ಹೆಜ್ಜೆ ಇಡುವಂತಾಗಲು ಕಾರಣ ನೆಚ್ಚಿನ ನಾಯಕರಾದ ಮಲ್ಲಣ್ಣ ಅವರ ಶ್ರಮ ಎಂದರೆ ಅತಿಶಯೋಕ್ತಿ ಅಲ್ಲ.

ರೂ.1356 ಕೋಟಿ ರೂ. ವೆಚ್ಚದ ಕಾಮಗಾರಿಗಳು:

ಕೃಷಿ ಇಲಾಖೆ ವತಿಯಿಂದ 420ಕ್ಕೂ ಹೆಚ್ಚು ಜನರಿಗೆ ರೂ.1.51ಕೋಟಿ ವೆಚ್ಚದ ಯಂತ್ರೋಪಕರಣ

ತೋಟಗಾರಿಕೆ ಇಲಾಖೆಯಿಂದ 650ಕ್ಕೂ ಹೆಚ್ಚು ಜನತೆಗೆ ರೂ.2 ಕೋಟಿ ವೆಚ್ಚದ ಯಂತ್ರೋಪಕರಣ

ರೂ.5.4 ಕೋಟಿ ಮೊತ್ತದ ಹನಿ ನೀರಾವರಿ ಸಹಾಯಧನ

ವಿವಿಧ ಅಭಿವೃದ್ಧಿ ನಿಗಮಗಳಿಂದ ಸಾರಥಿ ಯೋಜನೆಯಡಿ 2 ಟ್ಯಾಕ್ಸಿ, 2 ಆಟೋ, 15 ಕಾರ್ ವಿತರಣೆ

ಕಾರ್ಮಿಕ ಇಲಾಖೆ ವತಿಯಿಂದ 1 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ಕಿಟ್ ವಿತರಣೆ

ಗ್ರಾಮೀಣ ಕೈಗಾರಿಕೆ ವತಿಯಿಂದ 50ಕ್ಕೂ ಹೆಚ್ಚು ಮಹಿಳೆಯರಿಗೆ ಹೊಲಿಗೆ ಯಂತ್ರ, ವೆಲ್ಡಿಂಗ್ ಕಿಟ್, 16 ತ್ರಿ ಚಕ್ರ ವಾಹನ

11 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಕಂದಾಯ ಇಲಾಖೆಯಿಂದ ವಿವಿಧ ಹಕ್ಕು ಪತ್ರ ವಿತರಣೆ


ನೀರು ತಂದ ಭಗೀರಥ: ರೈತರ ಪಾಲಿನ ಆಶಾಕಿರಣ

ಕರ್ನಾಟಕದ ಮಧ್ಯ ಕೇಂದ್ರ ಬಿಂದು ದಾವಣಗೆರೆ. ನಿಜ ಹೇಳಬೇಕೆಂದರೆ ಬಯಲುಸೀಮೆ ಪ್ರದೇಶ. ಭದ್ರಾ ಅಚ್ಚುಕಟ್ಟು ಪ್ರದೇಶ ಹೆಚ್ಚು ಹೊಂದಿದೆ. ಕುಡಿಯುವ ನೀರಿನ ವಿಚಾರದಲ್ಲಿ ಜನರಿಗೆ ಬರಗಾಲದಂತ ವೇಳೆಯಲ್ಲೂ ನೀರಿನ ಹಾಹಾಕಾರ ಬಾರದಂತೆ ಜನರಿಗೆ ನೀರು ಕೊಟ್ಟ ಭಗೀರಥ ಎಸ್. ಎಸ್. ಮಲ್ಲಿಕಾರ್ಜುನ್ ಅವರು.

ಕೆರೆಗಳ ಅಭಿವೃದ್ಧಿಪಡಿಸಿ ಪುನರುಜ್ಜೀವನಗೊಳಿಸುವ ಜೊತೆಗೆ ಕಾಯಕಲ್ಪ ನೀಡಿ ಜನರಿಗೆ ನೀರೊದಗಿಸಿದ ಆಧುನಿಕ ಭಗೀರಥ ಇವರು. ಬೇತೂರು, ನಾಗನೂರು, ರಾಂಪುರದ ಮೆಟ್ಟಿ ಸೇರಿದಂತೆ ಹಲವು ಕೆರೆಗಳನ್ನು ಅಭಿವೃದ್ಧಿಪಡಿಸಿ ಸಾವಿರಾರು ಹೆಕ್ಟೇರ್ ಪ್ರದೇಶಗಳಿಗೆ ನೀರು ಸಿಗುವಂತೆ ಮಾಡುವ ಮೂಲಕ ಅನ್ನದಾತರ ಪಾಲಿನ ಸಂಜೀವಿನಿ ಆದರು.

ಇನ್ನು ಮತ್ತೊಂದು ಮಹಾನ್ ಕಾರ್ಯ ಎಂದರೆ 118 ಕೋಟಿ 55 ಲಕ್ಷ ರೂಪಾಯಿ ವೆಚ್ಚದಲ್ಲಿ ಶ್ರೀತರಳಬಾಳು ಜಗದ್ಗುರುಗಳ ಮಹಾಂತ್ವಕಾಂಕ್ಷೆಯ 22 ಕೆರೆಗಳನ್ನು ತುಂಗಾಭದ್ರಾ ನದಿಯಿಂದ ಏಕಕಾಲಕ್ಕೆ ತುಂಬಿಸುವ ಯೋಜನೆ. ಇನ್ನು ಹಲವು ಸೇತುವೆಗಳನ್ನು ನಿರ್ಮಾಣ ಮಾಡುವಲ್ಲಿ ಕಾರಣೀಕರ್ತರಾಗಿದ್ದಾರೆ. ಈಗ ಜಗಳೂರು ಸೇರಿದಂತೆ ಹಲವೆಡೆ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಅತ್ಯಂತ ಹಿಂದುಳಿದ ತಾಲೂಕು ಎಂಬ ಕುಖ್ಯಾತಿ ಹೊಂದಿದ್ದ ಜಗಳೂರು ತಾಲೂಕಿನಲ್ಲಿ ನೀರು ಹರಿಯಲು ಕಾರಣಕರ್ತರಾದವರು. ಈ ತಾಲೂಕಿನ ಜನರು ಈಗ ಮಲ್ಲಿಕಾರ್ಜುನ್ ಅವರಿಗೆ ಋಣಿಯಾಗಿದ್ದಾರೆ. ಯಾಕೆಂದರೆ ಈ ನೀರು ಈಗ ಬೆಳೆಗಳು ನಳನಳಿಸುವಂತೆ ಮಾಡಿದೆ. ಈಗ ನಿಧಾನವಾಗಿ ಮಲೆನಾಡಿನಂತೆ ಕಂಗೊಳಿಸಲು ಶುರು ಆಗಿದೆ. ಇದಕ್ಕೆ ಕಾರಣ ಮಲ್ಲಿಕಾರ್ಜುನ್ ಅವರ ದೂರದೃಷ್ಟಿತ್ವ.

ದೇಶವೇ ತಿರುಗಿ ನೋಡುವಂತೆ ಗ್ಲಾಸ್ ಹೌಸ್ ದಾವಣಗೆರೆಯಲ್ಲೇ ನಿರ್ಮಾಣ ಆಗಲು ಕಾರಣ ಮಲ್ಲಣ್ಣ. ಬೇರೆ ಜಿಲ್ಲೆಗೆ ಹೋಗುವುದನ್ನು ತಪ್ಪಿಸಿ ದಾವಣಗೆರೆಯಲ್ಲಿ ಆಗುವಂತೆ ಮಾಡಿದವರು. ದಾವಣಗೆರೆ ಹಸಿರೀಕರಣಕ್ಕೂ ಅಪಾರ ಕಾಣಿಕೆ ನೀಡಿದ್ದಾರೆ‌. ಕೋರ್ಟ್ ಪಕ್ಕದ ಎಸ್. ಎಸ್. ಉದ್ಯಾನವನ, ವಿಶ್ವೇಶ್ವರಯ್ಯ ಪಾರ್ಕ್, ಸೇವಾಲಾಲ್ ಉದ್ಯಾನವನ, ಎಸ್. ನಿಜಲಿಂಗಪ್ಪ ಬಡಾವಣೆಯ ರಾಷ್ಟ್ರ ನಾಯಕ ಎಸ್. ನಿಜಲಿಂಗಪ್ಪ ಪಾರ್ಕ್, ಶ್ರೀ ಚೌಡೇಶ್ವರಿ ಉದ್ಯಾನವನ, ಮುದ್ನಾಳ್ ಬಸವೇಶ್ವರ ಪಾರ್ಕ್, ಸಂಗೀತ ಕಾರಂಜಿ, ಚುಕುಬುಕು ರೈಲು, ಮಾತೃಛಾಯ ನಿರ್ಮಾಣ ಮಲ್ಲಿಕಾರ್ಜುನ್ ಅವರ ಕಾರ್ಯಗಳಲ್ಲಿ ಪ್ರಮುಖವಾದವು.

ನಮ್ಮ ಹೆಮ್ಮೆ, ನಮ್ಮ ಸಾಹುಕಾರರು: ಗಜೇಂದ್ರ ಜಗನ್ನಾಥ

ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ನಮಗೆ ಪ್ರೇರಣೆ ಜೊತೆಗೆ ಪ್ರೇರಕ ಶಕ್ತಿಯೂ ಹೌದು. ಎಲ್ಲರಿಗೂ ಮಾರ್ಗದರ್ಶಕರು. ಹಾಕಿಕೊಟ್ಟ ಹಾದಿಯಲ್ಲಿ ನಡೆಯುವವರು ನಾವು. ಮಲ್ಲಣ್ಣ ನಡೆದು ಬಂದ ರಾಜಕೀಯ ಜೀವನ ಎಲ್ಲರಿಗೂ ಆದರ್ಶ. ದೂರದಿಂದ ನೋಡಿದರೆ ಒರಟು ಎನಿಸಿದರೂ ಹತ್ತಿರಕ್ಕೆ ಹೋದಾಗಲೇ ಗೊತ್ತಾಗುವುದು ಅವರದ್ದು ಮೃದು ಸ್ವಭಾವ. ಸ್ನೇಹಜೀವಿ. ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುವ ಮಲ್ಲಣ್ಣ ಅವರ ವ್ಯಕ್ತಿತ್ವ ಎಲ್ಲರಿಗೂ ಅಚ್ಚುಮೆಚ್ಚು.

ವಿಶ್ವಕ್ಕೆ ಕೊರೊನಾ ಸಂಕಷ್ಟ ಎದುರಾದಾಗ ಅಧಿಕಾರದಲ್ಲಿ ಇಲ್ಲದಿದ್ದರೂ ದಾವಣಗೆರೆ ಜನರ ಪಾಲಿಗೆ ಆಶಾಕಿರಣವಾದರು. ಎಷ್ಟು ಹೊತ್ತಿಗೆ ಕರೆ ಮಾಡಿದರೂ ಸ್ವೀಕರಿಸಿ ಏನಾಗಬೇಕು ಎಂದು ಕೇಳುತ್ತಿದ್ದವರು. ಲೆಕ್ಕವಿಲ್ಲದಷ್ಟು ಮಂದಿಗೆ ಸಹಕಾರದ ಜೊತೆಗೆ ಜೀವ ಉಳಿಸಿದವರು. ಕೊರೊನಾ ಲಸಿಕೆ, ಆಸ್ಪತ್ರೆಯಲ್ಲಿ ಬೆಡ್, ಆಕ್ಸಿಜನ್, ಚಿಕಿತ್ಸೆ ಸೇರಿದಂತೆ ಎಲ್ಲಾ ರೀತಿಯಲ್ಲೂ ನೆರವು ನೀಡಿದವರು. ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಕೊರೊನಾ ವ್ಯಾಕ್ಸಿನ್ ನೀಡದಿದ್ದಾಗ ಸ್ವತಃ ಹಣ ಖರ್ಚು ಮಾಡಿ ವ್ಯಾಕ್ಸಿನ್ ತಂದು ಜನರಿಗೆ ಕೊಟ್ಟ ಸಂಜೀವಿನಿ ಪುರುಷ ನಮ್ಮ ಮಲ್ಲಣ್ಣ.

ಅಭಿವೃದ್ಧಿ ವಿಚಾರಕ್ಕೆ ಬಂದರೆ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡುವವರು. ಯಾವುದೇ ಕೆಲಸ ಕಾರ್ಯಗಳಾದರೂ ಹಿಡಿದ ಮೇಲೆ ಬಿಡುವ ಪ್ರಶ್ನೆಯೇ ಇಲ್ಲ. ಯಾವುದೇ ಕಾಮಗಾರಿಗಳಾಗಲೀ, ರೈತರ ಸಂಕಷ್ಟಕ್ಕೆ ಸ್ಪಂದಿಸುವುದಾಗಲೀ ಸುಮ್ಮನೆ ಮಾತನಾಡುವುದಿಲ್ಲ. ವಿಚಾರಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿ ವಾಸ್ತವ ಮತ್ತು ಪಾರದರ್ಶಕವಾಗಿ ವಿಷಯ ಮಂಡನೆ ಮಾಡಿ ಪ್ರತಿಕ್ರಿಯಿಸುವ ಮಲ್ಲಿಕಾರ್ಜುನ್ ಅವರ ರಾಜಕೀಯ ಮಾತುಗಾರಿಕೆ ಎಲ್ಲರನ್ನೂ ಸೆಳೆಯುತ್ತದೆ. ಒಪ್ಪಿಕೊಳ್ಳುವಂತೆ ಮಾಡುತ್ತದೆ.

ಯಾವುದೇ ಸಮಸ್ಯೆಗಳಿದ್ದರೂ ಜಾತಿ, ಧರ್ಮ ನೋಡುವುದಿಲ್ಲ. ಯಾವುದೇ ಕಷ್ಟಗಳಿದ್ದರೂ ಪರಿಹರಿಸಲು ಮುಂದಾಗುವ ಮತ್ತು ಸಹಾಯ ಹಸ್ತ ಚಾಚುವ ಮಲ್ಲಣ್ಣರ ಗುಣ ನಮಗೆಲ್ಲರಿಗೂ ದಾರಿದೀಪ. ಆಡುಮುಟ್ಟದ ಸೊಪ್ಪಿಲ್ಲ ಮಲ್ಲಣ್ಣ ಮಾಡದ ಅಭಿವೃದ್ಧಿ ಕಾರ್ಯಗಳಿಲ್ಲ. ದಾವಣಗೆರೆ ಜಿಲ್ಲೆಯು ಇಷ್ಟೊಂದು ಪ್ರಮಾಣದಲ್ಲಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಬೆಳೆಯಲು ಕಾರಣೀಕರ್ತರು. ವಿದ್ಯಾಸಂಸ್ಥೆ, ವೈದ್ಯಕೀಯ ಕ್ಷೇತ್ರ, ಬ್ಯಾಂಕಿಂಗ್, ಕೈಗಾರಿಕೆಗಳ ಮೂಲಕ ಸಾವಿರಾರು ಕುಟುಂಬಗಳಿಗೆ ಆಧಾರಸ್ತಂಭವಾದವರು. ಅವರ ರಾಜಕೀಯ ಜೀವನ ನಮಗೆಲ್ಲ ಒಂದು ಪಠ್ಯವಿದ್ದಂತೆ. ನಾಲ್ಕು ಬಾರಿ ಶಾಸಕರಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಯಾವಾಗಲೂ ನೆನಪಿನಲ್ಲಿ ಉಳಿಯುವಂಥವು.

ಎಸ್. ಎಸ್. ಮಲ್ಲಿಕಾರ್ಜುನ್ ಅವರು 58ನೇ ವರ್ಷದ ಜನುದಿನದ ಸಂಭ್ರಮದಲ್ಲಿದ್ದು, ಅವರ ಶ್ರೀರಕ್ಷೆ ನಮ್ಮ ಮೇಲಿರಲಿ. ಅವರು ರಾಜಕೀಯದಲ್ಲಿ ಮತ್ತಷ್ಟು ಉತ್ತುಂಗಕ್ಕೇರಲಿ. ನಾಡಿನ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಇದ್ದು, ಭಗವಂತ ಅವರಿಗೆ ಆಯಸ್ಸು, ಆರೋಗ್ಯ, ರಾಜಕೀಯ ಉನ್ನತ ಹುದ್ದೆ ಕರುಣಿಸುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ. ಹೃದಯಾಂತರಾಳದಿಂದ ಜನುದಿನದ ಶುಭಾಶಯ ಕೋರುತ್ತೇನೆ.

– ಗಜೇಂದ್ರ ಜಗನ್ನಾಥ, ದಾವಣಗೆರೆ ಉತ್ತರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು,
ದಾವಣಗೆರೆ ಮಹಾನಗರ ಪಾಲಿಕೆಯ 28 ಮತ್ತು 37ನೇ ವಾರ್ಡ್ ಪ್ರಬಲ ಟಿಕೆಟ್ ಆಕಾಂಕ್ಷಿಗಳು

Exit mobile version