Site icon Kannada News-suddikshana

Harihara: ವೈದ್ಯರ ಮನೆ ಬಿಡದ ಕಳ್ಳರು: 22.75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

Crime

SUDDIKSHANA KANNADA NEWS/ DAVANAGERE/ DATE:16-08-2023

 

ದಾವಣಗೆರೆ: ರೋಗಿಗಳ ಪಾಲಿನ ವೈದ್ಯರ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ಹರಿಹರ (Harihara) ಪಟ್ಟಣದ ಜೆ. ಸಿ. ಬಡಾವಣೆಯ ವೈದ್ಯರೊಬ್ಬರ ಮನೆಯಲ್ಲಿ ಕಳ್ಳರು ಸುಮಾರು 22.75 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಒಡವೆ ಕದ್ದೊಯ್ದಿದ್ದಾರೆ.

ಹರಿಹರ (Harihara) ಪಟ್ಟಣದ ವೈದ್ಯ ಸಚಿನ್ ಬೊಂಗಾಳೆ ಅವರ ಮನೆಯಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಆಗಿದೆ. ಸಚಿನ್ ಬೊಂಗಾಳೆ ಕುಟುಂಬವು ಆಗಸ್ಟ್ 11 ರಂದು ಬೆಳಗಾವಿಗೆ ತೆರಳಿತ್ತು. ಮನೆಯಲ್ಲಿ ಯಾರೂ ಇರಲಿಲ್ಲ. ಈ ಸಮಯ ನೋಡಿಕೊಂಡ ಕಳ್ಳರು ಕಳ್ಳತನ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: 

Minister: ಸಚಿವ ಮಲ್ಲಿಕಾರ್ಜುನ್ ತೇಜೋವಧೆ ಆಗುವಂತೆ ವಿಡಿಯೋ ಅಪ್ಲೋಡ್: ವಿಜಯ್ ಕುಮಾರ್ ಹಿರೇಮಠ್ ವಿರುದ್ಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕೇಸ್

ಸಚಿನ್ ಬೊಂಗಾಳೆ ಕುಟುಂಬವು ಮನೆಗೆ ವಾಪಸ್ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಸಂಬಂಧ ಹರಿಹರ (Harihara) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ವಾನದಳ ಸಮೇತ ಪೊಲೀಸ್ ಅಧಿಕಾರಿಗಳು, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೆ. ಸಿ. ಬಡಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳಿದ್ದು, ಇಲ್ಲಿಯೇ ಕಳ್ಳತನವಾಗಿರುವುದು ಸುತ್ತಮುತ್ತಲಿನ ಜನರ ಆತಂಕಕ್ಕೆ ಕಾರಣವಾಗಿದೆ.

Exit mobile version