Site icon Kannada News-suddikshana

ನಾನವಳಲ್ಲ.. ನಾನವಳಲ್ಲ… ನನ್ನನ್ನ ಟ್ರ್ಯಾಪ್ ಮಾಡಿದ್ದಾರೆ: ನಟಿ ರನ್ಯಾ ರಾವ್ ಹೊಸ ವರಸೆ!

SUDDIKSHANA KANNADA NEWS/ DAVANAGERE/ DATE:07-03-2025

ಬೆಂಗಳೂರು: ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಮಾಣಿಕ್ಯ ಸಿನಿಮಾ ನಟಿ ಹೊಸ ವರಸೆ ಶುರುವಿಟ್ಟುಕೊಂಡಿದ್ದಾರೆ. ಪ್ರಕರಣದಿಂದ ಬಚಾವಾಗಲು ಹೊಸ ದಾಳ ಉರುಳಿಸಿದ್ದು, ನನ್ನನ್ನು ಟ್ರ್ಯಾಪ್ ಮಾಡಲಾಗಿದೆ. ಇದರಲ್ಲಿ ನನ್ನ ತಪ್ಪೇನಿಲ್ಲ ಎಂದು ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್ ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.

ಜೈಲಿನ ಒಳಗೆ ಹದಿನೈದು ಮಂದಿಯ ವಿಚಾರಣಾಧೀನ ಮಹಿಳಾ ಕೈದಿಗಳ ಜೊತೆ ರನ್ಯಾ ಕೂಡ ಇದ್ದು, ಐಷಾರಾಮಿ ಜೀವನ ನಡೆಸುತ್ತಿದ್ದ ನಟಿ ಈಗ ಸಾಮಾನ್ಯ ಖೈದಿಯಾಗಿ ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ.

ಹಾಗಾದ್ರೆ ರನ್ಯಾ ರಾವ್ ಅವರನ್ನು ಟ್ರ್ಯಾಪ್ ಮಾಡಿದವರು ಯಾರು? ಇದರ ಹಿಂದೆ ಯಾರಿದ್ದಾರೆ? ದೊಡ್ಡ ದೊಡ್ಡ ಕುಳಗಳ ಕೈವಾಡವಿದೆಯಾ? ಚಿತ್ರರಂಗದವರೋ ಅಥವಾ ಬೇರೆಯವರೋ ಎಂಬ ಆಯಾಮದಲ್ಲಿಯೂ ಡಿಆರ್ ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕೆಲವರು ಗೋಲ್ಡ್ ಸ್ಮಗ್ಲಿಂಗ್​ಗೆ ಟ್ರ್ಯಾಪ್ ಆಗ್ತಿದ್ದಾರೆ ಎನ್ನುವ ವಿಚಾರ ಹೊರಬಿದ್ದಿದೆ. ಹಾಗಿದ್ರೆ ಇಲ್ಲಿ ಟ್ರ್ಯಾಪ್ ಆದವ್ರು ಯಾರು? ಟ್ರ್ಯಾಪ್ ಮಾಡಿದವ್ರು ಯಾರು ಎಂಬುದು ಪೊಲೀಸರಿಗೆ ತಲೆನೋವು ತಂದಿದೆ.

ಅಕ್ರಮವಾಗಿ ಚಿನ್ನ ಸಾಗಣೆ ಮಾಡಲು ನಟಿ ರನ್ಯಾರಿಗೆ ಒತ್ತಡ ಹೇರಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಇನ್ನು ಪರಪ್ಪನ ಅಗ್ರಹಾರ ಸೇರಿರುವ ಬೆಂಗಳೂರಿನ ಸೆಂಟ್ರಲ್​ ಜೈಲಿನಲ್ಲಿದ್ದಾರೆ. ಜೈಲಿನಲ್ಲಿ ನಟಿ ರನ್ಯಾಗೆ 2198 ವಿಚಾರಣಾಧೀನ ಕೈದಿ ನಂಬರ್ ನೀಡಲಾಗಿದೆ. ಬ್ಯಾರಕ್ ನಲ್ಲಿಯೂ ರನ್ಯಾ ಮೇಲೆ ಜೈಲು ಸಿಬ್ಬಂದಿ‌‌ ಸದಾ ನಿಗಾವಹಿಸಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ಕೇಸ್ ವಿಚಾರಣೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಅಧಿಕಾರಿಗಳು, ಈ ಪ್ರಕರಣದಲ್ಲಿ ಹ್ಯಾಂಡ್ಲರ್ ಗಳಿರೋ ಅನುಮಾನವಿದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ಇನ್ನು ನಟಿ ರನ್ಯಾ ವಿಚಾರಣೆಗೆ ವಶಕ್ಕೆ ನೀಡುವಂತೆ ಆದಾಯ ಗುಪ್ತಚರ ನಿರ್ದೇಶನಾಲಯವು ನ್ಯಾಯಾಲಯವನ್ನು ಕೇಳಿದ್ದು, ವಾದ ಆಲಿಸಿರುವ ಆರ್ಥಿಕ ಅಪರಾಧಗಳ ಕೋರ್ಟ್ ತೀರ್ಪು ಕಾಯ್ದಿರಿಸಿದೆ.

Exit mobile version