Site icon Kannada News-suddikshana

ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಹತ್ಯೆ ಮಾಡಿದ್ದ 20 ಆರೋಪಿಗಳು ಇವ್ರೇ: ಇನ್ನೂ ಕೆಲವರು ಭಾಗಿ!

SUDDIKSHANA KANNADA NEWS/ DAVANAGERE/ DATE-14-05-2025

ದಾವಣಗೆರೆ: ಹದಡಿ ರಸ್ತೆಯ ಸೋಮೇಶ್ವರ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಂಭಾಗದ ತರಳಬಾಳು ನಗರದ 16 ನೇ ಕ್ರಾಸ್ ನಲ್ಲಿರುವ ಪವರ್ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ನ ಕಟ್ಟಡದಲ್ಲಿ ರೌಡಿಶೀಟರ್ ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಹತ್ಯೆ ಮಾಡಿದ್ದ ಇಪ್ಪತ್ತು ಆರೋಪಿಗಳ ಹೆಸರನ್ನು ದಾವಣಗೆರೆ ಪೊಲೀಸರು ಬಹಿರಂಗಗೊಳಿಸಿದ್ದಾರೆ.

ಮೇ.5ರಂದು ಸಂಜೆ 5ರಿಂದ 5.30 ಗಂಟೆಯ ಮಧ್ಯದ ಅವಧಿಯಲ್ಲಿ ದಾವಣಗೆರೆ ನಗರ ಉಪ ವಿಭಾಗದ ವಿದ್ಯಾನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬರುವ ಕಟ್ಟಡದಲ್ಲಿ ಸಂತೋಷ ಮತ್ತು ಇತರರು ಸೇರಿಕೊಂಡು ಸಂತೋಷ ಕುಮಾರ ಕೆ ಅಲಿಯಾಸ್ ಕಣುಮಾ ಅವರನ್ನು ಹರಿತವಾದ ಆಯುಧಗಳಿಂದ ಹೊಡೆದು ಕೊಲೆ ಮಾಡಿದ್ದರು. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಾಂತ್ರಿಕ ನೆರವಿನಿಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ
ಉಮಾ ಪ್ರಶಾಂತ್ ತಿಳಿಸಿದ್ದಾರೆ.

ಬಂಧಿತ ಆರೋಪಿಗಳ ವಿವರ: 

1) ಸಂತೋಷ @ ಚಾವಳಿ ಸಂತು ತಂದೆ ಪರಮೇಶನಾಯ್ಕ, 28 ವರ್ಷ, ಟೈಲ್ಸ್ ಕೆಲಸ, ವಾಸ 4 ನೇ ಕ್ರಾಸ್, ಕಬ್ಬೂರು ಬಸಪ್ಪ ನಗರ, ಭಾರತ್ ಕಾಲೋನಿ, ದಾವಣಗೆರೆ

2) ನವೀನ್ @ ಸೈಲೆಂಟ್ ನವೀನ್ ತಂದೆ ಮಹೇಶಪ್ಪ @ ಮಲ್ಲೇಶಪ್ಪ, 21 ವರ್ಷ, ಪೇಂಟಿAಗ್ ಕೆಲಸ, ವಾಸ 4 ನೇ ಕ್ರಾಸ್, ಹರಳಯ್ಯ ನಗರ, ಹಳೆ ಚಿಕ್ಕನಹಳ್ಳಿ, ದಾವಣಗೆರೆ

3) ನವೀನ್ @ ಬ್ರಾಕಿ ನವೀನ್ ತಂದೆ ಮೋಹನ್ ಕುಮಾರ, 25 ವರ್ಷ, ಹಮಾಲಿ ಕೆಲಸ, ವಾಸ 4 ನೇ ಕ್ರಾಸ್, ಬಾಬು ಜಗಜೀವನ್ ರಾಂ ನಗರ, ಬೂದಾಳ್ ರಸ್ತೆ, ದಾವಣಗೆರೆ

4) ಎ.ಕಾರ್ತಿಕ್ ತಂದೆ ಅಂಜಿನಪ್ಪ, 29 ವರ್ಷ, ಟೈಲ್ಸ್ ಕೆಲಸ, ವಾಸ 10 ನೇ ಕ್ರಾಸ್, ಆರ್.ಎಂ.ಸಿ ರಸ್ತೆ, ಭಾರತ್ ಕಾಲೋನಿ, ದಾವಣಗೆರೆ

5) ರಾಜ @ ತಾರಕ್ ತಂದೆ ಹನುಮಂತಪ್ಪ, 25 ವರ್ಷ, ಹಮಾಲಿ ಕೆಲಸ, ವಾಸ ಬೂದಾಳ್ ರಸ್ತೆ, ಬಾಬು ಜಗಜೀವನ್ ರಾಂ ನಗರ, ದಾವಣಗೆರೆ

6) ಬಸವರಾಜ್ @ ಪಿಂಗಿ ತಂದೆ ಮಂಜುನಾಥ, 20 ವರ್ಷ, ಟೈಲ್ಸ್ ಕೆಲಸ, ವಾಸ 8 ನೇ ಕ್ರಾಸ್, ಆರ್.ಎಂ.ಸಿ ರಸ್ತೆ, ಭಾರತ್ ಕಾಲೋನಿ, ದಾವಣಗೆರೆ

7) ಮಾರುತಿ ತಂದೆ ನಾಗರಾಜಪ್ಪ, 25 ವರ್ಷ, ಹೋಟೆಲ್ ಕೆಲಸ, ವಾಸ 2 ನೇ ಕ್ರಾಸ್, ಆರ್.ಎಂ.ಸಿ ರಸ್ತೆ, ಭಾರತ್ ಕಾಲೋನಿ, ದಾವಣಗೆರೆ

8) ಪ್ರಭು ತಂದೆ ಬಸಪ್ಪ, 30 ವರ್ಷ, ಹಮಾಲಿ ಕೆಲಸ, ವಾಸ ಬೂದಾಳ್ ರಸ್ತೆ, ಬಾಬು ಜಗಜೀವನ್ ರಾಂ ನಗರ, ದಾವಣಗೆರೆ

9) ಜಯಸೂರ್ಯ @ ಪಿ.ಟಿ ತಂದೆ ಷಣ್ಮುಖಪ್ಪ, 20 ವರ್ಷ, 1 ನೇ ವರ್ಷದ ಬಿಕಾಂ ವಿದ್ಯಾರ್ಥಿ, ವಾಸ ಆವರಗೆರೆ, ದಾವಣಗೆರೆ.

10) ಭರತ್ @ ಸ್ಲಂ ತಂದೆ ಉಮಾಪತಿ, 26 ವರ್ಷ, ಆಟೋ ಡ್ರೈವರ್ ಕೆಲಸ, ವಾಸ ಆರ್.ಎಂ.ಸಿ ರಸ್ತೆ, ಭಾರತ್ ಕಾಲೋನಿ, ದಾವಣಗೆರೆ, ಹಾಲಿ ವಾಸ ಲಗ್ಗೆರೆ, ವಿಶಾಲ್ ಮಾರ್ಟ್ ಹತ್ತಿರ, ಮುನೇಶ್ವರ ದೇವಸ್ಥಾನ ರಸ್ತೆ, ಬೆಂಗಳೂರು

11) ಸಂದೀಪ್ ಬಿನ್ ನಾಗರಾಜ್ 25 ವರ್ಷ, ಪ್ರೆಸ್‌ನಲ್ಲಿ ಕೆಲಸ, ಆಂಜನೇಯ್ಯ ಬಡಾವಣೆ 2ನೆ ಕ್ರಾಸ್ ದಾವಣಗೆರೆ

12) ಸುರೇಶ್ ಆರ್ @ ಸೂರ್ಯಪ್ರಕಾಶ್ ಬಿನ್ ರಮೇಶ್ 38 ವರ್ಷ, ಆರ್ ಟಿಐ ಕಾರ್ಯಕರ್ತ, ಶ್ರೀರಾಮನಗರ ದಾವಣಗೆರೆ

13) ಶಿವಪ್ಪ ಎ.ಕೆ @ ಕಬ್ಬಡಿ ಶಿವು @ ಚಿಕ್ಕನಹಳ್ಳಿ ಶಿವು ಬಿನ್ ಮಂಜಪ್ಪ ನಲ್ಕುಂದ 35 ವರ್ಷ ಕೂಲಿ ಕೆಲಸ ಹಳೆ ಚಿಕ್ಕನಹಳ್ಳಿ ದಾವಣಗೆರೆ

14) ವಿಜಯನಾಯ್ಕ್ @ ಗಡ್ಡ ವಿಜಿ ಬಿನ್ ಕೃಷ್ಣಾನಾಯ್ಕ್ 31 ವರ್ಷ ರಿಯಲ್ ಎಸ್ಟೇಟ್ ಕೆಲಸ ಭಾರತ್ ಕಾಲೋನಿ 5ನೇ ಕ್ರಾಸ್ ದಾವಣಗೆರೆ

15) ವಿನಯ ಬಿನ್ ಪರಮೇಶ್ ನಾಯ್ಕ್ 25 ವರ್ಷ ತರಕಾರಿ ವ್ಯಾಪಾರ ಸರಸ್ವತಿ ಬಡಾವನೆ ಡಾಬಾಸ್ಟಾಪ್ ಹತ್ತಿರ ದಾವಣಗೆರೆ

16) ಧನಂಜಯ @ ಧನು ಬಿನ್ ನಾಗರಾಜ್ 35 ವರ್ಷ ಬೋನ್ಸರ್ ಕೆಲಸ ತೋಳಹುಣಸೆ ಕೆಳಗಿನ ಹಟ್ಟಿ ದಾವಣಗೆರೆ

17) ರವಿ @ ಹದಡಿ ರವಿ ಬಿನ್ ತಿಪ್ಪಣ್ಣ 45 ವರ್ಷ ವ್ಯವಸಾಯ ಹದಡಿ ಗ್ರಾಮ ದಾವಣಗೆರೆ

18) ಕಡ್ಡಿ ರಘು ಬಿನ್ ಬಸವರಾಜಪ್ಪ 38 ವರ್ಷ ಮೊಟ್ಟೆ ವ್ಯಾಪಾರ ದುರ್ಗಮ್ಮನ ದೇವಸ್ಥಾನದ ಹತ್ತಿರ ನಿಟ್ಟುವಳ್ಳಿ ದಾವಣಗೆರೆ

19) ಮಂಜುನಾಥ್ ಎಂ @ ಕಾರದಪುಡಿಮಂಜ ಬಿನ್ ಮಹೇಶಪ್ಪ 23 ವರ್ಷ ತರಕಾರಿ ವ್ಯಾಪಾರ ಹಳೆ ಚಿಕ್ಕನಹಳ್ಳಿ ದಾವಣಗೆರೆ

20) ಸಂತೋಷ್ ಕುಮಾರ್ @ ಇಟಗಿ ಸಂತು ಬಿನ್ ಚಂದ್ರಪ್ಪ 35 ವರ್ಷ ರಿಯಲ್ ಎಸ್ಟೇಟ್ ಕೆಲಸ, ಭಾರತ್ ಕಾಲೋನಿ 6ನೇ ಕ್ರಾಸ್ ದಾವಣಗೆರೆ

ಈ ಪ್ರಕರಣದಲ್ಲಿ ಆರೋಪಿತರು ಕೃತ್ಯಕ್ಕೆ ಉಪಯೋಗಿಸಿದ್ದ ಆಟೋ, ಬೈಕ್‌ಗಳು, ಲಾಂಗ್ ಗಳು, ಚಾಕುಗಳು, 3 ಜನ ಆರೋಪಿತರು ಕೃತ್ಯ ನಡೆದ ಸಮಯದಲ್ಲಿ ಧರಿಸಿದ್ದ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಆರೋಪಿತರಲ್ಲದೇ ಇನ್ನೂ ಕೆಲವು ಜನ ಆರೋಪಿತರು ಸದರಿ ಪ್ರಕಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು ತನಿಖೆ ಮುಂದುವರೆದಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

Exit mobile version