Site icon Kannada News-suddikshana

EXCLUSIVE: “ನಾನು ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟಬೇಕೆಂಬ” ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ವರ ಮಾತಿನ ಹಿಂದಿದೆ ರಣತಂತ್ರ!

ಭದ್ರಾವತಿ

SUDDIKSHANA KANNADA NEWS/ DAVANAGERE/DATE:09_09_2025

ಶಿವಮೊಗ್ಗ: ನಾನು ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟಬೇಕು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದ ಭದ್ರಾವತಿ ಶಾಸಕ ಬಿ. ಕೆ. ಸಂಗಮೇಶ್ವರ ಅವರು ಈ ಮಾತು ಹೇಳಲು ಕಾರಣ ಏನೆಂಬುದೇ ಇಂಟ್ರೆಸ್ಟಿಂಗ್.

READ ALSO THIS STORY: “ಕೂಗಿದ್ದು ಯಾಸಿನ್ ಜಿಂದಾಬಾದ್ ಎಂದು – ಎಡಿಟ್ ಮಾಡಿ ಪಾಕಿಸ್ತಾನ ಜಿಂದಾಬಾದ್ ಎಂದಾಗಿಸಿ ವಿಡಿಯೋ ವೈರಲ್”: ಕಾಂಗ್ರೆಸ್ ಮುಖಂಡ ಸಿಎಂ ಖಾದರ್!

ಭದ್ರಾವತಿಯಲ್ಲಿ ನಾಲ್ಕು ಬಾರಿ ಶಾಸಕರಾಗಿ ಬಿ. ಕೆ. ಸಂಗಮೇಶ್ವರ ಅವರು ಜನಪ್ರಿಯ ನಾಯಕ. ಕಾಂಗ್ರೆಸ್ ನಲ್ಲಿ ಪ್ರಶ್ನಾತೀತ ನಾಯಕರು ಎಂಬುದರಲ್ಲಿ ಎರಡು ಮಾತಿಲ್ಲ. ಭದ್ರಾವತಿ ತಾಲೂಕಿನಲ್ಲಿ ಲಿಂಗಾಯತ ಸಮುದಾಯ, ಒಕ್ಕಲಿಗ ಸಮುದಾಯ ಹಾಗೂ ಮುಸ್ಲಿಂ ಸಮುದಾಯ ಹೆಚ್ಚಾಗಿದೆ. ಮುಸ್ಲಿಂರು ಯಾವ ಪಕ್ಷ ಬೆಂಬಲಿಸುತ್ತಾರೋ ಅವರೇ ಗೆದ್ದಿರುವುದು ಈ ಕ್ಷೇತ್ರದ ಇತಿಹಾಸ. ಮುಸ್ಲಿಂರು ಮತ್ತು ಲಿಂಗಾಯತರ ಮತಗಳ ಮೂಲಕ ಸಂಗಮೇಶ್ವರ ಅವರು ಗೆಲ್ಲುತ್ತಲೇ ಬರುತ್ತಿದ್ದಾರೆ. ಇನ್ನು ಒಕ್ಕಲಿಗ ಸಮುದಾಯವು ಅಪ್ಪಾಜಿ ಗೌಡ ಹಾಗೂ ಅವರ ಕುಟುಂಬದ ಬೆನ್ನಿಗೆ ನಿಂತಿದೆ. ಹಾಗಾಗಿ, ಭದ್ರಾವತಿಯಲ್ಲಿ ಬಿಜೆಪಿ ಒಮ್ಮೆಯೂ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿಲ್ಲ ಎನ್ನೋದು ಇತಿಹಾಸ.

ಭದ್ರಾವತಿಯಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ನಾನು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬೇಕೆಂಬ ಅಪೇಕ್ಷೆ ಬಯಸಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಂಗಮೇಶ್ವರ ಅವರ ಈ ನಡೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಗಣೇಶ್ ಅವರನ್ನು ಭದ್ರಾವತಿ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವ ಆಸೆ ಸಂಗಮೇಶ್ವರ ಅವರದ್ದು. ಈಗಗಾಲೇ ಗಣೇಶ್ ಅವರು ಕ್ಷೇತ್ರಾದ್ಯಂತ
ಓಡಾಡಿ ಚಿರಪರಿಚಿತರಾಗಿದ್ದಾರೆ. ಯುವ ನಾಯಕ ಎಂದೇ ಬಿಂಬಿತವಾಗಿದ್ದಾರೆ. ಒಂದು ವೇಳೆ ಕ್ಷೇತ್ರದಲ್ಲಿ ತನ್ನ ಪುತ್ರನನ್ನು ಕಣಕ್ಕಿಳಿಸುವ ಗುರಿ ಸಂಗಮೇಶ್ವರ ಅವರು ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಮುಸ್ಲಿಂ ಸಮುದಾಯ ತಮ್ಮ ಕುಟುಂಬದ ಜೊತೆ ನಿಲ್ಲಲಿ ಎಂಬ ಕಾರಣಕ್ಕೆ ಈ ಹೇಳಿಕೆ ನೀಡಿದ್ದಾರೆ. ಇದು ಮುಸ್ಲಿಂ ಸಮುದಾಯದ ಓಲೈಕೆಯಾದರೂ ಮುಂಬರುವ ಚುನಾವಣೆಗೆ ಈಗಿನಿಂದಲೇ ರಣತಂತ್ರ ಹೆಣೆದಿರುವುದು ಸ್ಪಷ್ಟವಾಗಿದೆ.

ನಿಮ್ಮ ಮನೆಯ ಮಗನಾಗಿ ಕೊನೆಯವರೆಗೆ ಗಣೇಶ ಇರುತ್ತಾನೆ. ನಿಮ್ಮ ಆಶೀರ್ವಾದ ಪುತ್ರ ಗಣೇಶನ ಮೇಲಿರಲಿ. ಭದ್ರಾವತಿಯ ತರೀಕೆರೆ ರಸ್ತೆಯಲ್ಲಿನ ಗಾಂಧಿ ವೃತ್ತದಲ್ಲಿನ ವಿಡಿಯೋ ವೈರಲ್ ಆದ ಬಳಿಕ ನಾನು ಮುಂದಿನ
ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟಬೇಕೆಂಬ ಸಂಗಮೇಶ್ವರರ ಈ ಮಾತು ವಿವಾದದ ಬಿರುಗಾಳಿ ಎಬ್ಬಿಸಿದೆ.

Exit mobile version