Site icon Kannada News-suddikshana

ಮನೆ ಕಳ್ಳತನ ಮತ್ತು ಬೈಕ್ ಕಳವು: ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರ ಬಂಧನ!

SUDDIKSHANA KANNADA NEWS/ DAVANAGERE/ DATE-25-06-2025

ದಾವಣಗೆರೆ: ಮನೆ ಕಳ್ಳತನ ಮತ್ತು ಬೈಕ್ ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 1,6000 ರೂಪಾಯಿ ಮೌಲ್ಯದ ಆರು ದ್ವಿಚಕ್ರ ವಾಹನಗಳು ಮತ್ತು 60 ಸಾವಿರ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

ದಾವಣಗೆರೆ ತಾಲೂಕಿನ ದೇವರಹಟ್ಟಿ ಗ್ರಾಮದ ಮಲ್ಲಿಕ್ ರಿಹಾನ್ ಎಂಬುವವರು ಕಳೆದ ಜೂನ್ 21ರಂದು ರಾತ್ರಿ ಸಮಯದಲ್ಲಿ ಮನೆಯ ಬಾಗಿಲ ಬೋಲ್ಟ್ ನ್ನು ಹಾಕದೇ ಮಲಗಿದ್ದು ರಾತ್ರಿ ಯಾರೋ ಕಳ್ಳರು ಮನೆಯ ಒಳಗೆ ಪ್ರವೇಶ ಮಾಡಿ ಗಾಡ್ರೇಜ್ ಬೀರು ನಲ್ಲಿಟ್ಟಿದ್ದ 60,000 ರೂ ಹಣ ಮತ್ತು ಒಂದು ಮೊಬೈಲ್ ಫೋನ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದಾವಣಗೆರೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು.

ಗ್ರಾಮಾಂತರ ಠಾಣೆಯ ಪಿಐ ಕಿರಣ್ ಕುಮಾರ್ ಅವರ ನೇತೃತ್ವದಲ್ಲಿ ಪಿಎಸ್‌ಐ ಜೋವಿತ್ ರಾಜ್ ಹಾಗೂ ಸಿಬ್ಬಂದಿ ನಾಗಭೂಷಣ್, ಮಹಮ್ಮದ್‌ಯುಸುಫ್ ಅತ್ತಾರ್, ವೀರೇಶ್ ಪಿ.ಎಂ, ಹನುಮಂತಪ್ಪ ಇವರೊಂದಿಗೆ ಆರೋಪಿ ದಾವಣಗೆರೆಯ ಎಂಸಿಸಿ ಎ ಬ್ಲಾಕ್ ನ ಆಸಿಫ್ ಖಾನ್ @ ಫಟ್ಕಾ ಸೇರಿದಂತೆ ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಮನೆಯಲ್ಲಿ ಕಳವು ಮಾಡಿದ್ದ 60,000 ರೂ ನಗದು ಮತ್ತು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಳುವಾಗಿದ್ದ 1 ಬೈಕ್, ಬಡಾವಣೆ ಠಾಣಾ ಸರಹದ್ದಿನಲ್ಲಿ ಕಳವು ಮಾಡಿದ್ದ 3 ದ್ವಿ ಚಕ್ರ ವಾಹನಗಳು, ಗಾಂಧಿನಗರ ಪೊಲೀಸ್ ಠಾಣಾ ಸರಹದ್ದಿನ 1 ಬೈಕ್, ಕೆಟಿಜೆ ನಗರ ಪೊಲೀಸ್ ಠಾಣೆಯ ಸರಹದ್ದಿನ 1 ಬೈಕ್ ಸೇರಿದಂತೆ ಒಟ್ಟು 6 ದ್ವಿಚಕ್ರ ವಾಹನಗಳು ಒಟ್ಟು ಬೆಲೆ 1,60,000 ರೂ ಮೌಲ್ಯದ್ದಾಗಿದ್ದು, ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಪ್ರಾಪ್ತ ಬಾಲಕರನ್ನು ರಿಮ್ಯಂಡ್ ಹೋಮ್ ಗೆ ಕಳಿಸಲಾಗಿದೆ.

ಪತ್ತೆ ಕಾರ್ಯದಲ್ಲಿ ಭಾಗಿಯಾದ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಾದ ಪಿಐ ಕಿರಣ್ ಕುಮಾರ್ ಇ.ವೈ., ಪಿಎಸ್‌ಐ ಜೋವಿತ್ ರಾಜ್,ಠಾಣಾ ಸಿಬ್ಬಂದಿಗಳಾದ ನಾಗಭೂಷಣ್, ಮಹಮ್ಮದ್‌ಯುಸುಫ್ ಅತ್ತಾರ್, ವೀರೇಶ್ ಪಿ.ಎಂ, ಹನುಮಂತಪ್ಪ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.

Exit mobile version