Site icon Kannada News-suddikshana

Davanagere: ದಾವಣಗೆರೆಯ ನಂದಿತಾವರೆ ಗ್ರಾಮದಲ್ಲಿ ಕಳ್ಳತನ ಮಾಡಿದ್ದ ಶಿವಮೊಗ್ಗದ ಮೂವರು ಹಣ್ಣಿನ ವ್ಯಾಪಾರಿಗಳು ಸಿಕ್ಕಿಬಿದ್ದಿದ್ದೇಗೆ…?

MALEBENNURU POLICE ARREST

MALEBENNURU POLICE ARREST

SUDDIKSHANA KANNADA NEWS/ DAVANAGERE/ DATE:23-08-2023

ದಾವಣಗೆರೆ (Davanagere) : ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಂದಿತಾವರೆ ಗ್ರಾಮದಲ್ಲಿ ಬೀಗ ಹಾಕಿದ್ದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಲೇಬೆನ್ನೂರು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗದ ಹಣ್ಣಿನ ವ್ಯಾಪಾರಿಗಳಾದ ಮಹಮ್ಮದ್ ಕರೀಂ ಅಲಿಯಾಸ್ ಕರೀಂ(22, ) ಮಹಮ್ಮದ್ ಶಬಾಜ್ ಅಲಿಯಾಸ್ ಶಾಬಾ (೨೧) ತಬ್ರೇಜ್ ಅಹಮ್ಮದ್ (36) ಬಂಧಿತರು. ಆರೋಪಿಗಳಿಂದ ಒಟ್ಟು 38 ಗ್ರಾಂ ತೂಕದ ಸುಮಾರು 1 ಲಕ್ಷದ 90 ಸಾವಿರ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು, 3 ಸಾವಿರ ರೂಪಾಯಿ ಮೌಲ್ಯದ ಬೆಳ್ಳಿಯ ಉಡುದಾರ ಮತ್ತು ಕೃತ್ಯಕ್ಕೆ ಉಪಯೋಗಿಸಿದ್ದ 2 ಆಟೋಗಳು, 2 ಮೊಬೈಲ್ ಗಳು ಹಾಗೂ ಕಬ್ಬಿಣದ ರಾಡ್ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಸುದ್ದಿಯನ್ನೂ ಓದಿ: 

ಒಂದೂವರೆ ವರ್ಷದ ಪೋರನ ಟ್ಯಾಲೆಂಟ್ ಗೆ ಫಿದಾ ಗ್ಯಾರಂಟಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ

ಆಗಸ್ಟ್ 11 ರಂದು ದಾವಣಗೆರೆ (Davanagere) ಜಿಲ್ಲೆ ಹರಿಹರ ತಾಲೂಕಿನ ನಂದಿತಾವರೆ ಗ್ರಾಮದ ನಾಗಮ್ಮ ಎಂಬುವವರು ಸಂಬಂಧಿಕರ ಮನೆಗೆ ಹೋಗಿದ್ದರು. ಅಂದು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ಮಧ್ಯೆ ಕಳ್ಳರು ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಮನೆಯಲ್ಲಿದ್ದ 10 ಸಾವಿರ ರೂಪಾಯಿ, 2 ಲಕ್ಷದ 16 ಸಾವಿರ ರೂಪಾಯಿ ಮೌಲ್ಯದ ಬಂಗಾರ, ಬೆಳ್ಳಿ ಆಭರಣ ಕಳ್ಳತನ ಮಾಡಲಾಗಿದೆ ಎಂದು ನಾಗಮ್ಮರು ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ ಹಾಗೂ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ. ಎಸ್. ಬಸವರಾಜ್ ರ ಮಾರ್ಗದರ್ಶನದಲ್ಲಿ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ರವರು ಹಾಗೂ ಸಿಬ್ಬಂದಿಯ ಪೊಲೀಸ್ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

ಆರೋಪಿಗಳನ್ನು ಬಂಧಿಸಿ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಮಲೇಬೆನ್ನೂರು ಸಿಪಿಐ ಸುರೇಶ ಸಗರಿ, ಪಿಎಸ್‌ಐ ಪ್ರಭು, ಡಿ ಕೆಳಗಿನಮನಿ, ಜಿಲ್ಲಾ ಪೊಲೀಸ್ ಕಚೇರಿಯ ಮಂಜುನಾಥ, ಎಸ್ ಕಲ್ಲೇದೇವರ ಹಾಗೂ ಸಿಬ್ಬಂದಿ ಫೈರೋಜ್ ಖಾನ್, ಮಂಜಪ್ಪ, ಶಿವಕುಮಾರ, ವೆಂಕಟರಮಣ, ವಿರೇಶಪ್ಪ, ಕಡೆಮನಿ ನಾಗಪ್ಪ, ಸಂತೋಷ ಕುಮಾರ್ ಅವರನ್ನು ಎಸ್ಪಿ ಡಾ. ಕೆ. ಅರುಣ್ ಅವರು ಪ್ರಶಂಸಿಸಿದ್ದಾರೆ.

Exit mobile version