ನೆಟ್ಸ್ ಅಲ್ಲಿ ಅಭ್ಯಾಸ ಮಾಡುವಾಗ ಟೀಂ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್ ದಯಾ ಅವರು ಎಸೆದ ಬಾಲ್ ರೋಹಿತ್ ಶರ್ಮಾರ ಎಡಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು, ನೋವು ತಾಳಲಾಗದೆ ಅಭ್ಯಾಸವನ್ನು ಮೊಟಕುಗೊಳಿಸಿದರು.
ನಿಲ್ಲಲು ಕೂಡ ಸಾಧ್ಯವಾಗದ ಕಾರಣ ಭಾನುವಾರದ 2ನೇ ಅವಧಿಯ ಅಭ್ಯಾಸದಿಂದ ರೋಹಿತ್ ಹೊರಗುಳಿದರು.ಇದು ಟೀಂ ಇಂಡಿಯಾಗೆ ಚಿಂತೆಯನ್ನು ಹೆಚ್ಚಿಸಿತ್ತು. 4ನೇ ಪಂದ್ಯದಲ್ಲಿ ನಾಯಕ ಕಣಕ್ಕಿಳಿಯುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಎಲ್ಲಾರಲ್ಲೂ ಮೂಡಿತ್ತು. ಈಗ ರೋಹಿತ್ ಶರ್ಮಾ ಅವರ ಗಾಯದ ಕುರಿತು ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದೆ.
ಆದರೆ ಇದೀಗ ತಮ್ಮ ಗಾಯದ ಬಗ್ಗೆ ಮಾತನಾಡಿರುವ ರೋಹಿತ್ ಶರ್ಮಾ ಅಭ್ಯಾಸದ ಸಮಯದಲ್ಲಿ ನನ್ನ ಮೊಣಕಾಲಿಗೆ ಗಾಯವಾಗಿತ್ತು, ಇದೀಗ ನಾನು ಗಾಯದಿಂದ ಸಂಪೂರ್ಣ ಗುಣಮುಖನಾಗಿದ್ದು 4ನೇ ಟೆಸ್ಟ್ ಪಂದ್ಯವಾಡಲು ನಾನು ಫಿಟ್ ಆಗಿದ್ದೇನೆ ಎಂಬ ಸಂದೇಶವನ್ನು ಸ್ವತಃ ರೋಹಿತ್ ಅವರೇ ಕೊಟ್ಟಿದ್ದಾರೆ.