Site icon Kannada News-suddikshana

ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬೀದಿ ಬೀದಿಗಳಲ್ಲೂ ಪಾಕ್ ಪ್ರೇಮಿಗಳ ಸಂಖ್ಯೆ ಹೆಚ್ಚಾಗಿದೆಯಂತೆ!

ಸಿದ್ದರಾಮಯ್ಯ

SUDDIKSHANA KANNADA NEWS/DAVANAGERE/DATE:30_10_2025

ಬೆಂಗಳೂರು: ವಿಧಾನಸೌಧದಿಂದ ಹಿಡಿದು ಬೀದಿ ಬೀದಿಯಲ್ಲೂ ಪಾಕ್ ಪ್ರೇಮಿಗಳ ಸಂಖ್ಯೆ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಾಮಾನ್ಯವಾಗಿ ಬಿಟ್ಟಿದೆ ಎಂದು ಬಿಜೆಪಿ ಕಿಡಿಕಾರಿದೆ.

READ ALSO THIS STORY: 3 ವರ್ಷವಾದ್ರೂ ಇಲ್ಲೇ ಠಿಕಾಣಿ ಹೂಡಿರೋ ಪಾಲಿಕೆ ಆಯುಕ್ತೆಯಿಂದ ಸಚಿವ, ಸಂಸದೆಗೆ ಕೆಟ್ಟ ಹೆಸರು: ಮಾದಿಗ ದಂಡೋರ ಸಮಿತಿ ಗಂಭೀರ ಆರೋಪ!

ಇದೀಗ ಶಂಕಿತ ಮುಸ್ಲಿಂ ಬ್ರದರ್ ಒಬ್ಬ ಸಹಕಾರಿ ಬ್ಯಾಂಕ್‌ನ ವೈಫೈ ಯೂಸರ್ ಐಡಿಯನ್ನು ಪಾಕಿಸ್ಥಾನ್ ಜಿಂದಬಾದ್ ಎಂದು ಬದಲಾಯಿಸಿ ತನ್ನ ನಿಷ್ಠೆಯನ್ನು ಪಾಕ್ ಪರ ತೋರಿಸಿದ್ದಾನೆ‌ ಎಂದು ಸೋಷಿಯಲ್ ಮೀಡಿಯಾದಲ್ಲಿ ಆರೋಪಿಸಿದೆ.

ಪಾಕ್ ಪರ ಘೋಷಣೆ, ಗೋಡೆ ಬರಹದ ಸರಣಿ ಘಟನೆಗಳನ್ನು ನೋಡಿದಾಗ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯೋ ಅಥವಾ ಇಸ್ಲಾಮಾಬಾದ್ ಪ್ರದೇಶದ ಮುಖ್ಯಮಂತ್ರಿಯೋ ಎಂಬ ಅನುಮಾನ ಕಾಡುತ್ತಿದೆ! ಎಂದು ಹೇಳಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯರೇ , ಭಾರತ್ ಮಾತಾ ಕೀ ಜೈ ಅನ್ನುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ನೀವು, ಪಾಕಿಸ್ಥಾನ್ ಜಿಂದಾಬಾದ್ ಎನ್ನುವವರ ಮೇಲೆ ಯಾಕೆ ಮಮತೆ ತೋರುತ್ತೀರಿ? ಎಂದು ಭಾರತೀಯ ಜನತಾ ಪಾರ್ಟಿ ಪ್ರಶ್ನಿಸಿದೆ.

Exit mobile version