Site icon Kannada News-suddikshana

ದಾವಣಗೆರೆ ಜನರ ಸಾಹುಕಾರ, ಅಭಿವೃದ್ಧಿಯ ಸರದಾರ: ಮೊಹಮ್ಮದ್ ಜಿಕ್ರಿಯಾ

ಮೊಹಮ್ಮದ್ ಜಿಕ್ರಿಯಾ, ಜಿಲ್ಲಾಧ್ಯಕ್ಷರು, ದಾವಣಗೆರೆ ಜವಾಹರ್ ಜಿಲ್ಲಾ ಬಾಲ್ ಮಂಚ್

ದಾವಣಗೆರೆ ಧಣಿ, ಎಲ್ಲಾ ವರ್ಗದವರ ಕಣ್ಮಣಿ, ಜನರೊಳಿತಿಗಾಗಿ ಹಗಲಿರುಳು ಯೋಚಿಸುವ ನಾಯಕರೆಂದರೆ ಅದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು. ಕಾರ್ಯವೈಖರಿಯಿಂದಲೇ ಪ್ರತಿಯೊಬ್ಬರನ್ನೂ ಸೂಜಿಗಲ್ಲಿನಂತೆ ಸೆಳೆಯುವ ರಾಜಕಾರಣಿ. ರಾಜ್ಯ, ರಾಷ್ಟ್ರ ಮಾತ್ರವಲ್ಲ ವಿಶ್ವದ ಭೂಪಟದಲ್ಲಿ ಗುರುತಿಸುವಂತೆ ಮಾಡಿರುವ ಜನರ ಪಾಲಿನ ಚಾಣಾಕ್ಷ ನಡೆಯ ನಾಯಕ.

ಸಚಿವರಾಗಿ, ಶಾಸಕರಾಗಿ ಜನಸಮೂಹದ ಏಳಿಗೆಗೆ ದುಡಿಯುವ ಲೀಡರ್. ಸಂಕಷ್ಟ, ಕಷ್ಟ ಎಂದು ಬರುವವರ ಕಷ್ಟಕಾರ್ಪಣ್ಯ ಪರಿಹರಿಸುವ ಸಾಹುಕಾರರು. ಜನರ ನಾಡಿಮಿಡಿತವೂ ಗೊತ್ತು. ರಾಜಕೀಯ ಪಟ್ಟು ಗೊತ್ತು. ನೇರವಾಗಿ ಹೇಳುವ ನಿಷ್ಠುರರಾದರೂ ಹೃದಯ ಮಾತ್ರ ಮೃದು. ಮಾತು ಕಠಿಣವೆನಿಸಿದರೂ ಬಡವರು, ಹಿಂದುಳಿದವರು, ಶೋಷಿತ ಸಮುದಾಯದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದವರ ನೆಚ್ಚಿನ ನಾಯಕರು.

ಅಧಿಕಾರಕ್ಕೆ ಬಂದಾಗಲೆಲ್ಲಾ ದಾವಣಗೆರೆ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತವರು. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಸಕಲ ವರ್ಗದ ವಿಶ್ವಾಸವನ್ನೂ ಗಳಿಸಿದ್ದಾರೆ. ಯಾರು ಏನೇ ಹೇಳಿದರೂ ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ರಾಜಿಯಾಗದ ನಿಪುಣ ಆಡಳಿತಗಾರರು. ಜನರ ಪ್ರೀತಿ ವಿಶ್ವಾಸ ಗಳಿಸಿರುವ ಜೊತೆಗೆ ಯಾವುದೇ ಭೇದ ಭಾವ ಮಾಡದೆ ಎಲ್ಲರೊಳಗೊಂದಾಗಿ ಬದುಕುವ ಮತ್ತು ಎಲ್ಲರನ್ನೂ ಸಹ ಒಟ್ಟಿಗೆ ಕರೆದುಕೊಂಡು ಹೋಗುವ ನಾಯಕರು. ಎಲ್ಲರ ಕಷ್ಟಗಳನ್ನೂ ಅರ್ಥ ಮಾಡಿಕೊಳ್ಳುವ ಜೊತೆಗೆ ಸಮಯ ಬಂದಾಗ ದಂಡಿಸುವುದೂ ಗೊತ್ತು. ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸುವ, ಕೊಟ್ಟ ಮಾತಿನಂತೆ ನಡೆಯುವ, ಅಂದುಕೊಂಡದ್ದನ್ನು ಸಾಧಿಸಿಯೇ ಸಾಧಿಸುವ ಛಲದಂಕ ಮಲ್ಲರು ಮಲ್ಲಣ್ಣ.

ದಾವಣಗೆರೆ ಜಿಲ್ಲೆಯಾಗಿ ತುಂಬಾನೇ ದಶಕಗಳು ಏನೂ ಆಗಿಲ್ಲ. 1997 ರಲ್ಲಿ ಆಗಿನ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಜೆ. ಹೆಚ್. ಪಟೇಲ್ ಅವರು ದಾವಣಗೆರೆ ಜಿಲ್ಲೆ ಘೋಷಿಸಿದರು. ಅಂದರೆ ಕೇವಲ 28 ವರ್ಷಗಳಲ್ಲಿ ದಾವಣಗೆರೆ ರಾಜ್ಯದ ಬೇರೆ ಜಿಲ್ಲೆಗಳ ಜೊತೆ ಮುಂಚೂಣಿಯಲ್ಲಿರುವುದು ವಿಶೇಷ. ಮೈಸೂರು, ದಕ್ಷಿಣ ಕನ್ನಡದಂಥ ಜಿಲ್ಲೆಗಳಿಗೂ ಕಡಿಮೆ ಇಲ್ಲದಂತೆ ವೇಗವಾಗಿ ಬೆಳೆದ ಜಿಲ್ಲೆ ದಾವಣಗೆರೆ. ಇದಕ್ಕೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ನೀಡಿರುವ ಕೊಡುಗೆ ಅಪಾರ.

ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಮುಂದುವರಿದಿರುವ, ಮುಂದುವರಿಯುತ್ತಿರುವ ದಾವಣಗೆರೆ ಜಿಲ್ಲೆಯು ಸ್ಮಾರ್ಟ್ ಸಿಟಿ ಯೋಜನೆಗೆ ಸೇರಲು ಪ್ರಮುಖ ಕಾರಣೀಕರ್ತರು ಎಸ್. ಎಸ್. ಮಲ್ಲಿಕಾರ್ಜುನ್ ಅವರು. ರಾಜಕೀಯ, ಅಭಿವೃದ್ಧಿ, ಆರ್ಥಿಕ ಪ್ರಜ್ಞೆ ಇರುವ ಕಾರಣದಿಂದಲೇ ಇಷ್ಟು ಕಡಿಮೆ ಅವಧಿಯಲ್ಲಿ ದಾವಣಗೆರೆಯು ಇಷ್ಟೊಂದು ವೇಗವಾಗಿ ಬೆಳೆಯಲು ಕಾರಣ ಎಂದರೆ ಅತಿಶಯೋಕ್ತಿ ಅಲ್ಲ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪರ ಜೊತೆಗೂಡಿ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಮಾಡಿರುವ ಅಭಿವೃದ್ಧಿ, ಜನಪರ, ಬಡವರ ಕಾರ್ಯಗಳೇ ಅವರಿಗೆ ಶ್ರೀರಕ್ಷೆ. ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿರುವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಯಾವುದೇ ಚುನಾವಣೆಯಲ್ಲಿ ಗೆದ್ದರೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದು ಮಲ್ಲಿಕಾರ್ಜುನ್ ಅವರ ಕಾಲುಗುಣವೋ, ಕಾಕತಾಳೀಯವೋ. ಆದ್ರೆ, ಗೆದ್ದಾಗಲೆಲ್ಲಾ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದಂತೂ ವಿಶೇಷವೇ ಸರಿ.

ಅಧಿಕಾರ ಇರಲಿ, ಇಲ್ಲದಿರಲಿ ಜನರಿಗೆ ಸಮಸ್ಯೆ ಎಂದಾಕ್ಷಣ ಸಿಡಿಯುವ ಗುಣ ಮಲ್ಲಿಕಾರ್ಜುನ್ ಅವರಲ್ಲಿದೆ. ಸಮಸ್ಯೆ ಬಗ್ಗೆ ಆಳವಾಗಿ ತಿಳಿದುಕೊಂಡೇ ಮಾತನಾಡುತ್ತಾರೆ, ಪರಿಹರಿಸಲು ಶ್ರಮಿಸುತ್ತಾರೆ. ಯಾವುದೇ ಆರೋಪ ಬಂದರೂ ಸಮರ್ಥವಾಗಿ ಎದುರಿಸುವ, ಸರಿಯಾದ ಉತ್ತರ ಕೊಡುವ ಮಲ್ಲಿಕಾರ್ಜುನ್ ಅವರ ಸಿಡಿಗುಂಡಿನ ಮಾತುಗಳು ಎಲ್ಲರಿಗೂ ಅಚ್ಚುಮೆಚ್ಚು.

ಎಸ್ ಎಸ್ ಎಂ ಬಾಲ್ಯ ಜೀವನ, ನಡೆದು ಬಂದ ಹಾದಿ:
ದೈವ ಭಕ್ತರು ಎಸ್. ಎಸ್. ಮಲ್ಲಿಕಾರ್ಜುನ್:

ಮೊದಲಿನಿಂದಲೂ ಶಾಮನೂರು ಶಿವಶಂಕರಪ್ಪರ ಕುಟುಂಬ ಎಂದರೆ ದೇವ ಭಕ್ತಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಪೂಜೆ, ಪುನಸ್ಕಾರ,  ಸ್ವಾಮೀಜಿಗಳ ಪಾದಪೂಜೆ ಸೇವೆ, ಆಶೀರ್ವಚನ ಸೇರಿದಂತೆ ದೇವರ ಬಗ್ಗೆ ಅಪಾರ ಭಕ್ತಿ ಉಳ್ಳಂಥ ಕುಟುಂಬ.

ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರೂ ಸಹ ದೈವಭಕ್ತರು. ಆಂಜನೇಯ ಸ್ವಾಮಿ, ಕಲ್ಲೇಶ್ವರ ದೇವರು ಸೇರಿದಂತೆ ಎಲ್ಲಾ ದೇವರನ್ನು ಪೂಜಿಸುವ ಮಲ್ಲಿಕಾರ್ಜುನ್ ಅವರು ಪೂಜಾ ಕೈಂಕರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಚಿತ್ರದುರ್ಗದ ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಡಾ. ಶ್ರೀ ಶಿವಮೂರ್ತಿ ಮಹಾಸ್ವಾಮೀಜಿ ಅವರಿಗೂ ಮಲ್ಲಣ್ಣ ಅಂದರೆ ಅಚ್ಚುಮೆಚ್ಚು. ರಂಜಾನ್ ನಲ್ಲಿ ಇಫ್ತಿಯಾರ್ ಕೂಟ, ದರ್ಗಾಗಳಿಗೆ ಭೇಟಿ ಸೇರಿದಂತೆ ಎಲ್ಲಾ ಧರ್ಮದವರ ಆಚರಣೆಯಲ್ಲಿಯೂ ಪಾಲ್ಗೊಳ್ಳುವ ಮೂಲಕ ಜಾತ್ಯಾತೀತ ನಾಯಕರೆನಿಸಿಕೊಂಡಿದ್ದಾರೆ.

ಸಿರಿಗೆರೆ ಶ್ರೀಗಳೇ ತರಳಬಾಳು ಹುಣ್ಣಿಮೆ ನಡೆದಾಗ ವೇದಿಕೆಯಲ್ಲಿಯೇ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಸಹಾಯವನ್ನು ಸ್ಮರಿಸಿದ್ದರು. ಗಲಾಟೆಯಾದಾಗ ಆಸ್ಪತ್ರೆಗೆ ಸೇರಿದ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡುವ ಮೂಲಕ ಹೃದಯವಂತಿಕೆ ಮೆರೆದಿದ್ದರು. ಇದನ್ನು ಭಾಷಣದಲ್ಲಿಯೇ ಶ್ರೀಗಳು ಪ್ರಸ್ತಾಪ ಮಾಡಿದ್ದರು. ಮನೆಗೆ ಬರುವ ಎಲ್ಲಾ ಮಠಗಳ ಶ್ರೀಗಳಿಗೆ ಪ್ರೀತಿಯಿಂದ ನಮಸ್ಕರಿಸಿ, ಆಶೀರ್ವಾದ ಕೇಳುವ ಮಲ್ಲಿಕಾರ್ಜುನ್ ಅವರು ಕೊಡುವ ಗೌರವ ಎಲ್ಲರಿಗೂ ಆದರ್ಶವಾದದ್ದು. ಸುತ್ತೂರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಶ್ರೀ, ಹರಿಹರದ ವಚನಾನಂದ ಶ್ರೀಗಳು, ಬೆಳ್ಳೂಡಿಯ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳು, ಕಣ್ವಗುಪ್ಪೆ ಶ್ರೀ, ವಾಲ್ಮೀಕಿ ಮಠ ಪ್ರಸನ್ನಾನಂದ ಪುರಿ ಸ್ವಾಮೀಜಿ ಸೇರಿದಂತೆ ಎಲ್ಲಾ ಮಠಗಳ ಶ್ರೀಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಶ್ರೀಗಳನ್ನು ಸತ್ಕರಿಸಿ, ಪೂಜೆ ಸಲ್ಲಿಸಿ ಅವರಿಂದ ಆಶೀರ್ವಾದ ಪಡೆಯುವ ಮಲ್ಲಿಕಾರ್ಜುನ್ ಕುಟುಂಬವೂ ಸಹ ಅಷ್ಟೇ ದೈವಭಕ್ತ.

ಸರ್ವಧರ್ಮೀಯರ ಮನಗೆದ್ದ ಮಲ್ಲಣ್ಣ: ಮೊಹಮ್ಮದ್ ಜಿಕ್ರಿಯಾ

ಎಸ್. ಎಸ್. ಮಲ್ಲಿಕಾರ್ಜುನ್ ಅವರು ಎಂದೂ ಜಾತಿ, ಧರ್ಮ ಭೇದ ಮಾಡಿದವರಲ್ಲ. ಎಲ್ಲಾ ಧರ್ಮದವರನ್ನೂ ಸಮಾನವಾಗಿ ಕಾಣುವಾ ಸರ್ವಧರ್ಮೀಯರ ನಾಯಕ. ಜಾತ್ಯಾತೀತ ಧುರೀಣ.

ಅಭಿವೃದ್ಧಿ ವಿಚಾರ ಬಂದರೆ ತಾರತಮ್ಯ ಮಾಡುವವರಲ್ಲ. ದಾವಣಗೆರೆ ಸಿಂಗಾಪುರ ಮಾಡಬೇಕೆಂಬ ಕನಸು ಕಂಡಿರುವ ಮಲ್ಲಿಕಾರ್ಜುನ್ ಅವರು ಈ ನಿಟ್ಟಿನಲ್ಲಿ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಫಲಾನುಭವಿಗಳಿಗೆ ಈ ಪ್ರಯೋಜನ ಸಿಗುವಂತೆ ಮಾಡಿದ್ದಾರೆ. ಜೊತೆಗೆ ಅಭಿವೃದ್ಧಿಗೆ ಶಕ್ತಿ ಮೀರಿ ಅನುದಾನ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅನುದಾನವು ದಾವಣಗೆರೆ ಜಿಲ್ಲೆಗೆ ಸಾವಿರಾರು ಕೋಟಿ ರೂಪಾಯಿ ಬಂದಿದೆ ಎಂದರೆ ಮಲ್ಲಿಕಾರ್ಜುನ್ ಅವರ ಅಭಿವೃದ್ಧಿ ಪರ ಇರುವ ಕಾರ್ಯಪ್ರವೃತ್ತತೆ, ಕಾಳಜಿ, ದೂರದೃಷ್ಟಿತ್ವಕ್ಕೆ ಉತ್ತಮ ಉದಾಹರಣೆ.

ಶಾಂತಿ ಕಾಪಾಡಲು ಕ್ರಮ:

ದಾವಣಗೆರೆಯಲ್ಲಿ ಶಾಂತಿ ನೆಲೆಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಕಳೆದ ವರ್ಷ ಮತ್ತು ಈ ವರ್ಷ ಗಣೇಶೋತ್ಸವದ ವೇಳೆ ಗಲಾಟೆ ನಡೆದಾಗ ಕೂಡಲೇ ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಮಾತ್ರವಲ್ಲ, ಪೊಲೀಸ್ ಇಲಾಖೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಬೇರೆ ಜಿಲ್ಲೆಗಳಲ್ಲಿ ಇಂಥ ಘಟನೆ ನಡೆದಿದ್ದರೆ ದೊಡ್ಡ ಗಲಾಟೆಗಳೇ ಆಗುತ್ತಿದ್ದವು. ಆದ್ರೆ, ಮೊಳಕೆಯಲ್ಲೇ ಚಿವುಟಿ ಹಾಕುವ ಮೂಲಕ ಬೆಣ್ಣೆನಗರಿ ಸಾಮರಸ್ಯ ನಗರಿ ಎಂಬ ಹೆಸರು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಯಾವುದೇ ಧರ್ಮದವರಿರಲಿ ತಪ್ಪು ಮಾಡಿದ್ದರೆ ತಪ್ಪೇ. ತಪ್ಪು ಮಾಡಿದರೆ ಸುಮ್ಮನೆ ಬಿಡುವ ಜಾಯಮಾನ ಮಲ್ಲಿಕಾರ್ಜುನ್ ಅವರದ್ದಲ್ಲ. ದಾವಣಗೆರೆ ಯಾವಾಗಲೂ ಶಾಂತಿ, ಸಾಮರಸ್ಯದಿಂದ ಇರಬೇಕು. ಎಲ್ಲರೂ ಅಣ್ಣ ತಮ್ಮಂದಿರಂತೆ ಇರಬೇಕೆಂಬ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ. ಗಣೇಶೋತ್ಸವ ಮತ್ತು ಈದ್ ಮಿಲಾದ್ ಎರಡೂ ಹಬ್ಬಕ್ಕೆ ಡಿಜೆ ಸಿಸ್ಟಂಗೆ ಅನುಮತಿ ನೀಡಿಲ್ಲ. ಇದರಿಂದಾಗಿ ಸಾಂಪ್ರಾದಾಯಿಕವಾಗಿ ಎರಡೂ ಹಬ್ಬಗಳನ್ನು ಶಾಂತಿಯಿಂದ ಆಚರಿಸುವುದಕ್ಕೆ ಪ್ರಮುಖ ಕಾರಣ ಎಸ್. ಎಸ್. ಮಲ್ಲಿಕಾರ್ಜುನ್  ಅವರು ಕೈಗೊಂಡ ದಿಟ್ಟ ಕ್ರಮ.

ಗಣೇಶೋತ್ಸವ ಎಂದರೆ ಡಿಜೆ ಅಬ್ಬರವೇ ಇರುತಿತ್ತು. ಆದ್ರೆ, ಈ ಬಾರಿ ಕಲಾತಂಡಗಳಿಗೆ ಹೆಚ್ಚಿನ ಅವಕಾಶ ಸಿಕ್ಕಿದೆ. ವೀರಗಾಸೆ, ಕಂಸಾಳೆ, ಡೋಲು, ನಾಸಿಕ್ ಡೋಲು ಸೇರಿದಂತೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ಸಾಂಪ್ರಾದಾಯಿಕವಾಗಿ ಹಬ್ಬ ಆಚರಿಸಲು ಕಾರಣೀಕರ್ತರಾಗಿದ್ದಾರೆ. ಈ ನಿರ್ಧಾರಕ್ಕೆ ಕಲಾವಿದರು, ಜಾನಪದ ಕಲಾ ತಂಡಗಳು ಸಚಿವರನ್ನು ಹಾಡಿ ಹೊಗಳಿವೆ.

ಬಡವರಿಗೆ ಸಾವಿರಾರು ಸೂರು ಕೊಟ್ಟ ಧಣಿ:

ಇನ್ನು ಎಸ್. ಎಸ್. ಮಲ್ಲಿಕಾರ್ಜುನ್ ಅವರು ಮೊದಲಿನಿಂದಲೂ ಅಧಿಕಾರ ಇರಲಿ, ಇಲ್ಲದಿರಲಿ, ಜನಸೇವೆಯನ್ನೂ ಮಾತ್ರ ನಿಲ್ಲಿಸಿಯೇ ಇಲ್ಲ. ಕೊರೊನಾ ಸಂಕಷ್ಟದಲ್ಲಿ ದಾವಣಗೆರೆ ನಗರ ಜನರ ಪಾಲಿಗೆ ಆಪದ್ಭಾಂಧವರಾದರು. ಸಾವಿರಾರು ಮಂದಿಗೆ ಕೊರೊನಾ ಲಸಿಕೆ, ರೋಗಿಗಳಿಗೆ ಬೆಡ್, ಆಕ್ಸಿಜನ್ ಸೇರಿದಂತೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡಿದವರು. ರಾತ್ರಿ ಎಷ್ಟು ಹೊತ್ತಿಗೆ ಯಾವ ಜಾತಿಯವರಾಗಲೀ, ಧರ್ಮದವರಾಗಲೀ ಕರೆ ಮಾಡಿದರೆ ಸ್ವೀಕರಿಸಿ ನೆರವು ನೀಡಿದ ಕರುಣಾಮಯಿ.

ಈಗ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದರಿಂದ ಮತ್ತೆ ಅಭಿವೃದ್ಧಿಯ ಶಕೆ ಆರಂಭಗೊಂಡಿದೆ. ಮಲ್ಲಣ್ಣ ಎಂದರೆ ಅದೊಂದು ಅದ್ಭುತ ಶಕ್ತಿ. ಏನಿದ್ದರೂ ನೇರ ಮಾತು. ಕೆಲಸ ಆಗಬೇಕೆಂದುಕೊಂಡರೆ ಅದು ಎಷ್ಟೇ ಕಷ್ಟ ಸಾಧ್ಯವಾದರೂ ಮಾಡಿಸಿಕೊಂಡುವ ಬರುವ ಛಾತಿ ಅವರಲ್ಲಿದೆ.

ದಾವಣಗೆರೆ ಜಿಲ್ಲೆಯ ಜನರ ನೆಚ್ಚಿನ ಸಾಹುಕಾರರು, ಅಭಿವೃದ್ಧಿಯ ದಣಿವರಿಯದ ಧಣಿಗೆ 58ನೇ ವರ್ಷದ ಶುಭಾಶಯಗಳು. ದಾವಣಗೆರೆ ಜಿಲ್ಲೆ ಕಂಡ ಅಪರೂಪದ ನಾಯಕರಾದ ಅವರಿಗೆ ದೇವರು ಆರೋಗ್ಯ, ಆಯಸ್ಸು, ರಾಜಕೀಯದಲ್ಲಿ ಮತ್ತಷ್ಟು ಉನ್ನತ ಸ್ಥಾನಕ್ಕೆ ಏರಲು ಭಗವಂತ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇವೆ.

ಮೊಹಮ್ಮದ್ ಜಿಕ್ರಿಯಾ, ಜಿಲ್ಲಾಧ್ಯಕ್ಷರು, ದಾವಣಗೆರೆ ಜವಾಹರ್ ಜಿಲ್ಲಾ ಬಾಲ್ ಮಂಚ್
Exit mobile version