Site icon Kannada News-suddikshana

ಚಿಕನ್ ಮಾಡಲಿಲ್ಲವೆಂದು ಪತ್ನಿ ಕೊಂದಿದ್ದ ಪತಿಗೆ 6 ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ

SUDDIKSHANA KANNADA NEWS/ DAVANAGERE/ DATE:06-12-2023

ದಾವಣಗೆರೆ: ಚಿಕನ್ ಮಾಡಲಿಲ್ಲ ಎಂಬ ಕಾರಣಕ್ಕೆ ಪತ್ನಿ ಕೊಂದಿದ್ದ ಪತಿಗೆ ದಾವಣಗೆರೆಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಹರಿಹರ ತಾಲೂಕಿನ ಬನ್ನಿಕೋಡೠು ಗ್ರಾಮದ ಮಾಗನಹಳ್ಳಿ ಕೆಂಚಪ್ಪ ಶಿಕ್ಷೆಗೊಳಪಟ್ಟ ಅಪರಾಧಿ. ಕಳೆದ 2022ರ ಜೂನ್ 8ರಂದು ಹರಿಹರ ತಾಲೂಕಿನ ಉಕ್ಕಡಗಾತ್ರಿ ಗ್ರಾಮದಲ್ಲಿ ಶೀಲಾ ಎಂಬಾಕೆಯನ್ನು ಆಕೆಯ ಪತಿ ಚಿಕನ್ ಮಾಡಲಿಲ್ಲ ಎಂಬ ಕಾರಣಕ್ಕೆ ಚಾಕುವಿನಿಂದ ಎಡಭುಜಕ್ಕೆ ಹೊಡೆದು ಹತ್ಯೆ ಮಾಡಿದ್ದ. ಈ ಸಂಬಂಧ ಮೃತಳ ತಾಯಿ ಗುತ್ಯಮ್ಮ ಅವರು ಹರಿಹರ ಪೊಲೀಸರಿಗೆ ದೂರು ನೀಡಿದ್ದರು.

ಮಾಗನಹಳ್ಳಿ ಗ್ರಾಮದ ಕೆಂಚಪ್ಪ ತನ್ನ ಮಗಳಾದ ಶೀಲಾಳನ್ನು ಜೂನ್ 8ರಂದು ಸಂಜೆ 7 ಗಂಟೆ ಸುಮಾರಿಗೆ ಮದ್ಯಪಾನ ಮಾಡಿ ಬಂದು ಚಿಕನ್ ಮಾಡಿಲ್ಲವೆಂದು ಜಗಳ ತೆಗೆದು ಚಾಕುವಿನಿಂದ ಎಡಭುಜಕ್ಕೆ ಹೊಡೆದು ಕೊಲೆಮಾಡಿದ್ದಾನೆ. ತನ್ನ ಪುತ್ರಿಗೆ ನ್ಯಾಯ ದೊರಕಿಸಿಕೊಡುವಂತೆ ದೂರಿನಲ್ಲಿ ಒತ್ತಾಯಿಸಿದ್ದರು.

ಹರಿಹರ ವೃತ್ತ ನಿರೀಕ್ಷಕರೂ ಆದ ತನಿಖಾಧಿಕಾರಿ ಯು. ಸತೀಶ್ ಅವರು, ಪ್ರಕರಣದ ತನಿಖೆ ಮುಗಿಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜೆ.ವಿ. ವಿಜಯಾನಂದ ರವರು ಆರೋಪಿ ಕೆಂಚಪ್ಪ ತನ್ನ ಪತ್ನಿ ಕೊಲೆ ಮಾಡಿದ ಆರೋಪ ಸಾಬೀತಾಗಿದ್ದರಿಂದ ಆರು ವರ್ಷ ಕಾರಾಗೃಹ ಶಿಕ್ಷೆ ಹಾಗೂ 10,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ವಕೀಲ ಸತೀಶ ಕುಮಾರ್ ರವರು ನ್ಯಾಯ ಮಂಡನೆ ಮಾಡಿದ್ದರು.

ಈ ಕೊಲೆ ಪ್ರಕರಣದಲ್ಲಿ ಉತ್ತಮವಾಗಿ ತನಿಖೆ ಮಾಡಿ ದೋಷಾರೋಪಣಾ ಪಟ್ಟಿಯನ್ನು ತಯಾರಿಸಿ ಘನ ನ್ಯಾಯಾಲಯಕ್ಕೆ ಸಲ್ಲಿಸಿದ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಾದ ಮಂಡನೆ ಮಾಡಿದ್ದ ಸರ್ಕಾರಿ ವಕೀಲರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.

Exit mobile version