Site icon Kannada News-suddikshana

ಬದಲಾಯ್ತು ಟೋಪಿ: ಕರ್ನಾಟಕ ಪೊಲೀಸರಿಗೆ ಪೀಕ್‌ ಕ್ಯಾಪ್‌ ಮುಕುಟ

ಕರ್ನಾಟಕ

SUDDIKSHANA KANNADA NEWS/DAVANAGERE/DATE:28_10_2025

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್‌ ಸಿಬ್ಬಂದಿಯ ಪೀಕ್‌ ಕ್ಯಾಪ್‌ ವಿತರಣೆ ಹಾಗೂ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಮತ್ತು ಸನ್ಮಿತ್ರ ಕೈಪಿಡಿ ಬಿಡುಗಡೆ ಕಾರ್ಯಕ್ರಮ ನಡೆಯಿತು.

READ ALSO THIS STORY: ಶಾಕಿಂಗ್ ನ್ಯೂಸ್: ಮೂವರು ಸಹೋದರಿಯರ ಆಕ್ಷೇಪಾರ್ಹ ಫೋಟೋ ಎಐ ಮೂಲಕ ರೆಡಿ ಮಾಡಿ ಸಾಹಿಲ್ ಬ್ಲ್ಯಾಕ್‌ಮೇಲ್: ಹಣದ ಕಾಟಕ್ಕೆ ಬೇಸತ್ತ ರಾಹುಲ್ ಸೂಸೈಡ್!

ಸಿಎಂ ಸಿದ್ದರಾಮಯ್ಯ ಹಾಗೂ ಗೃಹಸಚಿವ ಜಿ.ಪರಮೇಶ್ವರ್‌ ಅವರೊಂದಿಗೆ ಡಿ. ಕೆ. ಶಿವಕುಮಾರ್ ಸಹ ಭಾಗವಹಿಸಿದರು.

ಈ ವೇಳೆ ಹಳೇ ಕಾಲದ ಸ್ಲೋಚ್‌ ಹ್ಯಾಟ್‌ಗೆ ವಿದಾಯ ಹೇಳಿ ಪೊಲೀಸ್‌ ಸಿಬ್ಬಂದಿಗೆ ಹೊಸ ಪೀಕ್‌ ಕ್ಯಾಪ್‌ ವಿತರಣೆ ಮಾಡಲಾಯಿತು.

ಪ್ರತಿಭಟನೆ, ಆರೋಪಿಯನ್ನು ಹಿಡಿಯಲು ಓಡುವಾಗ, ಲಾಠಿಪ್ರಹಾರದ ವೇಳೆ ಸ್ಲೋಚ್‌ ಕ್ಯಾಪ್‌ ಕೆಳಗೆ ಬೀಳುತ್ತಿತ್ತು. ಪೊಲೀಸರ ಹ್ಯಾಟ್‌ ಕೆಳಗೆ ಬಿದ್ದರೆ ಸಮವಸ್ತ್ರಕ್ಕೆ ಅಗೌರವ ತೋರಿದಂತಾಗುತ್ತದೆ. ಹೀಗಾಗಿ ಕಳೆದ 4 ದಶಕಗಳಿಂದ ಪೀಕ್‌ ಕ್ಯಾಪ್‌ ನೀಡುವಂತೆ ಪೊಲೀಸರು ಬೇಡಿಕೆಯಿಟ್ಟಿದ್ದರು. ಕೊನೆಗೆ ನಮ್ಮ ಸರ್ಕಾರ ಹೊಸ ಮಾದರಿಯ ಕಡು ನೀಲಿ ಬಣ್ಣದ ಪೀಕ್‌ ಕ್ಯಾಪ್‌ ವಿತರಿಸಲು ಒಪ್ಪಿಗೆ ನೀಡಿತ್ತು. ಹೊಸ ಪೀಕ್‌ ಕ್ಯಾಪ್‌ನಲ್ಲಿ ಎಲಾಸ್ಟಿಕ್‌ ಇರುವುದರಿಂದ ಪೊಲೀಸರ ತಲೆಯಲ್ಲಿ ಸರಿಯಾಗಿ ಕೂರಲಿವೆ. ಇಂದಿನಿಂದ ರಾಜ್ಯದ 1 ಲಕ್ಷ ಪೊಲೀಸ್‌ ಸಿಬ್ಬಂದಿಗೆ ಹೊಸ ಪೀಕ್‌ ಕ್ಯಾಪ್‌ ನೀಡುತ್ತಿದ್ದೇವೆ ಎಂದು ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.

Exit mobile version