Site icon Kannada News-suddikshana

ಮೆಡಿಕವರ್ ಆಸ್ಪತ್ರೆಯಲ್ಲಿ 90 ವರ್ಷದ ವೃದ್ಧನಿಗೆ ಮರು ಜೀವ ನೀಡಿದ ತಜ್ಞ ವೈದ್ಯರು!

SUDDIKSHANA KANNADA NEWS/ DAVANAGERE/ DATE:27-02-2025

ಬೆಂಗಳೂರು ವೈಟ್ ಫೀಲ್ಡ್: ಜಾರಿ ಬಿದ್ದು ಪ್ರಜ್ಞೆಹೀನಾ ಸ್ಥಿತಿಯಲ್ಲಿದ್ದ ವೃದ್ದನ ಸ್ಥಿತಿಯನ್ನು ಕಂಡು ಅವರ ಮನೆಯವರು ರೋಗಿಯೂ ಬದುಕುಳಿಯುವ ಭರವಸೆಯನ್ನೆ ಕಳೆದುಕೊಂಡಿದ್ದರು. ಆದ್ರೆ ಮೆಡಿಕವರ್‌ ಆಸ್ಪತ್ರೆಯ ನರ ಶಸ್ತ್ರಚಿಕಿತ್ಸಕ ವೈದ್ಯ ಡಾ. ದೀಪಕ್‌ರವರ ನೇತೃತ್ವದಲ್ಲಿ ನಡೆದ ಚಿಕಿತ್ಸೆಯಲ್ಲಿ ಎಂದಿಗಿಂತಲೂ ಹುಷಾರಾಗಿ ಓಡಾಡೋಕೆ ಶುರು ಮಾಡುವಂತೆ ಮಾಡಿದ್ದಾರೆ.

90 ವರ್ಷದ ವೃದ್ದ ತಿಂಗಳ ಹಿಂದೆ ಜಾರಿ ಬಿದ್ದಿದ್ದರು. ಜಾರಿ ಬಿದ್ದ ಬಳಿಕ ಸ್ವಲ್ಪ ಸಮಯ ಪ್ರಜ್ಞಾ ಹೀನಾ ಸ್ಥಿತಿಯಲ್ಲಿದ್ದರು. ಆದಾದ ಮೇಲೆ ಆರಾಮವಾಗಿದ್ದರು. ಆದರೆ ಪದೇ ಪದೇ ತಲೆನೋವು ಹಾಗೂ ತಲೆ ಸುತ್ತು ಬರುತ್ತಾ ಇತ್ತು. ಸಡನ್‌ ಆಗಿ ಮತ್ತೆ ಪ್ರಜ್ಞಾಹೀನಾ ಸ್ಥಿತಿಗೆ ಬಂದರು. ಎಷ್ಟು ಪ್ರಯತ್ನಪಟ್ಟರೂ ಪ್ರಜ್ಞೆ ಬರಲಿಲ್ಲ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ.

ಮನೆಯವರು ಸಂಪೂರ್ಣವಾಗಿ ಅವರು ಬದುಕುಳಿಯುವ ಭರವಸೆಯನ್ನು ಕಳೆದುಕೊಂಡು ಬಿಟ್ಟರು. ಆದ್ರೆ ಮೆಡಿಕವರ್‌ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಬಂದ ಬಳಿಕ ಡಾ. ದೀಪಕ್‌ ಅವರಿಗೆ ಮತ್ತೆ ಮರು ಜೀವ ನೀಡುವ ಭರವಸೆಯನ್ನು ಕೊಟ್ಟರು.

ಅದರಂತೆ ಅವರನ್ನು ಮೆಡಿಕವರ್‌ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ರೋಗಿಗೆ 90 ವರ್ಷವಾಗಿದ್ದ ಕಾರಣ ಯಾವುದೇ ಚಿಕಿತ್ಸೆಯನ್ನು ನಡೆಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಯಾಕೆಂದ್ರೆ ಅವರ ರಕ್ತ ಸಂಪೂರ್ಣವಾಗಿ ತೆಳುವಾಗಿದ್ದ
ಕಾರಣ, ಅಪರೇಷನ್‌ ನಡೆಸಿದರೇ ರಕ್ತ ಸ್ರಾವ ವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತಾ ಇತ್ತು, ಅಲ್ಲದೇ ಡಯಾಬೀಟಿಸ್‌, ರಕ್ತದೊತ್ತಡ ಹಾಗೂ ಶ್ವಾಸಕೋಶದ ಸೋಂಕು ಕೂಡ ಆಗಿತ್ತು. ಹಾಗಾಗೀ ಅದಕ್ಕೆ ಸೂಕ್ತ ಟ್ರಿಂಟೆಮೆಂಟ್‌ ನೀಡಿ, ಎರಡು
ದಿನ ಕಾದು ಬಳಿಕ ಸಿಟಿ ಸ್ಕ್ಯಾನ್‌ ಮಾಡಲಾಯ್ತು. ಸಿಟಿ ಸ್ಕ್ಯಾನ್‌ ಮಾಡಿದ ಬಳಿಕ ಸಬ್‌ ಡ್ಯುರಲ್‌ ಹೆಮಾಟೋಮಾ ಮಿಡ್‌ಲೈನ್‌ ಶಿಫ್ಟ್‌ ಮತ್ತು ಆಂಕಲ್‌ ಹೆರ್ನಿಯೇಷನ್‌ ಆಗಿರೋದುಬೆಳಕಿಗೆ ಬಂದಿದೆ.

ಅವರ ಸಮಸ್ಯೆ ಬೆಳಕಿಗೆ ಬಂದ ಬಳಿಕ ತಡಮಾಡದೇ, ಬರ್-‌ ಹೋಲ್‌ ಎವಾಕ್ಯುಯೇಶನ್‌ ಶಸ್ತ್ರಚಿಕಿತ್ಸೆಯನ್ನುಯಶ್ವಸಿಯಾಗಿ ಮಾಡಲಾಯಿತು. ಇದು ಕೀ ಹೋಲ್‌ ಸರ್ಜರಿಯಾಗಿದ್ದು, ಸಣ್ಣ ರಂಧ್ರ ಮಾಡಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಕೀ ಹೋಲ್‌ ಸರ್ಜರಿಯಲ್ಲಿ ರಿಕವರಿ ಸ್ವಲ್ಪ ಬೇಗ ಇರುತ್ತದೆ ಹಾಗೂ ನೋವು ಕೂಡ ಕಡಿಮೆ ಇರುತ್ತದೆ. 45 ನಿಮಿಷ ಶಸ್ತ್ರ ಚಿಕಿತ್ಸೆ ನಡೆಸಲಾಯ್ತು, ಚಿಕಿತ್ಸೆ ನಡೆದು 6 ಗಂಟೆಯ ಬಳಿಕ ರೋಗಿಯೂ ಬಹುತೇಕ ಚೇತರಿಸಿಕೊಂಡಿದ್ದಾರೆ.

ರೋಗಿಯ ಪ್ರಾಣ ಉಳಿಸುವಲ್ಲಿ ತ್ವರಿತ ನಿರ್ಧಾರ ಮತ್ತು ತಜ್ಞ ವೈದ್ಯರ ಕೌಶಲ್ಯ ಪ್ರಮುಖ ಪಾತ್ರ ವಹಿಸಿತು ಎಂದು ಡಾ. ದೀಪಕ್‌ ಸಂತಸ ವ್ಯಕ್ತಪಡಿಸಿದ್ದಾರೆ.

Exit mobile version