Site icon Kannada News-suddikshana

ಕ್ರಿಕೆಟ್ ವಿಶ್ವ ಕಪ್ ಫೈನಲ್‍ಗೆ ಭಾರತ: ತಂಡಕ್ಕೆ ಶುಭ ಹಾರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

SUDDIKSHANA KANNADA NEWS/ DAVANAGERE/ DATE:16-11-2023

ಬೆಂಗಳೂರು: ಭಾರತದ ತಂಡ ವಿಶ್ವ ಕಪ್ ಕ್ರಿಕೆಟ್‍ನ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಫೈನಲ್ ತಲುಪಿರುವುದಕ್ಕಾಗಿ ತಂಡದ ಎಲ್ಲಾ ಸದಸ್ಯರಿಗೆ ಹಾಗೂ ವಿಶೇಷವಾಗಿ ವಿರಾಟ್ ಕೊಹ್ಲಿ 50ನೇ ಶತಕ ಬಾರಿಸಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿದ್ದಾರೆ. 

ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ವಿರಾಟ್ ಕೋಹ್ಲಿ ಅವರಿನ್ನೂ ಹೆಚ್ಚು ಕಾಲ ಆಡಲಿ ಎಂದು ಆಶಿಸಿದ ಅವರು ಭಾರತದ ಕ್ರಿಕೆಟ್ ತಂಡ ವಿಶ್ವ ಕಪ್ ಗೆಲ್ಲಲಿ ಎಂದು ಹಾರೈಸಿದರು.

Exit mobile version