Site icon Kannada News-suddikshana

EXCLUSIVE: ವಿಶಾಲ್ ಮಾರ್ಟ್ ಬಳಿ ಧಗಧಗಿಸಿ ಹೊತ್ತಿ ಉರಿಯಿತು ಕಾರು… ಮುಂದೇನಾಯ್ತು…?

SUDDIKSHANA KANNADA NEWS/ DAVANAGERE/ DATE:18-03-2024

ದಾವಣಗೆರೆ: ದಾವಣಗೆರೆ ನಗರದ ಹದಡಿ ರಸ್ತೆಯ ವಿಶಾಲ್ ಮಾರ್ಟ್ ನಲ್ಲಿ ನಿಲ್ಲಿಸಿದ ಕಾರು ಧಗಧಗ ಹೊತ್ತಿ ಉರಿದ ಘಟನೆ ನಡೆದಿದೆ.

ಬಿಸಿಲಿನ ಧಗೆ ಹೆಚ್ಚಾಗಿದೆ. ಮಾತ್ರವಲ್ಲ, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರು ಹೊತ್ತಿ ಉರಿದ ಪರಿಣಾಮ ಕೆಲ ಕಾಲ ಆತಂಕ ನಿರ್ಮಾಣವಾಗಿತ್ತು. ಕಾರಿನೊಳಗೆ ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಇನ್ನು ಕಾರಿನೊಳಗೆ ಸಿಲಿಂಡರ್ ಅಳವಡಿಸಲಾಗಿತ್ತೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.

ಅದೃಷ್ಟವಶಾತ್ ಯಾರಿಗೂ ಏನು ಆಗಿಲ್ಲ. ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಗಿ ವ್ಯಾಪಿಸಿತು. ಅಕ್ಕ ಪಕ್ಕದಲ್ಲಿ ಯಾವುದೇ ವಾಹನಗಳು ಇರದ ಕಾರಣ ಏನೂ ತೊಂದರೆ
ಆಗಿಲ್ಲ.

ವಿಶಾಲ್ ಮಾರ್ಟ್ ಯಾವಾಗಲೂ ಜನಸಂದಣಿ ಇರುವ ಪ್ರದೇಶ. ಕಾರನ್ನು ರಸ್ತೆ ಬದಿ ನಿಲ್ಲಿಸಿ ಹೋಗಿದ್ದರು. ಕಾರು ಧಗ ಧಗ ಹೊತ್ತಿ ಉರಿಯುತ್ತಿದ್ದರೆ, ಅಕ್ಕಪಕ್ಕದವರು ನೀರಿಗೆ ಹುಡುಕಾಟ ನಡೆಸಿದರು. ಅಗ್ನಿಶಾಮಕ ದಳ
ಸಿಬ್ಬಂದಿ ಬರುವಷ್ಟರಲ್ಲಿ ಕಾರು ಹೆಚ್ಚು ಕಡಿಮೆ ಸುಟ್ಟು ಹೋಯಿತು. ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು.

ಬೇರೆ ವಾಹನಗಳಿಗಾಗಲೀ, ಯಾರಿಗೂ ಅನಾಹುತ ಆಗಿಲ್ಲ. ಬಿಸಿಲಿನ ಝಳ ಹೆಚ್ಚಾಗಿರುವುದರಿಂದ ಬೆಂಕಿ ಹತ್ತಿ ಕಾರು ಹೊತ್ತಿ ಉರಿದ ಕಾರಣ ಆತಂಕವಂತೂ ಸೃಷ್ಟಿಯಾಯಿತು. ವಾಹನ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದು, ಅಕ್ಕಪಕ್ಕದಲ್ಲಿ ಯಾವುದೇ ವಾಹನಗಳು ಇರದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಕಾರಿನ ಮಾಲೀಕ ಯಾರು? ಎಲ್ಲಿಂದ ಬಂದಿದ್ದರು ಎಂಬ ಮಾಹಿತಿ ಸಿಗಬೇಕಷ್ಟೇ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Exit mobile version