Site icon Kannada News-suddikshana

ಕಾಲೆಳೆಯುವುದಲ್ಲ, ಅಸಮಾನತೆ ಹೋಗಲಾಡಿಸುವುದೇ ರಾಜಕಾರಣದ ಮೂಲ ಉದ್ದೇಶ: ಜಿ. ಬಿ. ವಿನಯ್ ಕುಮಾರ್

ಅಸಮಾನತೆ

SUDDIKSHANA KANNADA NEWS/DAVANAGERE/DATE:14_10_2025

ದಾವಣಗೆರೆ: ರಾಜಕಾರಣವೆಂದರೆ ಕಾಲೆಳೆಯುವುದಲ್ಲ, ಸಮಾಜ ಸೇವೆ, ಅಭಿವೃದ್ಧಿ. ಅಸಮಾನತೆ ಹೋಗಲಾಡಿಸುವುದೇ ರಾಜಕೀಯದ ಮೂಲ ಉದ್ದೇಶ ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕರೂ ಆದ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ: ನಿರ್ಭಯದಿಂದ ಮುನ್ನಡೆದರೆ ಜೀವನದಲ್ಲಿ ಯಶಸ್ಸು ಸಾಧಿಸಲು, ನಾಯಕರಾಗಲು ಸಾಧ್ಯ: ಜಿ. ಬಿ. ವಿನಯ್ ಕುಮಾರ್
ದಾವಣಗೆರೆ ಜಿಲ್ಲೆಯ ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ವತಿಯಿಂದ ಬಿ.ಕಾಂ, ಬಿ.ಎ ಮತ್ತು ಬಿ.ಸಿ.ಎ ವಿಭಾಗದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ನನಗೆ ಟಿಕೆಟ್ ಸಿಗಲಿಲ್ಲ ಎಂದು ಮನೆಯಲ್ಲಿ ಕೂರಲಿಲ್ಲ. ಸವಾಲು ಸ್ವೀಕರಿಸಿದೆ. ಇದಕ್ಕೆ ಕಾರಣ ನಾನು ಪಡೆದಂಥ ಶಿಕ್ಷಣ, ಪಡೆದ ಜ್ಞಾನ ಎಂದು ತಿಳಿಸಿದರು.

ಪಕ್ಷೇತರನಾಗಿ ನಿಂತೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಅತಿ ಹೆಚ್ಚು ಮತ ಪಡೆದ ಪಕ್ಷೇತರ ಅಭ್ಯರ್ಥಿ ಎಂಬ ಹೆಗ್ಗಳಿಕೆ ಬಂತು. ಯಾವುದಕ್ಕೂ ಕುಗ್ಗಬೇಡಿ, ನಿರಂತರ ಪ್ರಯತ್ನ ಇರಲಿ ಎಂದು ಜಿ. ಬಿ. ವಿನಯ್ ಕುಮಾರ್ ಅವರು ಹೇಳಿದರು.

ದೇಶದ ಪ್ರತಿಯೊಂದು ರಾಜ್ಯಗಳಲ್ಲಿಯೂ ಇನ್ ಸೈಟ್ಸ್ ಸಂಸ್ಥೆಯಲ್ಲಿ ಓದಿದ 1700ಕ್ಕೂ ಹೆಚ್ಚು ಐಎಎಸ್, ಐಪಿಎಸ್, ಐಆರ್ ಎಸ್ ಅಧಿಕಾರಿಗಳಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಕೆಎಎಸ್ ಪರೀಕ್ಷೆ ಬರೆದು ಯಶಸ್ವಿಯಾಗಿದ್ದಾರೆ. ಆಲೋಚನೆ, ದೊಡ್ಡ ಕನಸು ಕಾಣುವುದು, ಸವಾಲುಗಳನ್ನು ಸ್ವೀಕರಿಸುವುದು, ವ್ಯಕ್ತಿತ್ವ ರೂಪಿಸಿಕೊಳ್ಳುವುದು, ಉತ್ತಮ ಶಿಕ್ಷಣ ಪಡೆದರೆ ಯಶಸ್ಸು ಸಾಧ್ಯವಾಗುತ್ತದೆ ಎಂದು ತಿಳಿಸಿದ ಅವರು, ಈ ಕಾಲೇಜಿಗೆ 25 ಸಾವಿರ ರೂಪಾಯಿ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಸ್ವಂತ ಖರ್ಚಿನಲ್ಲಿ ಕೊಡಿಸುವುದಾಗಿ ಭರವಸೆ ನೀಡಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಶಿವಕುಮಾರ್, ಹೊನ್ನಾಳಿ ಹಿರಿಯ ಮುಖಂಡ ರಾಜು ಕಣಗಣ್ಣನವರ್, ಯುವ ಮುಖಂಡ ದಿಡಗೂರು ಸುದೀಪ್, ಅರ್ಥಶಾಸ್ತ್ರ ಅಧ್ಯಾಪಕ ರೇವಣಸಿದ್ದಪ್ಪ, ಅರ್ಥಶಾಸ್ತ್ರದ ಮುಖ್ಯಸ್ಥೆ ಡಾ. ನಮ್ರತಾ, ರಾಜ್ಯಶಾಸ್ತ್ರ ಅಧ್ಯಾಪಕ ಚಂದ್ರಪ, ಅಧ್ಯಾಪಕರಾದ ಗಿರೀಶ್, ನವೀನ್, ಗ್ರಂಥಪಾಲಕ ರಾಜಶೇಖರ ಹಾಗೂ ಕಾಲೇಜಿನ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Exit mobile version