Site icon Kannada News-suddikshana

ಸೈಫ್ ಅಲಿ ಖಾನ್ ಗೆ ಚೂರಿ ಇರಿದ ದಾಳಿಕೋರ ಬಾಂಗ್ಲಾದೇಶದವನು? ಡಿಸಿಪಿ ಮಹತ್ವದ ಮಾಹಿತಿ

SUDDIKSHANA KANNADA NEWS/ DAVANAGERE/ DATE:19-01-2025

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚೂರಿ ಇರಿದ ಆರೋಪಿ ಬಾಂಗ್ಲಾದೇಶ ಮೂಲದವನು ಎಂಬ ಅನುಮಾನ ಇದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಡಿಸಿಪಿ ದೀಕ್ಷಿತ್ ಗೆಡಮ್ ಅವರು ಈ ಮಾಹಿತಿ ನೀಡಿದ್ದು, ಮುಂಬೈನ ಬಾಂದ್ರಾದಲ್ಲಿ ಜನವರಿ 16 ರಂದು ನಟ ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ದಾಳಿ ನಡೆಸಿದ್ದ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. 30 ವರ್ಷದ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ನನ್ನು ದರೋಡೆ ಯತ್ನಕ್ಕಾಗಿ ಬಂಧಿಸಲಾಗಿದೆ.

“ಜನವರಿ 16 ರಂದು ಮಧ್ಯರಾತ್ರಿ 2 ಗಂಟೆಗೆ ನಟ ಸೈಫ್ ಅಲಿಖಾನ್ ಅವರ ನಿವಾಸದಲ್ಲಿ ದಾಳಿ ನಡೆಸಲಾಯಿತು, ಎಫ್ಐಆರ್ ದಾಖಲಿಸಲಾಗಿದೆ ಮತ್ತು ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ, ಅವನ ಹೆಸರು ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್, ಅವನಿಗೆ 30 ವರ್ಷ. ಈತ ಬಾಂಗ್ಲಾದೇಶ ಮೂಲದವನು ಎಂದು ಅನುಮಾನ ಇದ್ದು, ನ್ಯಾಯಾಲಯಕ್ಕೆ ಆರೋಪಿ ಹಾಜರುಪಡಿಸಿ ಆ ನಂತರ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Exit mobile version