SUDDIKSHANA KANNADA NEWS/ DAVANAGERE/ DATE:18-12-2023
ದಾವಣಗೆರೆ: ಉಪ್ಪಿನಕಾಯಿ ಕೇಳುವ ನೆಪದಲ್ಲಿ ಮಹಿಳೆಯ ಕೆನ್ನೆಗೆ ಕಚ್ಚಿ ಅತ್ಯಾಚಾರಕ್ಕೆ ವ್ಯಕ್ತಿಯೊಬ್ಬ ಯತ್ನಿಸಿರುವ ಘಟನೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
48 ವರ್ಷದ ಆರೋಪಿ ಮಂಜಪ್ಪ ಎಂಬಾತನೇ ಈ ಕೃತ್ಯ ಎಸಗಿ ಎಸ್ಕೇಪ್ ಆದ ಆರೋಪಿ. ಮಹಿಳೆಯು ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿದ್ದ ಆರೋಪಿಯು ಮನೆಗೆ ಬಂದು ಉಪ್ಪಿನಕಾಯಿ ಕೇಳಿದ್ದಾನೆ. ಬಳಿಕ ಇದ್ದಕ್ಕಿದ್ದಂತೆ ಮಹಿಳೆಯ ಕೆನ್ನೆ ಕಚ್ಚಿದ್ದಾನೆ. ಆ ಬಳಿಕ ಅತ್ಯಾಚಾರಕ್ಕೂ ಯತ್ನಿಸಿದ ಘಟನೆ ನಡೆದಿದೆ. ಈ ಘಟನೆ ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.
ಮಹಿಳೆಯ ಕೆನ್ನೆ ಕಚ್ಚಿದ ಬಳಿಕ ಅತ್ಯಾಚಾರಕ್ಕೂ ಯತ್ನ ಮಾಡಿದ್ದಾನೆ. ಇದರಿಂದ ಗಾಬರಿಗೊಂಡ ಮಹಿಳೆಯು ಆರೋಪಿಯಿಂದ ತಪ್ಪಿಸಿಕೊಳ್ಳಲು ಜೋರಾಗಿ ಕಿರುಚಿದ್ದಾರೆ. ಆಗ ಆರೋಪಿಯು ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಪ್ರತಿಭಟನೆ:
ಆರೋಪಿಯನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಒತ್ತಾಯಿಸಿ ಮಹಿಳೆಯರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಬಂಧಿಸಬೇಕು. ದಾವಣಗೆರೆಯಲ್ಲಿ ಈ ಹಿಂದೆಯೂ ಈ ರೀತಿಯ ಘಟನೆ ನಡೆದಿತ್ತು. ಮತ್ತೆ ಈ ರೀತಿಯ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಆರೋಪಿ ಹಿಡಿದು ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಮಹಿಳೆಯರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರನ್ನು ಒತ್ತಾಯಿಸಿದ್ದಾರೆ.