ಚೆನ್ನೈ: ತಮಿಳು ಚಿತ್ರರಂಗದ ಸ್ಟಾರ್ ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಸದ್ಯ ರಾಜಕೀಯ ಮತ್ತು ವೈಯಕ್ತಿಕ ಜೀವನದ ಕಾರಣಗಳಿಂದ ಸುದ್ದಿಯಲ್ಲಿದ್ದಾರೆ.
ವಿಜಯ್ ಮತ್ತು ಸಂಗೀತಾ ಸೋರ್ನಲಿಂಗಂ ಅವರ 25 ವರ್ಷಗಳ ಸುದೀರ್ಘ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವರದಿಗಳ ನಡುವೆಯೇ, ಅಭಿಮಾನಿಗಳು ಅವರ ಹಳೆಯ ಪ್ರೇಮ ಕಥೆಯನ್ನು ಮೆಲುಕು ಹಾಕುತ್ತಿದ್ದಾರೆ.
ಮೊದಲು ಪ್ರಪೋಸ್ ಮಾಡಿದ್ದು ಯಾರು?
ವಿಜಯ್ ಅವರ ‘ಪೂವೇ ನಮಕ್ಕಾಗ’ ಸಿನಿಮಾ ಹಿಟ್ ಆದ ನಂತರ ಲಂಡನ್‌ನಲ್ಲಿದ್ದ ಅಭಿಮಾನಿ ಸಂಗೀತಾ ಅವರು ವಿಜಯ್ ಅವರನ್ನು ಭೇಟಿ ಮಾಡಲು ಚೆನ್ನೈಗೆ ಬಂದಿದ್ದರು. ಈ ಭೇಟಿ ವಿಜಯ್ ಪೋಷಕರವರೆಗೂ ತಲುಪಿತ್ತು. ಕುತೂಹಲಕಾರಿ ವಿಷಯವೆಂದರೆ, ಇಲ್ಲಿ ವಿಜಯ್ ಅಥವಾ ಸಂಗೀತಾ ನೇರವಾಗಿ ಪ್ರಪೋಸ್ ಮಾಡಿರಲಿಲ್ಲ. ಬದಲಿಗೆ ವಿಜಯ್ ತಂದೆ ಎಸ್.ಎ. ಚಂದ್ರಶೇಖರ್ ಅವರೇ ಸಂಗೀತಾರನ್ನು ವಿಜಯ್ ಕುರಿತು ಅಭಿಪ್ರಾಯ ಕೇಳಿದ್ದರು. ನಂತರ ವಿಜಯ್ ಕೂಡ ಪೋಷಕರ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದಾಗ ಈ ಸ್ನೇಹ ಪ್ರೇಮಕ್ಕೆ ತಿರುಗಿತ್ತು.
ಪ್ರಸ್ತುತ ಸ್ಥಿತಿ:
ಇತ್ತೀಚಿನ ವರದಿಗಳ ಪ್ರಕಾರ, ಸಂಗೀತಾ ಅವರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಮಾನಸಿಕ ಕಿರುಕುಳ ಮತ್ತು ನಿರ್ಲಕ್ಷ್ಯದ ಆರೋಪಗಳನ್ನು ಮಾಡಿದ್ದಾರೆ ಎನ್ನಲಾಗಿದೆ. 1999ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ.





Leave a comment