Site icon Kannada News-suddikshana

ತುಪ್ಪದ ಶುದ್ಧತೆ ಪರೀಕ್ಷೆ ಹೀಗೆ ಮಾಡಿ…!

ತುಪ್ಪ ಮನೆಯಲ್ಲಿ ಇರಲೇಬೇಕಾದ ಅಗತ್ಯ ವಸ್ತುವಾಗಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಕಲಬೆರಕೆಯ ಆಹಾರಗಳ ಹಾವಳಿಯಿಂದ ಶುದ್ಧ ತುಪ್ಪ ಕೂಡ ದೊರೆಯುವುದು ಅಪರೂಪವಾಗಿದೆ.

ಹಾಗಾದರೆ ಯಾವುದು ಶುದ್ಧ ತುಪ್ಪ ಎಂದು ತಿಳಿಯುವುದು ಹೇಗೆ ಎನ್ನುವ ಸಂಶಯ ನಿಮಗಿದ್ದರೆ ಇಲ್ಲಿದೆ ಉಪಾಯ. ಒಂದು ಪಾತ್ರೆಯಲ್ಲಿ ದೊಡ್ಡ ಚಮಚ ತುಪ್ಪವನ್ನು ಹಾಕಿ ಸಣ್ಣ ಉರಿಯಲ್ಲಿ
ಕರಗಿಸಿ. ತುಪ್ಪ ಶುದ್ದವೇ ಆಗಿದ್ದರೆ ಒಂದೆರಡು ಕ್ಷಣಗಳಲ್ಲಿ ಅದು ಕರಗಿ ದ್ರವ ರೂಪಕ್ಕೆ ಬರುತ್ತದೆ.

ಒಂದು ವೇಳೆ ತುಪ್ಪ  ಕರಗುವುದು ನಿಧಾನವಾದರೆ ಅಥವಾ ಕರಗಿದ ನಂತರ ಶೇಷವೇನಾದರೂ ಉಳಿದರೆ ಅದು ಕಲಬೆರಕೆ ತುಪ್ಪ ಎಂದು ತಿಳಿಯಿರಿ.

Exit mobile version