Site icon Kannada News-suddikshana

ಮಜ್ಜಾಲ್ ಶಾಮ್ಸ್ ಪ್ರದೇಶದ ಮೇಲೆ ರಾಕೆಟ್ ದಾಳಿ: ಮಕ್ಕಳು ಸೇರಿ 12 ಮಂದಿ ಸಾವು

ಟೆಲ್ ಅವೀವ್: ಇಸ್ರೇಲ್ ಆಕ್ರಮಿತ ಮಜ್ಜಾಲ್ ಶಾಮ್ಸ್ ಪ್ರದೇಶದ ಮೇಲೆ ಇರಾನ್ ಬೆಂಬಲಿತ ಭಯೋತ್ಪಾದಕ ಸಂಘಟನೆ ಹಿಜ್ಜುಲ್ಲಾ ನಡೆಸಿದ ರಾಕೆಟ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಮಕ್ಕಳು ಸೇರಿ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಶನಿವಾರ ಸಂಜೆ ರಾಕೆಟ್ ನಗರದ ಫುಟ್ಬಾಲ್ ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಬಿದ್ದಿದೆ. ಪರಿಣಾಮ ಮಕ್ಕಳು ಮತ್ತು 10ರಿಂದ 20 ವರ್ಷದವರೆಗಿನ ಹದಿಹರೆಯದವರು ಸೇರಿದಂತೆ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಜೊತೆಗೆ 19 ಮಂದಿ ಗಾಯಗೊಂಡಿದ್ದು, 6 ಮಂದಿ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

ಹಿಜ್ಜುಲ್ಲಾ ನೆಲೆಯಿಂದಲೇ ರಾಕೆಟ್ ಲಾಂಚ್ ಆಗಿದೆ. ದಕ್ಷಿಣ ಲೆಬನಾನ್‌ನ ಚೆಬಾದ ಹಳ್ಳಿಯೊಂದರಿಂದ ರಾಕೆಟ್ ಉಡಾಯಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಘಟನೆಯ ಬಳಿಕ ನಾವು ಸ್ಥಳಕ್ಕೆ ಆಗಮಿಸಿದೆವು. ಮೈದಾನದ ತುಂಬ ಭೀಕರ ಪರಿಸ್ಥಿತಿ ಇತ್ತು. ಬೆಂಕಿ ಹೊತ್ತಿಕೊಂಡಿತ್ತು. ಸಂತ್ರಸ್ತರು ಹುಲ್ಲಿನ ಮೇಲೆ ನರಳುತ್ತಿದ್ದರು. ಕೆಲವರನ್ನು ಸ್ಥಳೀಯ ಕ್ಲಿನಿಕ್‌ಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೆ, ಮತ್ತೆ ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಎಂಡಿಎ ತಂಡದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Exit mobile version