Site icon Kannada News-suddikshana

ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಸಹಶಿಕ್ಷಕರು ಮತ್ತು ಮುಖ್ಯಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

SUDDIKSHANA KANNADA NEWS/ DAVANAGERE/ DATE-13-05-2025

ದಾವಣಗೆರೆ: ಪ್ರಸಕ್ತ ಸಾಲಿನ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಸಹಶಿಕ್ಷಕರು ಮತ್ತು ಮುಖ್ಯಶಿಕ್ಷಕರು, ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮೂಲಕ ಭರ್ತಿ ಮಾಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಆನ್ ಲೈನ್ ವೆಬ್ ಸೈಟ್ WWW.schooleducation.karnataka.gov.in ಮೂಲಕ ಅರ್ಜಿ ಸಲ್ಲಿಸಲು ಮೇ.26 ಕೊನೆಯ ದಿನವಾಗಿರುತ್ತದೆ.

ಹುದ್ದೆಗಳ ವಿವರ:

ಪ್ರಾಥಮಿಕ ಶಾಲಾ ಸಹಶಿಕ್ಷಕರು-ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು(ಸಿ.ಆರ್.ಪಿ), ಕ್ಷೇತ್ರ ಸಂಪನ್ಲೂಲ ವ್ಯಕ್ತಿ(ಬಿ.ಆರ್.ಪಿ), ತಾಂತ್ರಿಕ ಸಹಾಯಕರು(ಪ್ರಾಥಮಿಕ) ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಮತ್ತು ಹಿರಿಯ ಮುಖ್ಯ ಶಿಕ್ಷಕರು-ಶಿಕ್ಷಣ ಸಂಯೋಜಕರು, ಪ್ರೌಢಶಾಲಾ ಸಹಶಿಕ್ಷಕರು- ಕ್ಷೇತ್ರ ಸಂಪನ್ಲೂಲ ವ್ಯಕ್ತಿ(ಬಿ.ಆರ್.ಪಿ), ಶಿಕ್ಷಣ ಸಂಯೋಜಕರು(ಪ್ರವಢ), ತಾಂತ್ರಿಕ ಸಹಾಯಕರು(ಪ್ರೌಢ), ಪ್ರೌಢಶಾಲಾ ಮುಖ್ಯ ಶಿಕ್ಷಕರು-ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ(ಬಿ.ಆರ್.ಪಿ),
ಸಹಾಯಕ ಯೋಜನಾ ಸಮನ್ವಯಾಧಿಕಾರಿ(ಎ.ಪಿ.ಸಿ), ವಿಷಯ ಪರಿವೀಕ್ಷಕರು, ಸಹಾಯಕ ನಿರ್ದೇಶಕರು ಹುದ್ದೆಗಳು.

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು(ಆಡಳಿತ) ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆ ದಾವಣಗೆರೆ ಸಂಪರ್ಕಿಸಲು ಇಲಾಖೆಯ ಉಪನಿರ್ದೇಶಕರಾದ ಕೊಟ್ರೇಶ್.ಜಿ ತಿಳಿಸಿದ್ದಾರೆ.

Exit mobile version