Home ದಾವಣಗೆರೆ ನಾಳೆ ತರಳಬಾಳು ಕೇಂದ್ರದಲ್ಲಿ ತೊರೆಯ ಹಂಬಲ‌ ವಿಶೇಷ ಕಾರ್ಯಕ್ರಮ: 3 ಸಾವಿರ ಮೈಲು ದೂರ ಅಟ್ಲಾಂಟಿಕ್ ಸಾಗರ ಕ್ರಮಿಸಿದ ಕನ್ನಡತಿಗೆ ಅಭಿನಂದನೆ
ದಾವಣಗೆರೆಬೆಂಗಳೂರು

ನಾಳೆ ತರಳಬಾಳು ಕೇಂದ್ರದಲ್ಲಿ ತೊರೆಯ ಹಂಬಲ‌ ವಿಶೇಷ ಕಾರ್ಯಕ್ರಮ: 3 ಸಾವಿರ ಮೈಲು ದೂರ ಅಟ್ಲಾಂಟಿಕ್ ಸಾಗರ ಕ್ರಮಿಸಿದ ಕನ್ನಡತಿಗೆ ಅಭಿನಂದನೆ

Share
ತರಳಬಾಳು
Share

ಬೆಂಗಳೂರು: ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪನವರ ಮೊಮ್ಮಗಳಾದ ಅನನ್ಯಾ ಶಿವಪ್ರಸಾದ್. ಇಂಗ್ಲೆಂಡ್‌ನಲ್ಲಿ ಹುಟ್ಟಿ ಬೆಳೆದ ಅವರು ಅಟ್ಲಾಂಟಿಕ್ ಮಹಾಸಾಗರದ ಒಂದು ದಂಡೆಯಿಂದ ಮತ್ತೊಂದು ದಂಡೆಯವರೆಗೆ ವಿದ್ಯುತ್, ಡೀಸಲ್ ಯಂತ್ರವಿಲ್ಲದ ದೋಣಿಯನ್ನು ಏಕಾಂಗಿಯಾಗಿ ತನ್ನ ತೋಳ್ಬಲದಿಂದಲೇ ಹುಟ್ಟು ಹಾಕಿ ನಡೆಸಿದ ಧೀರ ಯುವತಿ!.

ಈ ಸಮುದ್ರಯಾನದ ಸಾಹಸ ಕ್ರೀಡೆಗೆ ಅನನ್ಯಾ ಆಯ್ಕೆ ಮಾಡಿಕೊಂಡ ಮಾರ್ಗ 500 ವರ್ಷಗಳ ಹಿಂದೆ ಕ್ರಿಸ್ಟೋಫರ್ ಕೊಲಂಬಸ್ ಹಡಗು ಸಾಗಿದ ದಾರಿ. ಕೆನರಿ ದ್ವೀಪಗಳ ಲಾ ಗೊಮೆರಾದಿಂದ ವೆಸ್ಟ್ ಇಂಡೀಸ್‌ನ ಆಂಟಿಗುವಾ ದ್ವೀಪದವರೆಗೆ ಅನನ್ಯಾ ಕ್ರಮಿಸಿದ ದೂರ: ಸುಮಾರು ಮೂರು ಸಾವಿರ ಮೈಲುಗಳು. ಕಾಲಾವಧಿ: 52 ದಿನ, 5 ಗಂಟೆ, 44 ನಿಮಿಷಗಳು. ದೋಣಿಯ ಹೆಸರು ಒಡೆಸ್ಸಿ (Odessy).

ಬೆಂಗಳೂರಿನ ಆರ್ ಟಿ ನಗರದಲ್ಲಿನ ತರಳಬಾಳು ಕೇಂದ್ರದಲ್ಲಿ ಫೆ. 22ರಂದು ಬೆಳಿಗ್ಗೆ 10.30ಕ್ಕೆ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕಾರ್ಯಕ್ರಮದ ವಿವರಗಳು: ‘ತೊರೆಯ ಹಂಬಲ’

  • ಕಾರ್ಯಕ್ರಮ: ಅಟ್ಲಾಂಟಿಕ್ ಸಾಗರ ಕ್ರಮಿಸಿದ ಸಾಧಕಿ ಅನನ್ಯಾ ಶಿವಪ್ರಸಾದ್ ಅವರಿಗೆ ಅಭಿನಂದನೆ.

  • ದಿನಾಂಕ ಮತ್ತು ಸಮಯ: 22-02-2026, ಭಾನುವಾರ ಬೆಳಿಗ್ಗೆ 10:30ಕ್ಕೆ.

  • ಸ್ಥಳ: ತರಳಬಾಳು ಕೇಂದ್ರ, ಆರ್.ಟಿ. ನಗರ, ಬೆಂಗಳೂರು.

ಸಾಧನೆಯ ಹಾದಿ (ಅನನ್ಯಾ ಶಿವಪ್ರಸಾದ್)

ಅನನ್ಯಾ ಅವರ ಈ ಸಾಹಸಮಯ ಯಾನವು ಅಸಾಮಾನ್ಯವಾದುದು:

  • ಮಾರ್ಗ: ಕೆನರಿ ದ್ವೀಪಗಳ ಲಾ ಗೊಮೆರಾದಿಂದ ವೆಸ್ಟ್ ಇಂಡೀಸ್‌ನ ಆಂಟಿಗುವಾ ದ್ವೀಪದವರೆಗೆ (ಕೊಲಂಬಸ್ ಸಾಗಿದ ಹಾದಿ).

  • ದೂರ: ಸುಮಾರು 3,000 ಮೈಲುಗಳು.

  • ಸಮಯ: 52 ದಿನ, 5 ಗಂಟೆ, 44 ನಿಮಿಷಗಳು.

  • ವಿಶೇಷತೆ: ಯಾವುದೇ ಯಂತ್ರ ಅಥವಾ ವಿದ್ಯುತ್ ಸಹಾಯವಿಲ್ಲದೆ, ‘ಒಡೆಸ್ಸಿ’ (Odessy) ದೋಣಿಯನ್ನು ತೋಳ್ಬಲದಿಂದಲೇ ನಡೆಸಿ ಈ ಸಾಧನೆ ಮಾಡಿದ್ದಾರೆ.

ಈ ಧೀರ ಕನ್ನಡತಿಯ ಅಭಿನಂದನಾ ಕಾರ್ಯಕ್ರಮವನ್ನು 22-02-2026 ರ ಭಾನುವಾರ ಬೆಳಿಗ್ಗೆ 10.30 ಕ್ಕೆ ತರಳಬಾಳು ಕೇಂದ್ರದಲ್ಲಿ ‘ತೊರೆಯ ಹಂಬಲ’ ಕಾರ್ಯಕ್ರಮದ ಹೆಸರಿನಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಖ್ಯಾತ ಸಾಹಿತಿ.ಬಿ.ಆರ್.ಲಕ್ಷಣ್ ರಾವ್ ಬೆಂಗಳೂರು, ಕುಮಾರಿ ಅನನ್ಯಳಾ ತಂದೆ ತಾಯಿಗಳಾದ ಖ್ಯಾತ ಮಕ್ಕಳ ರೋಗ ತಜ್ಞರಾದ ಇಂಗ್ಲೇಂಡಿನ ಡಾ.ಶಿವಪ್ರಸಾದ್,ಡಾ.ಪೂರ್ಣಿಮ ಆಗಮಿಸುವರು. ಶ್ವೇತಾ ಹಿರೇಮಠ್ ಮತ್ತು ವೃಂದದವರಿಂದ ಗಾಯನ ಗೋಷ್ಠಿ, ಅನುಸ್ಪೃತಿ ತಂಡದವರಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮ ನಡೆಯಲಿವೆ.

ಕಾರ್ಯಕ್ರಮದ ನಂತರ ದಾಸೋಹ ವ್ಯವಸ್ಥೆ ಮಾಡಲಾಗಿದ್ದು, ಅಪರೂಪದ ಸಾಧಕಿಯ ಅಭಿನಂದನಾ ಕಾರ್ಯಕ್ರಮಕ್ಕೆ ನಗರವಾಸಿಗಳು ಆಗಮಿಸುವಂತೆ ತರಳಬಾಳು ಕೇಂದ್ರದ ಕಾರ್ಯದರ್ಶಿ ವಿಶ್ವನಾಥ್ ಬಾತಿ ವಿನಂತಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *