ಚೆನ್ನೈ: ತಿರುಪ್ಪರಂಕುಂದಂನ ಅರುಲ್ಮಿಗು ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಸಮೀಪವಿರುವ ಬೆಟ್ಟದ ಮೇಲಿರುವ ‘ದೀಪತೂನ್’ (ದೀಪದ ಕಂಬ) ಬಳಿ ಕಾರ್ತಿಕೇಯ ದೀಪವನ್ನು ಹಚ್ಚುವ ವಿಚಾರದಲ್ಲಿ ತಮಿಳುನಾಡು ಸರ್ಕಾರ ಮತ್ತು ನ್ಯಾಯಾಲಯದ ನಡುವೆ ಜಟಾಪಟಿ ನಡೆಯುತ್ತಿದೆ.
ಈ ಕುರಿತು ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು ಈ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ:
ಸಾಂಕೇತಿಕ ಪ್ರಾರ್ಥನೆ:
ನ್ಯಾಯಾಲಯವು ಹೆಸರಿಸುವ ಐವರು ವ್ಯಕ್ತಿಗಳ ತಂಡಕ್ಕೆ ಬೆಟ್ಟದ ಮೇಲಿರುವ ದೀಪತೂನ್ ಬಳಿ 15 ನಿಮಿಷಗಳ ಕಾಲ ಸಾಂಕೇತಿಕ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಬಹುದು ಎಂದು ನ್ಯಾಯಾಲಯ ಸಲಹೆ ನೀಡಿದೆ.
ಸರ್ಕಾರಕ್ಕೆ ತರಾಟೆ:
ಜಿಲ್ಲಾಧಿಕಾರಿಗಳು ಹೊರಡಿಸಿರುವ ನಿಷೇಧಾಜ್ಞೆಯು ನ್ಯಾಯಾಲಯದ ಆದೇಶವನ್ನು ಜಾರಿಗೆ ತರದಂತೆ ತಡೆಯುತ್ತಿದೆ ಎಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಪುಡಿಂಗ್‌ನ ರುಚಿ ಇರುವುದು ಅದನ್ನು ತಿನ್ನುವುದರಲ್ಲಿ” (The proof of the pudding lies in eating) ಎನ್ನುವ ಗಾದೆಯ ಮೂಲಕ ಕೇವಲ ಅಫಿಡವಿಟ್ ಸಲ್ಲಿಸಿದರೆ ಸಾಲದು, ಕೆಲಸ ಕಾರ್ಯರೂಪಕ್ಕೆ ಬರಬೇಕು
ಎಂದು ಅವರು ತಿಳಿಸಿದ್ದಾರೆ.
ಸಚಿವರಿಗೆ ಎಚ್ಚರಿಕೆ:
ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿಯಲು ಪ್ರಯತ್ನಿಸಿದ ಸಚಿವ ರಘುಪತಿ ಅವರ ಹೇಳಿಕೆಯನ್ನು ನ್ಯಾಯಾಲಯ ತೀವ್ರವಾಗಿ ಖಂಡಿಸಿದೆ.





Leave a comment