Home ದಾವಣಗೆರೆ ವಿತ್ತೀಯ ಶಿಸ್ತಿನ ಐತಿಹಾಸಿಕ ಆಯವ್ಯಯ: ಸೈಯದ್ ಖಾಲಿದ್ ಅಹ್ಮದ್ ಬಣ್ಣನೆ
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ವಿತ್ತೀಯ ಶಿಸ್ತಿನ ಐತಿಹಾಸಿಕ ಆಯವ್ಯಯ: ಸೈಯದ್ ಖಾಲಿದ್ ಅಹ್ಮದ್ ಬಣ್ಣನೆ

Share
ಆಯವ್ಯಯ
Share

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡನೆ ಮಾಡಿದ 2026-27ನೇ ಸಾಲಿನ ಆಯವ್ಯಯವು ವಿತ್ತೀಯ ಶಿಸ್ತಿನಿಂದ ಕೂಡಿದೆ. ಜೊತೆಗೆ ಈ ಬಜೆಟ್ ಐತಿಹಾಸಿಕ ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಘಟಕದ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರು ಬಣ್ಣಿಸಿದ್ದಾರೆ.

ಆಡುಮುಟ್ಟದ ಸೊಪ್ಪಿಲ್ಲ, ಸಿದ್ದರಾಮಯ್ಯ ಅರಿಯದ ಕ್ಷೇತ್ರಗಳಿಲ್ಲ ಎಂಬ ಮಾತಿನಂತೆ ಈ ಬಜೆಟ್ ಇದೆ. ಪ್ರತಿಯೊಂದನ್ನು ತಾಳೆ ಹಾಕಿ ಜನಪ್ರಿಯ ಯೋಜನೆಗಳಿಗೆ ಹೆಚ್ಚಿನ ಹೊರೆಯಾದರೂ ಸಮತೋಲಿತವಾದ ಆಯವ್ಯಯ ಮಂಡನೆ ಮಾಡಿದ್ದಾರೆ. ರಾಜ್ಯದ ಜನರಿಗೆ ಹೆಚ್ಚಿನ ತೆರಿಗೆ ವಿಧಿಸದ ಜನಸ್ನೇಹಿ, ಅಭಿವೃದ್ಧಿ ಪೂರಕವಾಗಿದೆ. ಕೃಷಿ, ಶಿಕ್ಷಣ, ಆರೋಗ್ಯ, ಉದ್ಯೋಗ, ಉನ್ನತ ಶಿಕ್ಷಣ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳಿಗೂ ಬಂಪರ್ ಕೊಡುಗೆ ನೀಡಿದ್ದಾರೆ. ಇಂಥ ಬಜೆಟ್ ಅನ್ನು ಸಿದ್ದರಾಮಯ್ಯ ಅವರಿಂದ ಮಂಡನೆ ಮಾಡಲು ಸಾಧ್ಯ ಎಂದು ತಿಳಿಸಿದ್ದಾರೆ.

ರೈತರ ಸಮೃದ್ಧಿಗಾಗಿ ‘ಮುಖ್ಯಮಂತ್ರಿ ಕೃಷಿ ವಿಸ್ತಾರ’ ಮತ್ತು ‘ವಸುಧಾಮೃತ’ ಯೋಜನೆಗಳ ಘೋಷಣೆ ಮಾಡಿದ್ದಾರೆ. ರೈತರಿಗೆ 30,000 ಕೋಟಿ ರೂ. ಶೂನ್ಯ ಬಡ್ಡಿ ದರದ ಸಾಲದ ಬಂಪರ್ ಕೊಡುಗೆಯನ್ನೂ ನೀಡಿದ್ದಾರೆ. ಮಕ್ಕಳು ಸಾಮಾಜಿಕ ಜಾಲತಾಣ ನಿಷೇಧಿಸುವಂಥ ಕ್ರಾಂತಿಕಾರಕ ಕ್ರಮ ಕೈಗೊಂಡಿದ್ದಾರೆ. ಹೊಸ ಘೋಷಣೆಗಳು ಇಲ್ಲದಿದ್ದರೂ ಅತ್ಯಂತ ಸಮತೋಲನ ಆಯವ್ಯಯವಾಗಿದೆ. ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಮಹಿಳೆಯರು, ಅಲ್ಪಸಂಖ್ಯಾತರು, ಪರಿಶಿಷ್ಟ ವರ್ಗ ಮತ್ತು ಪಂಗಡದವರು, ಜೈನ, ಬೌದ್ಧ, ಸಿಖ್ ಸಮುದಾಯಕ್ಕೂ ನೂರಾರು ಕೋಟಿ ರೂಪಾಯಿ ನೀಡಿದ್ದಾರೆ. ಇದೊಂದು ಜನಪ್ರಿಯ ಮತ್ತು ಜನರ ಮನ ಗೆದ್ದ ಆಯವ್ಯಯವಾಗಿದೆ ಎಂದು ಸೈಯದ್ ಖಾಲಿದ್ ಅಹ್ಮದ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *