Site icon Kannada News-suddikshana

ಕ್ರಿಕೆಟ್ ದೇವರನ್ನೆ ಮೆಚ್ಚಿಸಿದ ಹಳ್ಳಿ ಬಾಲಕಿ ಸುಶೀಲ ಮೀನಾ

ಒಂದು ಕಾಲದಲ್ಲಿ ಜಹೀರ್ ಖಾನ್ ಎಂದರೆ ಟೀಂ ಇಂಡಿಯಾ ಬೌಲಿಂಗ್ ವಿಭಾಗದ ಒಂದು ಶಕ್ತಿಯಾಗಿದ್ದರು.ಈಗ ಅವರದ್ದೇ ಶೈಲಿಯಲ್ಲಿ ಬೌಲಿಂಗ್ ಮಾಡುವ ಹಳ್ಳಿ ಬಾಲಕಿಯ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

ಈಗ ಆ ವಿಡೀಯೋ‌ ಸಚಿನ್ ಅವರ ಕಣ್ಣಿಗೆ ಬಿದ್ದಿದ್ದು ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಜಹೀರ್ ಖಾನ್ ರವರನ್ನು ಟ್ಯಾಗ್ ಮಾಡಿದ್ದಾರೆ, ಅದಕ್ಕೆ ಜಹೀರ್ ಕೂಡ ತಲೆದೂಗಿದ್ದಾರೆ.

ಯಾವ ಪ್ರತಿಭೆ ಎಲ್ಲಿ ಅಡಗಿರುತ್ತೋ ಎಂದು ಹೇಳುವುದು ತುಂಬಾ ಕಷ್ಟ ಹಳ್ಳಿ ಬಾಲಕಿಯ ವಿಡೀಯೋ ನೋಡಿ ಸ್ವತಃ ಸಚಿನ್ ತೆಂಡೂಲ್ಕರ್ ರವರೇ ಖುಷಿ ಪಟ್ಟು ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮುಖೇನ ಜಹೀರ್ ರವರಿಗೂ ಟ್ಯಾಗ್ ಮಾಡಿ ” ನೀವು ಇದನ್ನು ನೋಡಿದಿರಾ?” ಎಂದು ಪ್ರಶ್ನಸಿದರು, ಅವಳ ಬೌಲಿಂಗ್ ಎಷ್ಟೊಂದು ನಾಜುಕು ಮತ್ತು ನಿರಯಾಸವಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.

ರಾಜಸ್ಥಾನದ ಒಂದು ಹಳ್ಳಿಯಲ್ಲಿ ಶಾಲೆಯ ಯೂನಿರ್ಫಾಮ್ ಧರಿಸಿಕೊಂಡು ಮೈದಾನದಲ್ಲಿ ಎಡಗೈ ನಲ್ಲಿ ಬೌಲಿಂಗ್ ಮಾಡುವ ವಿಡೀಯೋ ಎಲ್ಲೇಡೆ ವೈರಲ್ ಆಗಿದ್ದು ಎಲ್ಲಾರ ಮನ ಗೆದ್ದಿದ್ದಾಳೆ.

ಸಚಿನ್ ತೆಂಡೂಲ್ಕರ್ ಯಾವುದೇ ಯುವ ಪ್ರತಿಭೆ ಕಂಡರೂ ಅದನ್ನು ತಟ್ಟನೇ ಗುರುತಿಸುವ ಹೃದಯವಂತರೂ ಹೀಗಾಗಿಯೆ ಎಲ್ಲೋ ಒಂದು ಪುಟ್ಟ ಹಳ್ಳಿಯಲ್ಲಿ ಶಾಲೆ ಕಲಿಯುವ ಪುಟ್ಟ ಬಾಲಕಿಯ ಪ್ರತಿಭೆಯನ್ನು ಗುರುತಿಸಿ ಹೊಗಳಿದ್ದಾರೆ.

ಸ್ವತಃ ಸಚಿನ್ ತೆಂಡೂಲ್ಕರ್ ಮತ್ತು ಜಹೀರ್ ಖಾನ್ ರವರೇ ಗುರುತಿಸಿರುವ ಈ ಬಾಲಕಿಗೆ ಒಳ್ಳೆಯ ಕ್ರಿಕೆಟ್ ತರಬೇತಿ ನೀಡಿದರೆ ಮುಂದೊಂದು ದಿನ ಭಾರತ ಮಹಿಳಾ ತಂಡಕ್ಕೆ ಸೂಕ್ತವಾದ ವೇಗದ ಬೌಲರ್ ಸಿಕ್ಕಂತಾಗುತ್ತದೆ ಎಂದು ಕ್ರಿಕೆಟ್ ಪ್ರೇಮಿಗಳ ಅಭಿಪ್ರಾಯವಾಗಿದೆ.

Exit mobile version