SUDDIKSHANA KANNADA NEWS/DAVANAGERE/DATE:02_01_2026
ಬೆಂಗಳೂರು: ಚುನಾವಣಾ ಆಯೋಗದಿಂದ ರಾಜ್ಯ ಮುಖ್ಯ ಚುನಾವಣಾಧಿಕಾರಿಯ ಮೂಲಕ ಆಯೋಜಿಸಲಾದ ಸಮೀಕ್ಷೆ ಇದು. ಪ್ರಧಾನಿ ಕಚೇರಿಯಲ್ಲೇ ಕೆಲಸ ಮಾಡುವ, ಪ್ರಧಾನಿಗೆ ಅದ್ಧೂರಿ ಗೌರವದ ಕಾಣಿಕೆ ನೀಡಿದ ಪ್ರಧಾನಿಯ ಸೇವಕನಿಂದ ನಡೆದ ಸಮೀಕ್ಷೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ವೋಟ್ ಚೋರಿ ಬಗ್ಗೆ ಆರೋಪಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಗ್ರಾಮ ಸಮೀಕ್ಷಾ ವರದಿಗೆ ಕೌಂಟರ್ ನೀಡಿದ್ದಾರೆ.
ಚುನಾವಣೆಗಳು ನ್ಯಾಯಯುತ ಇವಿಎಂ, ವಿವಿ ಪ್ಯಾಟ್ ನ್ಯಾಯಯುತ ಎಂಬ ಗ್ರಾಮ್ ಸರ್ವೆ ವರದಿ ಬಿಡುಗಡೆ ಬಳಿಕ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್ ಖರ್ಗೆ ಸಮೀಕ್ಷೆ ನಡೆದಿದ್ದು ಮೇ 2025ರಲ್ಲಿ. ಕಾಂಗ್ರೆಸ್ ಪಕ್ಷವು ವೋಟ್ ಚೋರಿ ಕುರಿತು ವಿವರವಾಗಿ ಬಹಿರಂಗಪಡಿಸಿದ್ದು ಆಗಸ್ಟ್ 2025ರಲ್ಲಿ. ಪ್ರತಿ ವಿಧಾನಸಭಾ ವ್ಯಾಪ್ತಿಯಲ್ಲಿ ಕೇವಲ 50 ರನ್ನು ಸಂದರ್ಶಿಸಿದ್ದ ಈ ಸಮೀಕ್ಷೆಯು ಸಂಖ್ಯೆಯಲ್ಲಿ ದುರ್ಬಲ, ಮಾದರಿಗಳಲ್ಲಿ ವ್ಯಾಪಕ ದೋಷ ಮತ್ತು ಆಯ್ಕೆ ಪ್ರಕ್ರಿಯೆಯಲ್ಲಿ ಪಕ್ಷಪಾತ ಹೊಂದಿದ್ದು ನಿರ್ಧಾರ ಕೈಗೊಳ್ಳಲು ಸೂಕ್ತವಾಗಿಲ್ಲ ಎಂದಿದ್ದಾರೆ.
ಆದರೂ ಬಿಜೆಪಿ ಈ ಸಮೀಕ್ಷೆಯನ್ನು “ರಾಜ್ಯ ಸರ್ಕಾರದ ಸಮೀಕ್ಷೆ” ಎಂದು ತಪ್ಪಾಗಿ ಪ್ರಚಾರ ಮಾಡುತ್ತಿದೆ. ಆಶ್ಚರ್ಯದ ವಿಷಯವೆಂದರೆ, ಆಳಂದ ಕ್ಷೇತ್ರದ ವೋಟ್ ಚೋರಿ ಆರೋಪ ಪಟ್ಟಿಯಲ್ಲಿ ಬಿಜೆಪಿ ಮಾಜಿ ಶಾಸಕರನ್ನು A1 ಎಂದು ಹೆಸರಿಸಿರುವುದರ ಬಗ್ಗೆ ಬಿಜೆಪಿ ಮೌನವಾಗಿದೆ ಯಾಕೆ ಎಂದು ಪ್ರಶ್ನಿಸಿದ್ದಾರೆ.






Leave a comment