Site icon Kannada News-suddikshana

BIG BREAKING: “ನ್ಯಾಯಾಂಗ ಅಧಿಕಾರದ ವಿಕೃತ ಬಳಕೆ”: ದರ್ಶನ್‌ಗೆ ಜಾಮೀನಿಗೆ ಸುಪ್ರೀಂ ಕೋರ್ಟ್ ಅಸಮಾಧಾನ!

SUDDIKSHANA KANNADA NEWS/ DAVANAGERE/ DATE:24_07_2025

ನವದೆಹಲಿ: ನ್ಯಾಯಾಂಗ ಅಧಿಕಾರದ ವಿಕೃತ ಬಳಕೆ ಎಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಚಾಲೆಂಜಿಂಗ್ ಸ್ಟಾರ್, ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ತೂಗುದೀಪ ಸೇರಿದಂತೆ ಏಳು ಮಂದಿಗೆ ಜಾಮೀನು ನೀಡಿದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ನ್ಯಾಯಾಂಗ ಅಧಿಕಾರದ ವಿಕೃತ ಬಳಕೆಯಾಗಿದೆ ಎಂದು ಪೀಠವು ಹೇಳಿದ್ದು, ನಟ ದರ್ಶನ್‌ಗೆ ಜಾಮೀನು ನೀಡಿದ್ದು ಸರಿಯಲ್ಲ ಎಂಬರ್ಥದಲ್ಲಿ ವ್ಯಾಖ್ಯಾನಿಸಿದೆ. ಕರ್ನಾಟಕ ಹೈಕೋರ್ಟ್ ಆದೇಶದ ಕುರಿತು ಸುಪ್ರೀಂ ಕೋರ್ಟ್
ಕಳವಳ ವ್ಯಕ್ತಪಡಿಸಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್ ತೂಗುದೀಪ ಹಾಗೂ ಪವಿತ್ರಾ ಗೌಡ ಸೇರಿದಂತೆ ಹಲವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಆದ್ರೆ, ಎಲ್ಲಾ ಆರೋಪಿಗಳಿಗೂ ಜಾಮೀನು ಸಿಕ್ಕಿತ್ತು. ಇದನ್ನು
ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಥ್ಯೈಲ್ಯಾಂಡ್ ನಲ್ಲಿರುವ ದರ್ಶನ್ ತೂಗುದೀಪ ಅವರು ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ವಾದ ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ಮೂರು ವಾರದಲ್ಲಿ ಮೂರು ಪುಟಗಳ ಲಿಖಿತ ರೂಪದಲ್ಲಿ ನೀಡುವಂತೆ ಆದೇಶಿಸಿದೆ. ದರ್ಶನ್ ಹಾಗೂ ಮತ್ತಿತರರ ವಾದ ಮಂಡನೆಯೂ ಅಂತ್ಯವಾಗಿದೆ. ಸುಪ್ರೀಂಕೋರ್ಟ್ ಜಾಮೀನು
ರದ್ದುಪಡಿಸುತ್ತಾ ಅಥವಾ ಇಲ್ಲವೋ ಎಂಬುದು ಇನ್ನು ಹತ್ತು ದಿನಗಳಲ್ಲಿ ಗೊತ್ತಾಗಲಿದೆ.

Exit mobile version