Site icon Kannada News-suddikshana

BIG BREAKING: ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂಕೋರ್ಟ್: ಬಳ್ಳಾರಿಯಲ್ಲಿ ಇನ್ಮುಂದೆ ರೆಡ್ಡಿ ಹವಾ…!

SUDDIKSHANA KANNADA NEWS/ DAVANAGERE/ DATE:30-09-2024

ನವದೆಹಲಿ: ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದೆ. ಬಳ್ಳಾರಿಗೆ ಹೋಗಲು ಜನಾರ್ದನ ರೆಡ್ಡಿ ಅವರಿಗೆ ಅನುಮತಿ ನೀಡಿದೆ.

ಬಳ್ಳಾರಿಗೆ ತೆರಳಲು ಇದ್ದ ನಿರ್ಬಂಧವನ್ನು ಸುಪ್ರೀಂಕೋರ್ಟ್ ತೆಗೆದು ಹಾಕಿದೆ. ಪೂರ್ವಾನುಮತಿ ಇಲ್ಲದೇ ಬಳ್ಳಾರಿಗೆ ಹೋಗಬಹುದು ಎಂಬ ಆದೇಶ ನೀಡಿದೆ. ಸುಪ್ರೀಂಕೋರ್ಟ್ ನ ದ್ವಿಸದಸ್ಯ ಪೀಠವು ಸಮ್ಮತಿಸಿದ್ದು, ಇದರಿಂದಾಗಿ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಹೋಗಲು ಇದ್ದ ಆತಂಕ ನಿವಾರಣೆಯಾಗಿದೆ.

ನ್ಯಾ ಎಂ. ಎಂ. ಸುಂದರೇಶ್ ನೇತೃತ್ವದ ದ್ವಿಸದಸ್ಯ ಪೀಠ ಈ ಆದೇಶ ನೀಡಿದ್ದು, ಬಳ್ಳಾರಿಯಲ್ಲಿ ಮತ್ತೆ ಜನಾರ್ದನ ರೆಡ್ಡಿ ಹವಾ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿಗೆ ಹೋಗಬಾರದು ಎಂಬ ಷರತ್ತು ಇದ್ದ ಕಾರಣಕ್ಕೆ ತನ್ನ ಪತ್ನಿಯನ್ನು ಕಣಕ್ಕೆ ಇಳಿಸಿದ್ದರು. ಸುಪ್ರೀಂಕೋರ್ಟ್ ನಿರ್ಬಂಧ ತೆಗೆದು ಹಾಕಿರುವುದಕ್ಕೆ ಜನಾರ್ದನ ರೆಡ್ಡಿಗೆ ಸಂತಸ ತಂದಿದೆ.

Exit mobile version