SUDDIKSHANA KANNADA NEWS/DAVANAGERE/DATE:05_12_2025
ದಾವಣಗೆರೆ: ಕುಟುಂಬವೊಂದು ಆತ್ಮಹತ್ಯೆಯ ಸುಳಿಗೆ ಸಿಲುಕಿ ನಾಮಾವಶೇಷ ಆದ ಹೃದಯವಿದ್ರಾವಕ ಸ್ಟೋರಿ ಇದು. ಯಾಕೆಂದರೆ ಅಪ್ಪ, ಅಮ್ಮ, ಪುತ್ರ ಹಾಗೂ ಪುತ್ರನ ಮೊದಲನೇ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದು, ಇಡೀ ಕುಟುಂಬದ ಮಾನಸಿಕ ಸ್ಥಿತಿ ಈಗ ಚರ್ಚೆಗೆ ಕಾರಣವಾಗಿದೆ.
READ ALSO THIS STORY: “ಹಿಂದೂ ಯುವತಿಯರ ಹೆಣ ಬೀದಿಯಲ್ಲಿ ಬೀಳುವ ಮುನ್ನ ಮತಾಂಧರ ಹೆಡೆಮುರಿ ಕಟ್ಟಿ”
ಶಿವಮೊಗ್ಗದ ವಿನೋಬನಗರದ ಅಶ್ವಥನಗರದ ಐದನೇ ತಿರುವಿನಲ್ಲಿ ವಾಸವಿದ್ದ ಮನೆಯಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ ತಾಯಿ ಹಾಗೂ ಮಗ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಇಂದು ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗದ ಹೊಮ್ಮರಡಿ ಖಾಸಗಿ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ. ಜಯಶ್ರೀ (55) ಹಾಗೂ ಅವರ ಪುತ್ರ ಆಕಾಶ್ (35) ಆತ್ಮಹತ್ಯೆಗೆ ಶರಣಾದವರು. ಮನೆಯ ಕೆಳಭಾಗದಲ್ಲಿ ಜಯಶ್ರೀರವರು ಹಾಗೂ ಮೊದಲ ಮಹಡಿಯಲ್ಲಿ ಆಕಾಶ್ ರವರು,
ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಜಯಶ್ರೀ ಅವರ ಡೆತ್ ನೋಟ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಮೊದಲು ತಾಯಿ ಆತ್ಮಹತ್ಯೆಗೆ ಶರಣಾಗಿದ್ದು, ರಾತ್ರಿ ವೇಳೆ ತಾಯಿ ಮತ್ತು ಮಗನ ನಡುವೆ ಹಣಕಾಸು ಹಾಗೂ ಕೌಟುಂಬಿಕ ವಿಚಾರಗಳಿಗೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ ಎನ್ನಲಾಗಿದೆ.
ಕಳೆದ ಒಂದೂವರೆ ವರ್ಷದ ಹಿಂದೆ ಆಕಾಶ್ ಅವರ ಮೊದಲ ಪತ್ನಿ ಇದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಕಳೆದ ಮೇ ತಿಂಗಳಲ್ಲಿ ಆಕಾಶ್ ರವರಿಗೆ ಎರಡನೇ ಮದುವೆ ಆಗಿತ್ತು. ಆದರೆ ಏನಾಯ್ತೋ ಏನೋ ತಾಯಿ ಮತ್ತು ಮಗ ಆತ್ಮಹತ್ಯೆಗೆ ಶರಣಾಗಿದ್ದು, ಸಂಬಂಧಿಕರು ಮತ್ತು ನೆರೆ ಮನೆಯವರು ಬೆಚ್ಚಿ ಬಿದ್ದಿದ್ದಾರೆ.
ಕೆಲ ಕೌಟಂಬಿಕ ವಿಚಾರಗಳಿಗೆ ಸಂಬಂಧಿಸಿದಂತೆ, ತಾಯಿ – ಮಗನ ನಡುವೆ ರಾತ್ರಿ ಗಲಾಟೆಯಾಗಿದೆ. ಇದೇ ಇಬ್ಬರ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಘಟನೆ ನಡೆದ ವೇಳೆ ಆಕಾಶ್ ಅವರ ಎರಡನೇ ಪತ್ನಿ ಮನೆಯಲ್ಲಿಯೇ ಇದ್ದು, ಬೇರೆ ಕೊಠಡಿಯಲ್ಲಿ ಮಲಗಿದ್ದರು. ಅವರು ಬೆಳಿಗ್ಗೆ ಕೊಠಡಿಯಿಂದ ಹೊರಬಂದ ನಂತರ ಘಟನೆ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ. ಇನ್ನು ಡಾ. ಜಯಶ್ರೀ ಅವರ ಪತಿ ಕೂಡ ಕಳೆದ ಹತ್ತು ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು. ಘಟನಾ ಸ್ಥಳಕ್ಕೆ ಶಿವಮೊಗ್ಗದ ವಿನೋಬನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೆ, ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.





Leave a comment