Site icon Kannada News-suddikshana

“ಡ್ರಾಪ್ ಆಫ್ ಹೋಪ್” ರಕ್ತದಾನ ಅಭಿಯಾನಕ್ಕೆ ಸ್ಪಂದನೆ: 250 ಮಂದಿಯಿಂದ ಯಶಸ್ವಿ ರಕ್ತದಾನ, ಸಂಸದರ ಶ್ಲಾಘನೆ

ರಕ್ತದಾನ

SUDDIKSHANA KANNADA NEWS/DAVANAGERE/DATE:27_09_2025

ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ 58ನೇ ಜನ್ಮದಿನಾಚರಣೆಯ ಅಂಗವಾಗಿ, ಎಸ್‌ಎಸ್ ಕೇರ್ ಟ್ರಸ್ಟ್ ವಿದ್ಯಾರ್ಥಿ ವಿಭಾಗವು “ಡ್ರಾಪ್ ಆಫ್ ಹೋಪ್” ಎಂಬ ಶೀರ್ಷಿಕೆಯಡಿ ಆಯೋಜಿಸಿದ್ದ ರಕ್ತದಾನ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು ನಗರದ ಬಿಐಇಟಿ ಕಾಲೇಜಿನಲ್ಲಿ ಒಂದೇ ದಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 250 ಮಂದಿ ರಕ್ತದಾನ ಮಾಡಿದ್ದಾರೆ.

READ ALSO THIS STORY: ಶ್ರೇಷ್ಠ ವಿಜ್ಞಾನಿಗಳ ಸಾಲಿನಲ್ಲಿ ದಾವಣಗೆರೆ ಯುಬಿಡಿಟಿ ಕಾಲೇಜಿನ ಪ್ರೊ.ಡಾ. ಎಸ್ ಬಸವರಾಜಪ್ಪಗೆ ಸ್ಥಾನ
ರಕ್ತದಾನ ಮಾಡಿದ ಎಲ್ಲರಿಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಅಭಿನಂದಿಸಿದ್ದಾರೆ. ಈ ವೇಳೆ ಮಾತನಾಡಿದ ಸಂಸದರು “ಡ್ರಾಪ್ ಆಫ್ ಹೋಪ್” ಎಂಬ ಶೀರ್ಷಿಕೆಯಡಿ ಆಯೋಜಿಸಿದ್ದ ರಕ್ತದಾನ ಅಭಿಯಾನ ಯಶಸ್ವಿಯಾಗಿ ಮುಂದುವರೆದಿದೆ. ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿ ನಡೆದ ಅಭಿಯಾನದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿರುವುದು ಶ್ಲಾಘನೀಯ. ಸುಮಾರು 250 ಮಂದಿ ರಕ್ತದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಸೆ.30ರವರೆಗೆ ರಕ್ತದಾನ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ರಕ್ತದಾನ ಅಭಿಯಾನವು ಬಾಪೂಜಿ ಎಜುಕೇಶನಲ್ ಅಸೋಸಿಯೇಷನ್ ಸಂಸ್ಥೆಗಳಾದ್ಯಂತ ಸೆಪ್ಟೆಂಬರ್ 19ರಿಂದ ಪ್ರಾರಂಭಗೊಂಡಿದೆ.ಪ್ರತಿದಿನ 9 ರಿಂದ ಸಂಜೆ 5 ಗಂಟೆಯವರೆಗೆ ರಕ್ತದಾನ ಶಿಬಿರ ನಡೆಯುತ್ತಿದೆ.ಇದೇ ಸೆ.30 ರಂದು ಅಭಿಯಾನ ಕೊನೆಗೊಳ್ಳಲಿದೆ.

Exit mobile version