Site icon Kannada News-suddikshana

Subsidy: ಸಹಾಯಧನಕ್ಕೆ ಎದುರು ನೋಡುತ್ತಿದ್ದೀರಾ… ಹಾಗಿದ್ರೆ ನಿಮಗಿದೆ ಅವಕಾಶ.. ಅರ್ಜಿ ಸಲ್ಲಿಸಿ

NOTE

SUDDIKSHANA KANNADA NEWS/ DAVANAGERE/ DATE:17-07-2023

ದಾವಣಗೆರೆ: ಪರಿಶಿಷ್ಟ ಜಾತಿಯ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ವಿವಿಧ ಜೀವನೋಪಾಯ ಚಟುವಟಿಕೆಗಳನ್ನು ಕೈಗೊಳ್ಳಲು ಸಮಾಜ ಕಲ್ಯಾಣ ಇಲಾಖೆಯ ಕೇಂದ್ರೀಯ ವಿಶೇಷ ಸಹಾಯಧನ ಕಾರ್ಯಕ್ರಮದಡಿ ಸಹಾಯಧನ (Subsidy)ಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ದೀನ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಸಾಂಸ್ಥಿಕ ಅಭಿವೃದ್ಧಿ ಉಪಘಟಕದಡಿ ಸಂಘದ ಪ್ರತಿ ಸದಸ್ಯರಿಗೆ ರೂ 50,000 ಸಹಾಯಧನ ನಿಗದಿಪಡಿಸಲಾಗಿದೆ.

ಅರ್ಜಿಯನ್ನು ಜುಲೈ 24ರ ಒಳಗಾಗಿ ಹರಿಹರ ನಗರಸಭೆಯ ಪೌರಾಯುಕ್ತರ ಕಚೇರಿಗೆ ಸಲ್ಲಿಸಬೇಕೆಂದು ಎಂದು ಹರಿಹರ ನಗರಸಭೆಯ ಪೌರಾಯುಕ್ತರು ಬಸವರಾಜಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Exit mobile version