SUDDIKSHANA KANNADA NEWS/DAVANAGERE/DATE:16_12_2025
ದಾವಣಗೆರೆ: ಮಲೇಬೆನ್ನೂರು ಪುರಸಭೆಯ ವ್ಯಾಪ್ತಿಯಲ್ಲಿನ ಬೀದಿ ನಾಯಿಗಳ ಪಾಲನೆ-ಪೋಷಣೆ ಮತ್ತು ಆರೈಕೆ-ಸಂರಕ್ಷಣಾ ಸೇವೆಗಳನ್ನು ಒದಗಿಸಲು ಸರ್ಕಾರೇತರ ಸಂಸ್ಥೆಗಳಿಂದ ಮತ್ತು ಬೀದಿ ನಾಯಿಗಳ ದತ್ತು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆಗಳು, ಸರ್ಕಾರಿ ಕಚೇರಿ, ಶಿಕ್ಷಣ-ಸಂಸ್ಥೆ, ಆಸ್ಪತ್ರೆ ಕ್ರೀಡಾಂಗಣ, ಬಸ್ ನಿಲ್ದಾಣದಂತಹ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಿ ಪೋಷಣೆ ಮಾಡಲು ಎಲ್ಲಾ ವಿವರಗಳೊಂದಿಗೆ ಮತ್ತು ಸಾರ್ವಜನಿಕರು ಕೂಡಾ ಬೀದಿ ನಾಯಿಗಳನ್ನು ದತ್ತು ತೆಗೆದುಕೊಂಡು ಪೋಷಣೆ ಮಾಡಲು ಡಿಸೆಂಬರ್ 22ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಶಾಖೆ ಸಂಪರ್ಕಿಸಬಹುದೆಂದು ಮಲೇಬೆನ್ನೂರು ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.





Leave a comment